೫೩ ಲಕ್ಷ ಟನ್‌ಗಿಂತ ಅಧಿಕ ಆಹಾರ ಧಾನ್ಯಗಳ ಸಮರ್ಪಕ ನಿರ್ವಹಣೆ : ಕಡಾಡಿ ಶ್ಲಾಘನೆ

೫೩ ಲಕ್ಷ ಟನ್‌ಗಿಂತ ಅಧಿಕ ಆಹಾರ ಧಾನ್ಯಗಳ ಸಮರ್ಪಕ ನಿರ್ವಹಣೆ : ಕಡಾಡಿ ಶ್ಲಾಘನೆ Proper management of over 5.3 million tonnes of food grains: Kadadi praised

ಬೆಳಗಾವಿ ೨೬: ವಿವಿಧ ರಾಜ್ಯಗಳಿಂದ ಕರ್ನಾಟಕಕ್ಕೆ ತರಲಾದ ೫೪.೫೪ ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯಗಳ ಸುರಕ್ಷಿತ ಸಾಗಣೆ, ಶೂನ್ಯ ಹಾನಿ ಸಾಧನೆ ಹಾಗೂ ಅತ್ಯಂತ ಕಡಿಮೆ ಸಂಗ್ರಹಣಾ ಮತ್ತು ಸಾಗಾಣಿಕೆ ನಷ್ಟ ದಾಖಲಿಸಿರುವ ಹಿನ್ನೆಲೆಯಲ್ಲಿ ಭಾರತೀಯ ಆಹಾರ ನಿಗಮದ (ಎಫ್‌ಸಿಐ) ಕರ್ನಾಟಕ ಪ್ರದೇಶದ ಕಾರ್ಯನಿರ್ವಹಣೆಗೆ ರಾಜ್ಯ ಮಟ್ಟದ ಸಲಹಾ ಸಮಿತಿ (ಎಸ್‌ಎಲ್‌ಸಿ) ಅಧ್ಯಕ್ಷ ಹಾಗೂ ಮಾಜಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮೆಚ್ಚುಗೆ ವ್ಯಕ್ತಪಡಿಸಿದರು. 

ನಗರದ ಸರ್ಕಿಟ್ ಹೌಸ್‌ನಲ್ಲಿ ಶುಕ್ರವಾರ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಮಟ್ಟದ ಸಲಹಾ ಸಮಿತಿ ಸಭೆಯಲ್ಲಿ ಎಫ್‌ಸಿಐ ಕರ್ನಾಟಕ ಪ್ರದೇಶದ ೨೦೨೫-೨೬ನೇ ಸಾಲಿನ ಕಾರ್ಯಚಟುವಟಿಕೆಗಳ ಪರಿಶೀಲನೆ ನಡೆಸಲಾಗಿದೆ. ಆಹಾರ ಧಾನ್ಯಗಳ ಸಂಗ್ರಹಣೆ, ಸಾಗಣೆ ಹಾಗೂ ಗುಣಮಟ್ಟ ನಿರ್ವಹಣೆಯಲ್ಲಿ ಕರ್ನಾಟಕ ಪ್ರದೇಶವು ಕೇಂದ್ರ ಕಚೇರಿ ಹಾಗೂ ಆಹಾರ ಮತ್ತು ಸಾರ್ವಜನಿಕ ವಿತರಣೆ ಇಲಾಖೆಯ ನಿಗದಿತ ಮಾನದಂಡಗಳನ್ನು ಸಮರ್ಪಕವಾಗಿ ಪಾಲಿಸಿದೆ ಎಂದು ಹೇಳಿದರು. 

ಕಳೆದ ಹಣಕಾಸು ವರ್ಷದಲ್ಲಿ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ (Pಒಉಏಂಙ), ಪಿಎಂ ಪೋಷಣ್, ಸಮಗ್ರ ಶಿಶು ಅಭಿವೃದ್ಧಿ ಯೋಜನೆ (IಅಆS), ವಿದ್ಯಾರ್ಥಿ ವಸತಿ ನಿಲಯಗಳು ಸೇರಿದಂತೆ ವಿವಿಧ ಯೋಜನೆಗಳಡಿ ರಾಜ್ಯದಲ್ಲಿ ೫೨,೯೦,೭೩೭ ಮೆಟ್ರಿಕ್ ಟನ್ ಆಹಾರ ಧಾನ್ಯಗಳನ್ನು ವಿತರಿಸಲಾಗಿದೆ. ರಾಜ್ಯದ ಅಗತ್ಯತೆಗಳನ್ನು ಪೂರೈಸಲು ಹೆಚ್ಚುವರಿ ಉತ್ಪಾದನಾ ರಾಜ್ಯಗಳಿಂದ ೫೪,೫೩ ಮೆಟ್ರಿಕ್ ಟನ್ ಅಕ್ಕಿ ಮತ್ತು ಗೋಧಿಯನ್ನು ರೈಲ್ವೆ ಮೂಲಕ ಕರ್ನಾಟಕಕ್ಕೆ ತರಿಸಿ ಯಶಸ್ವಿಯಾಗಿ ಎಂದರು. 

ರಾಜ್ಯದಲ್ಲಿ ಎಫ್‌ಸಿಐ ೬೧ ಗೋದಾಮುಗಳ ಮೂಲಕ ೧೦.೬೮ ಲಕ್ಷ ಮೆಟ್ರಿಕ್ ಟನ್ ಸಂಗ್ರಹಣಾ ಸಾಮರ್ಥ್ಯ ಹೊಂದಿದ್ದು, ಸಾರ್ವಜನಿಕ-ಖಾಸಗಿ ಸಹಭಾಗಿತ್ವ (PPP) ಮಾದರಿಯಲ್ಲಿ ೨.೪೫ ಲಕ್ಷ ಮೆಟ್ರಿಕ್ ಟನ್ ಸಾಮರ್ಥ್ಯದ ಹೆಚ್ಚುವರಿ ಗೋದಾಮುಗಳ ನಿರ್ಮಾಣ ಪ್ರಗತಿಯಲ್ಲಿದೆ. ಕಳೆದ ಐದು ವರ್ಷಗಳಿಂದ ಬೃಹತ್ ಪ್ರಮಾಣದ ಆಹಾರ ಧಾನ್ಯಗಳನ್ನು ನಿರ್ವಹಿಸುತ್ತಿದ್ದರೂ ಗುಣಮಟ್ಟದಲ್ಲಿ ಯಾವುದೇ ಹಾನಿ ಅಥವಾ ಕೊರತೆ ದಾಖಲಾಗಿಲ್ಲ. ಸಂಗ್ರಹಣೆ ಹಾಗೂ ಸಾಗಾಣಿಕೆ ಹಂತಗಳಲ್ಲಿ ನಷ್ಟವನ್ನು ಕನಿಷ್ಠ ಮಟ್ಟಕ್ಕೆ ಇಳಿಸಿರುವುದು ಕರ್ನಾಟಕ ಪ್ರದೇಶದ ಕಾರ್ಯಕ್ಷಮತೆಯನ್ನು ಪ್ರತಿಬಿಂಬಿಸುತ್ತದೆ ಎಂದು ತಿಳಿಸಿದರು. 

ಆಹಾರ ಧಾನ್ಯಗಳ ಸುರಕ್ಷಿತ ನಿರ್ವಹಣೆ, ವೈಜ್ಞಾನಿಕ ಸಂಗ್ರಹಣೆ ಹಾಗೂ ಗುಣಮಟ್ಟದ ಕಟ್ಟುನಿಟ್ಟಿನ ಮೇಲ್ವಿಚಾರಣೆಯಿಂದ ರಾಜ್ಯದ ಸಾರ್ವಜನಿಕ ವಿತರಣಾ ವ್ಯವಸ್ಥೆಗೆ ನಿರಂತರ ಮತ್ತು ವಿಶ್ವಾಸಾರ್ಹ ಪೂರೈಕೆ ಸಾಧ್ಯವಾಗಿದೆ. ಈ ನಿಟ್ಟಿನಲ್ಲಿ ಎಫ್‌ಸಿಐ ಕರ್ನಾಟಕ ಪ್ರದೇಶದ ಕಾರ್ಯವೈಖರಿ ಇತರರಿಗೆ ಮಾದರಿಯಾಗಿದೆ ಎಂದು ಶ್ಲಾಘಿಸಿದರು. ಬೆಳಗಾವಿಯ ಬೆನಕನಹಳ್ಳಿಯಲ್ಲಿರುವ ಅಕ್ಕಿ ಸಂಗ್ರಹಣೆಯ ದಿಪೋ ದಕ್ಷಿಣ ಭಾರತದಲ್ಲಿಯೇ ಅತ್ಯುತ್ತಮಯಾಗಿದೆ ಎಂದು ಪ್ರಶಸ್ತಿ ಪಡೆದುಕೊಂಡಿದೆ, ನನ್ನ ಅವದಿಯಲ್ಲಿ ಉತ್ತಮವಾಗಿ ಆಡಳಿತವನ್ನು ಮಾಡಿದ್ದೇನೆ ಹಾಗೂ ಶೂನ್ಯ ಹಾನಿಯಲ್ಲಿ ಅಕ್ಕಿಸಂಗ್ರ ಮಾಡಲಾಗಿದೆ ಎಂದು ಹೇಳಿದರು.  

ರಾಜ್ಯ ಸರ್ಕಾರದಲ್ಲಿ ನೂತನವಾಗಿ ಮುಖ್ಯಮಂತ್ರಿಯಾಗಿ ಡಿಕೆ. ಶಿವಕುಮಾರ್ ಉತ್ತಮ ಆಡಳಿ ನಡೆಸುತ್ತಿದ್ದಾರೆ ಎಂದು ಕಂಡು ಬರುತ್ತಿದೆ ಆದರೆ, ರೈತರಿಗೆ ಅನ್ಯಾಯ ಮಾಡುತ್ತಿದ್ದೆ, ಈ ಭಾರಿ ರಾಜ್ಯದಲ್ಲಿ ಮಳೆಯ ಪ್ರಮಾಣ ಕಡಿಮೆ ಯಾಗುತ್ತಿದೆ. ಬೆಳೆದ ಕೆಲ ಬೆಳೆಗಳು ನಾಶ ವಾಗಿದೆ ಇನ್ನು ಕೆಲವು ನಾಶದ ಹಂತಕ್ಕೆ ಬಂದಿದೆ ಕೂಡಲೇ ಬೆಳೆ ಹಾನಿ ಪರಿಹಾರ ನೀಡಿಬೇಕೆಂದು ಡಿಕೆಶಿ ಸರ್ಕಾರಕ್ಕೆ ಒತ್ತಾಯಿಸಿದರು. 

ಇದಲ್ಲದೇ ಸಚಿವ ಪ್ರಿಯಂಕಾ ಖರ್ಗೆ ಅವರ ಮೇಲೆ ಇಡಿ ದಳಿ ಯಾಗಬಹುದು ಎನ್ನುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕುಂಬಳಕಾಯಿ ಕಳ್ಳ ಅಂದರೆ ಅವರ ಯಾಕೆ ಎದುರು ಮುಟ್ಟಿಕೊಂಡು ನೋಡಿಕೊಳ್ಳುತ್ತಿದ್ದಾರೆ. ಆರ್ ಎಸ್ ಎಸ್ ನನ್ನ ಮೇಲೆ ದಾಳಿ ಮಾಡಿಸುತ್ತದೆ ಎಂದು ಹೇಳಿಕೊಳ್ಳುತ್ತಿರುವ ಅವರಿಗೆ ಭ್ರಮೆ ಯಾಗಿದೆ ಹಾಗೂ ರಾಜ್ಯ ಹಾಗೂ ದೇಶದಿಂದ ಕಾಂಗ್ರೆಸ್ ಸಂಪೂರ್ಣವಾಗಿ ತೂಲಗುತ್ತದೆ ಎನ್ನುವ ಭಯ ಅವರನ್ನ ಕಾಡುತ್ತಿದೆ ಅದಕ್ಕೆ ಹುಚ್ಚರಂತೆ ಮಾಡನಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು. 

ಇಂದಿನ ಪತ್ರಿಕಾಗೋಷ್ಠಿಯಲ್ಲಿ ಆಹಾರ ನಿಗಮದ ಪ್ರಧಾನ ವ್ಯವಸ್ಥಾಪ ಬಿ. ಓ.ಮಹೇಶ್ವರಪ್ಪ, ಸಹಾಯಕ ಪ್ರಧಾನ ವ್ಯವಸ್ಥಾಪ ರಮೇಶ ನಾಯಕ, ಸಲಹಾ ಸಮಿತಿ ಸದಸ್ಯರಾದ ಶ್ರೀಕಾಂತ ಕೌಜಲಗಿ, ಬಸವರಾಜ ಗಾಡವಿ, ಸುನಿತಾ ಜಗದೀಶ್, ಶಂಕರಣ್ಣ ಮುನ್ನೋಳಿ, ಶಶಿಧರ, ಮಂಜುನಾಥ ಸೇರಿದಂತೆ ನಿಗಮದ ಹಿರಿಯ ಅಧಿಕಾರಿಗಳು, ರಾಜ್ಯ ಸರ್ಕಾರದ ಆಹಾರ ಇಲಾಖೆಯ ಪ್ರತಿನಿಧಿಗಳು ಹಾಗೂ ಕೇಂದ್ರ ಉಗ್ರಾಣ ನಿಗಮದ ಅಧಿಕಾರಿಗಳು ಉಪಸ್ಥಿತರಿದ್ದರು.