ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿ

ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿ Taluka level talent fountain

                    ಧಾರವಾಡ 22: ಮಕ್ಕಳಲ್ಲಿ ಹುದುಗಿರುವ ಪ್ರತಿಭೆ ಅರಳಲು ಪ್ರತಿಭಾ ಕಾರಂಜಿ ಸೂಕ್ತ ವೇದಿಕೆಯಾಗಿದ್ದು, ಮಕ್ಕಳು ಕೂಡ ಉತ್ಸಾಹದಿಂದ ಪಾಲ್ಗೊಳ್ಳಬೇಕು ಎಂದು ಧಾರವಾಡ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣ ಸದಲಗಿ ಹೇಳಿದರು. 2025-26 ನೆಯ ಸಾಲಿನ ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ ಕಾರ್ಯಕ್ರಮವು ಧಾರವಾಡ ಗ್ರಾಮೀಣ ತಾಲೂಕಿನ  ನರೇಂದ್ರ  ಗ್ರಾಮದ  ದುಂಡಪ್ಪ ಲಕ್ಷ್ಮಪ್ಪ ನೇಗಿನಹಾಳ ಪ್ರೌಢಶಾಲೆ ಆವರಣದಲ್ಲಿ ಶಾಲಾ ಶಿಕ್ಷಣ ಇಲಾಖೆ ಹಾಗೂ ತಾಲೂಕಾ ಮಟ್ಟದ ಉದ್ಘಾಟನೆ ಮಾಡಿ ಮಾತನಾಡಿದರು. ಸರಕಾರ ಶಾಲಾ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಈ ಇಂತಹ ಕಾರ್ಯಕ್ರಮಗಳನ್ನು ಆಯೊಜಿಸಿದ್ದು, ಮಕ್ಕಳು ತಮ್ಮಲ್ಲಿರುವ  ಕಲೆ, ಸಾಹಿತ್ಯ, ಜಾನಪದ ಪ್ರಾಕಾರದ ಪ್ರತಿಭೆಯನ್ನು ತೋರಿ ಸಾಂಸ್ಕೃತಿಕವಾಗಿ ಮುಂದೆ ಬರಬೇಕು ಎಂದರು. ನರೇಂದ್ರ ಗ್ರಾಮ ಪಂಚಾಯತಿ ಅಧ್ಯಕ್ಷರಾದ ನಾಗಪ್ಪ ಹಟ್ಟಿಹೊಳಿ ಮಾತನಾಡುತ್ತಾ ಪ್ರತಿಭೆಗಳನ್ನು ಹೊರತರಲು ಪ್ರತಿಭಾ ಕಾರಂಜಿಗಳು ಪೂರಕವಾಗಿರುತ್ತವೆ. ಯಾವ ಮಕ್ಕಳಲ್ಲಿ ವಿಶೇಷ ಪ್ರತಿಭೆ ಇವೆಯೋ ಅಂಥ ಮಕ್ಕಳು ಸಾಧನೆ ಮಾಡುತ್ತಾರೆ ಎಂದು ಹೇಳಿದರು. 

                  ಡಿಎಲ್‌ಎನ್ ಅಧ್ಯಕ್ಷರಾದ  ಡಾ. ಎ.ಎಲ್ ನೇಗಿನಹಾಳ ಮಾತನಾಡುತ್ತಾ ಎಲ್ಲಾ ಸ್ಪರ್ಧೆಗಳಲ್ಲಿ ನ್ಯಾಯಯುತವಾಗಿ ತೀರ​‍್ು ನೀಡಿ ಶಾಲಾ ಮಕ್ಕಳ ಪ್ರತಿಭಾ ವಿಕಾಸಕ್ಕೆ ನಾಲ್ಕೂ ನಿಟ್ಟಿನಿಂದ ಪ್ರೋತ್ಸಾಹಿಸಬೇಕು ಎಂದರು. ಸೇವಾದಳದ ಅಧ್ಯಕ್ಷರಾದ ಮಂಜುನಾಥ ತಿರ್ಲಾಪೂರ ಮಾತನಾಡುತ್ತಾ ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸಬೇಕಾದ ಅಗತ್ಯವಿದೆ. ಆತ್ಮವಿಶ್ವಾಸ ಮೂಡಿಸಿದಲ್ಲಿ ಅವರಿಂದ ಹೆಚ್ಚಿನ ಸಾಧನೆ ನೀರೀಕ್ಷೆ ಮಾಡಬಹುದಾಗಿದೆ ಎಂದರು. 

                   ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಸಂಘದ ರಾಜಶೇಖರ ಹೊನ್ನಪ್ಪನವರ ಮಾತನಾಡುತ್ತಾವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸವನ್ನೇ ಕೇಂದ್ರೀಕರಿಸಿ ನಡೆಸಲಾಗುವ ಈ ಸ್ಪರ್ಧೆಗಳು ಸಂಪೂರ್ಣ ಪಾರದರ್ಶಕ ನೆಲೆಯಲ್ಲಿ ನಡೆಯುವಂತೆ,ಜೊತೆಗೆ ವಿದ್ಯಾರ್ಥಿಗಳಲ್ಲಿ ಹುದುಗಿರುವ ಸುಪ್ತ ಪ್ರತಿಭೆ ಗುರುತಿಸಲು ಸಾಧ್ಯ ಎಂದರು. ಸೆಲ್ಫಿ ಪಾಯಿಂಟ್ : ಆಗಮಿಸಿರುವ ವಿದ್ಯಾರ್ಥಿಗಳಿಗೆ, ಪಾಲಕರಿಗೆ ಮತ್ತು ಶಿಕ್ಷಕರಿಗೆ ಸೆಲ್ಫಿ ತೆಗೆದುಕೊಳ್ಳಲು ಅನುವಾಗುವಂತೆ ಸೆಲ್ಫಿ ಸ್ಟ್ಯಾಂಡ್ ಇರುವ ಎರಡು ಸೆಲ್ಫಿ ಪಾಯಿಂಟ್ ಮಾಡಲಾಗಿತ್ತು. ಇದು ಎಲ್ಲರ ವಾಟ್ಸಪ್‌ನ ಡಿಪಿ, ಸ್ಟೆಟಸ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ನಲ್ಲಿ ರಾರಾಜಿಸುತಿತ್ತು. 

                 ಶಿಕ್ಷಣ ಇಲಾಖೆಯ ಬಹುಮುಖ್ಯವಾದ ಹಾಗೂ ಮಕ್ಕಳ ಸ್ನೇಹಿ ಕಾರ್ಯಕ್ರಮವಾದ ಈ ಪ್ರತಿಭಾ ಕಾರಂಜಿ ಉತ್ಸವವು ವೈಭವಕ್ಕೆ ಹೆಸರಾದ ಧಾರವಾಡದಲ್ಲಿ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು. 16 ಕ್ಲಸ್ಟರಗಳಿಂದ ಸುಮಾರು 610 ವಿದ್ಯಾರ್ಥಿಗಳು, 150 ಮಂದಿ ಶಿಕ್ಷಕರು ಆಗಮಿಸಿದ್ದರು. ಪ್ರೀತಿಯಿಂದ ಕಾರ್ಯಕ್ರಮ ವೀಕ್ಷಣೆಗಾಗಿ ಸುಮಾರು 200 ಮಂದಿ ಪೋಷಕರು ದಿನಗಳವರೆಗೆ ನಡೆದ ಈ ಕಲೋತ್ಸವ ಜಾತ್ರೆಯಲ್ಲಿ ಭಾಗವಹಿಸಿದ್ದರು. 

                ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣ ಸದಲಗಿ, ನರೇಂದ್ರ ಗ್ರಾಮ ಪಂಚಾಯತಿ ಅಧ್ಯಕ್ಷರಾದ ನಾಗಪ್ಪ ಹಟ್ಟಿಹೊಳಿ,ಕೇತ್ರ ಸಮನ್ವಯಾಧಿಕಾರಿ ಕುಮಾರ ಕೆ ಎಫ್, ಡಿಎಲ್‌ಎನ್ ಅಧ್ಯಕ್ಷರಾದ  ಡಾಽಽ ಎ.ಎಲ್ ನೇಗಿನಹಾಳ, ಸೇವಾದಳದ ಅಧ್ಯಕ್ಷರಾದ ಮಂಜುನಾಥ ತಿರ್ಲಾಪೂರ,ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಸಂಘದ ರಾಜಶೇಖರ ಹೊನ್ನಪ್ಪನವರ, ತಾಲೂಕಾ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಸಂಘ ಅಧ್ಯಕ್ಷರಾದ ಅಜೀತ ದೇಸಾಯಿ, ಕಾರ್ಯದರ್ಶಿ ಎನ್ ಎಸ್ ಕಮ್ಮಾರ, ಗ್ರಾಮ ಪಂಚಾಯತಿ ಸದಸ್ಯರಾದ ಅಪ್ಪಣ್ಣ ಹಡಪದ, ಕಲ್ಮೇಶ್ ನಾಡಗೌಡ ದೇಸಾಯಿ, ಶಾಂತಮ್ಮ ತಿರ್ಲಾಪೂರ, ಪ್ರತಿಭಾ ಕಾರಂಜಿ ನೋಡಲ್ ಅಧಿಕಾರಿ ಶ್ರೀಕಾಂತ ಗೌಡ್ರ, ಡಿಎಲ್‌ಎನ್ ಶಾಲೆಯ ಮುಖ್ಯೋಪಾಧ್ಯಾಯರಾದ ಕುಮಾರಿ ಜೆ ಬಿ ಹೂಗಾರ, ಇ.ಸಿ.ಓ, ಬಿ.ಆರ್‌.ಪಿ, ಸಿ.ಆರ್‌.ಪಿ, ಬಿ.ಐ.ಇ.ಆರ್‌.ಟಿ,  ಮುಖ್ಯೋಪಾಧ್ಯಯರು, ನಿರ್ಣಾಯಕರು,ಶಿಕ್ಷಕರು, ಸ್ಪರ್ಧಾಳು ಉಪಸ್ಥಿತರಿದ್ದರು.