ನಾವೆಲ್ಲಾ ಮನುಷ್ಯರು ,ನಾವೆಲ್ಲಾ ಸಮಾನರು: ಸಂಧ್ಯಾ ಬಾಡಕರ್
Taluka Balabhavan Society Awareness Program
ತಾಲೂಕಾ ಬಾಲಭವನ ಸೊಸೈಟಿ ಅರಿವು ಕಾರ್ಯಕ್ರಮ
ಕಾರವಾರ 24 : ಮಕ್ಕಳು ಎಲ್ಲರ ಜೊತೆ ಬೆರೆತು , ನಾವೆಲ್ಲಾ ಒಂದೇ , ನಾವೆಲ್ಲಾ ಸಮಾನ ಮನುಷ್ಯರು ಎಂಬ ಭಾವನೆ ಬೆಳೆಸಿಕೊಳ್ಳಬೇಕು ಎಂದುನಗರಸಭೆ ಸದಸ್ಯೆ ಸಂಧ್ಯಾ ಬಾಡಕರ ಕರೆ ನೀಡಿದರು.ಅವರು ಕಾರವಾರದ ಸುಮತಿ ದಾಮ್ಲೆ ಹೈಸ್ಕೂಲ್‌ನಲ್ಲಿ ಇತ್ತೀಚೆಗೆ ನಡೆದ ಬಾಲಭವನ ಸೊಸೈಟಿ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ತಾಲೂಕು ಬಾಲಭವನ ಸೊಸೈಟಿಯ ಸದಸ್ಯ ಕಾರ್ಯದರ್ಶಿ ಹಾಗೂ ಶಿಶು ಅಭಿವೃದ್ದಿ ಯೋಜನಾಧಿಕಾರಿ ಶೋಭಾ. ಡಿ ಮುಕಟಗಾರ ಮಾತನಾಡಿ, ಇಂದಿನ ಯುಗ ಸ್ಫರ್ಧಾತ್ಮಕ ಯುಗವಾಗಿದ್ದು, ಮಕ್ಕಳು ಸ್ಫರ್ಧಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸುವುದು ಅತಿ ಮುಖ್ಯ. ಆಗ ಮಾತ್ರ ನಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಹಾಗೂ ಭವಿಷ್ಯವನ್ನು ರೂಪಿಸಿಕೊಳ್ಳಲು ಅನುಕೂಲವಾಗುತ್ತದೆ ಎಂದರು .ಬಾಲ್ಯವಿವಾಹ ಹಾಗೂ ಫೋಕ್ಸೊ ಘಟನೆಗಳನ್ನು ನಡೆದ್ದಲ್ಲಿ ನಮ್ಮ ಇಲಾಖೆಯ ಗಮನಕ್ಕೆ ತನ್ನಿ . ಹಾಗೂ ಶಿಕ್ಷಕರಿಗೆ, ಪಾಲಕರಿಗೆ ಯಾವುದೇ ಮುಚ್ಚಮರೆ ಇಲ್ಲದೇ ತಿಳಿಸಬೇಕು ಎಂದರು.
ಮಕ್ಕಳು ತಮ್ಮ ಉತ್ತಮ ಭವಿಷ್ಯಕ್ಕಾಗಿ ವಿದ್ಯಾಭ್ಯಾಸ ಅಷ್ಟೇ ಅಲ್ಲದೇ , ಉತ್ತಮ ಪೌಷ್ಠಿಕ ಆಹಾರ ಸೇವಿಸಬೇಕು, ಎಲ್ಲಾ ಕ್ಷೇತ್ರದಲ್ಲೂ ಭಾಗವಹಿಸಿ ಮುಂದೆ ಬರಬೇಕು ಎಂದರು.ಕಾರ್ಯಕ್ರಮದಲ್ಲಿ ಸುಮತಿ ದಾಮ್ಲೆ ಹೈಸ್ಕೂಲ್ ಮುಖ್ಯೋಪದ್ಯಾಯ ಅರುಣಾ ರಾಣೆ, ವಿದ್ಯಾರ್ಥಿಗಳು, ಶಿಕ್ಷಕರು, ಮೇಲ್ವಿಚಾರಕಿಯರು ಉಪಸ್ಥಿತರಿದ್ದರು.
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು 