ಇಂದಿನ ಮಕ್ಕಳು ಸರ್ವಜ್ಞರನ್ನು ಅರಿಯಲಿ: ತಹಶೀಲ್ದಾರ ಜೆ.ಬಿ.ಮಜ್ಜಗಿ
Taluk administration celebrates saint poet Sarvajna Jayanti
ಲೋಕದರ್ಶನ ವರದಿ
ತಾಲೂಕು ಆಡಳಿತದಿಂದ ಸಂತ ಕವಿ ಸರ್ವಜ್ಞ ಜಯಂತಿ ಆಚರಣೆ
ಹುಬ್ಬಳ್ಳಿ ಫೆ.20: ಕವಿ ಸರ್ವಜ್ಞ ಅವರು ತಮ್ಮ ತ್ರಿಪದಿಗಳ ಮೂಲಕ ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದಿದರು. ಇಂದಿನ ಮಕ್ಕಳಿಗೆ ಸರ್ವಜ್ಞರ ಬಗ್ಗೆ ತಿಳಿ ಹೇಳಬೇಕು ಎಂದು ಹುಬ್ಬಳ್ಳಿ ಗ್ರಾಮೀಣ ತಹಶೀಲ್ದಾರ ಜೆ.ಬಿ.ಮಜ್ಜಗಿ ಹೇಳಿದರು.
ಇಂದು ತಾಲೂಕು ಆಡಳಿತ ಸೌಧದ ತಹಶೀಲ್ದಾರ ಕಾರ್ಯಾಲಯದ ಸಭಾಂಗಣದಲ್ಲಿ ಹುಬ್ಬಳ್ಳಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಸಂತ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ವಜ್ಞ ಅವರ ಬಗ್ಗೆ ಸಮಾಜದ ಎಲ್ಲ ವರ್ಗದ ಜನರಿಗೆ ತಿಳಿಸಬೇಕು. ಅವರ ತ್ರಿಪದಿಗಳ ಸಾರವನ್ನು ತಿಳಿದು ನಡೆಯಬೇಕು. ಅವರನ್ನು ಒಂದು ವರ್ಗಕ್ಕೆ ಸಿಮೀತಗೊಳಿಸದೇ, ಎಲ್ಲ ವರ್ಗದವರಿಗೆ ತಲುಪುವ ಕೆಲಸ ಕಾರ್ಯಗಳಾಗಲಿ ಎಂದು ಅವರು ತಿಳಿಸಿದರು.
ಶಾಲಿನಿ ರುದ್ರಮುನಿ ಮಾತನಾಡಿ, ವಚನ ಸಾಹಿತ್ಯ ಚಳುವಳಿಯಲ್ಲಿ ಮುಂಚೂಣಿಯಲ್ಲಿದ್ದವರು ಸರ್ವಜ್ಞ. ಜನಪರರ ಮಾತಿಗೆ ಬೆಲೆ ಕೊಡುವ ವ್ಯಕ್ತಿಯಾಗಿದ್ದರು. ಸರ್ವಜ್ಞರ ತ್ರಿಪದಿಗಳನ್ನು ಅಧ್ಯಯನ ಮಾಡುವುದರಿಂದ ಜೀವನದ ಬಗ್ಗೆ ಅರಿತುಕೊಳ್ಳಬಹುದು. ಸಾಮಾನ್ಯರಿಗೆ ಅರ್ಥವಾಗುವ ನಿಟ್ಟಿನಲ್ಲಿ ತಮ್ಮ ಸರಳ ಹಾಗೂ ಸುಲಲಿತ ಭಾಷೆಯಲ್ಲಿ ತ್ರಿಪದಿಗಳನ್ನು ಸರ್ವಜ್ಞ ಅವರು ರಚಿಸಿದರು. ಪ್ರತಿನಿತ್ಯ ಮಕ್ಕಳಿಗೆ ತ್ರಿಪದಿ, ವಚನಗಳನ್ನು ಹೇಳಿಕೊಡಬೇಕಿದೆ. ಸಮಾಜದಲ್ಲಿನ ಅಂಕುಡೊಂಕುಗಳನ್ನು ತಮ್ಮ ತ್ರಿಪದಿಗಳ ಮೂಲಕ ಬಣ್ಣಿಸಿದ್ದಾರೆ. ಅವರ ತ್ರಿಪದಿಗಳಲ್ಲಿ ನೀತಿಗಳು ಇರುತ್ತಿದ್ದವು. ಅವರ ಅಪಾರ ಜ್ಞಾನ ಪರಂಪರೆ ಇಂದಿಗೂ ಅಚ್ಚರಿಗೊಳಿಸುವಂತಹದ್ದಾಗಿದೆ ಎಂದು ಅವರು ಹೇಳಿದರು.
ನಿವೃತ್ತ ಉಪನ್ಯಾಸಕರಾದ ನಾಗಪ್ಪ ಕುಂಬಾರ್ ಮಾತನಾಡಿ, ಸಂತ ಕವಿ ಸರ್ವಜ್ಞ ಅವರು ಕನ್ನಡ ಸಾಹಿತ್ಯ ಲೋಕದಲ್ಲಿ ಧ್ರುವತಾರೆಯಾಗಿದ್ದರು. ರನ್ನ, ಜನ್ನ, ಪಂಪ, ಕುಮಾರವ್ಯಾಸ, ಹರಿಹರ ಮುಂತಾದ ರಸ ಕವಿಗಳು ಇದ್ದಾರೆ. ಇನ್ನೊಂದಡೆಗೆ ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ ದೀನದಲಿತರ ಅಷ್ಟೋತ್ತರಗಳಿಗೆ ಸ್ಪಂದಿಸಿದವರು. ಸರ್ವಜ್ಞರು ಮಹಾಕಾವ್ಯ ಬರೆಯದಿದ್ದರೂ ಶ್ರೇಷ್ಠ ಕವಿ ಎನಿಸಿಕೊಂಡಿದ್ದಾರೆ. ಆಡು ಮುಟ್ಟಿದ ಸೊಪ್ಪಿಲ್ಲ ಸರ್ವಜ್ಞ ತಿಳಿಸದ ವಿಷಯವಿಲ್ಲ ಎಂದರು.
ಉಪನ್ಯಾಸಕರಾದ ಬಸವರಾಜ್ ಹೊಸಮನಿ ಮಾತನಾಡಿ, ಸರ್ವಜ್ಞರು ತ್ರಿಪದಿ ತ್ರಿವಿಕ್ರಮರಾಗಿದ್ದು, ಜ್ಞಾನದ ಮಹತ್ವವನ್ನು ಜಗತ್ತಿಗೆ ಸಾರಿದವರು. ಕುಂಬಾರ ಸಮಾಜದ ಆರಾಧ್ಯ ದೈವ ಕುಂಬಾರ ಕುಂಡಯ್ಯ. ಇಂದಿಗೂ ವಿಶೇಷ ಸ್ಥಾನವನ್ನು ಸರ್ವಜ್ಞರು ಹೊಂದಿದ್ದಾರೆ. ಬುದ್ಧನು ಏಷ್ಯಾವನ್ನು ಬೆಳಗಿದರೆ, ಸರ್ವಜ್ಞರು ಕರ್ನಾಟಕವನ್ನು ಬೆಳಗಿಸಿದವರು. ಎಲ್ಲವನ್ನು ವಿಷಯವನ್ನು ಬಲ್ಲವರಾಗಿದ್ದರು ಸರ್ವಜ್ಞರು. ಸರ್ವಜ್ಞ ಅವರು ಜನಸಾಮಾನ್ಯರ ಕವಿಯಾಗಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನೃತ್ಯ ಪ್ರದರ್ಶಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರಾದ ಬಸವರಾಜಪ್ಪ, ನಾಗರತ್ನ ಕುಂಬಾರ್, ಚಂದ್ರಶೇಖರ್ ಕುಂಬಾರ್, ಎಂ.ಎಂ.ಗೌಡರ, ಎಲ್.ಸಿ.ಹೊಸಮನಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಾರ್ವಜನಿಕರು ಇತರರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 