ಆಲಮೇಲದಲ್ಲಿ ತಾಲೂಕ ಆಡಳಿತದಿಂದ ಅದ್ದೂರಿ ಕರ್ನಾಟಕ ರಾಜ್ಯೋತ್ಸವ ಆಚರಣೆ

 ಆಲಮೇಲದಲ್ಲಿ ತಾಲೂಕ ಆಡಳಿತದಿಂದ ಅದ್ದೂರಿ ಕರ್ನಾಟಕ ರಾಜ್ಯೋತ್ಸವ ಆಚರಣೆ Taluk administration celebrates Karnataka Rajyotsava on a grand scale in Alamela

ಲೋಕದರ್ಶನ ವರದಿ 

  ಆಲಮೇಲದಲ್ಲಿ ತಾಲೂಕ ಆಡಳಿತದಿಂದ ಅದ್ದೂರಿ ಕರ್ನಾಟಕ ರಾಜ್ಯೋತ್ಸವ ಆಚರಣೆ 

ಆಲಮೇಲ 02:  ಕನ್ನಡ ಭಾಷೆ,ನೆಲ,ಜಲದ ವಿಚಾರಗಳು ನಮ್ಮ ಆತ್ಮ ಗೌರವದ ಪ್ರತೀಕಗಳು, ಅವುಗಳ ಮೇಲೆ ಅನ್ಯರ ದಾಳಿಯನ್ನು ಸಹಿಸಿಕೊಳ್ಳುವದಿಲ್ಲ ಎಂದು ಮೋರಟಗಿ ಕಲ್ಪವೃಕ್ಷ ಪಪೂ ಮಹಾವಿದ್ಯಾಲಯದ ಪ್ರೊ ಸಿ.ಎಸ್‌.ಆನಂದ ಹೇಳಿದರು. 

ಅವರು ಆಲಮೇಲ ಪಟ್ಟಣದಲ್ಲಿ ತಾಲ್ಲೂಕು ಆಡಳಿತ ಹಮ್ಮಿಕೊಂಡಿದ್ದ 70ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಭಾಗವಹಿಸಿ ಮಾತನಾಡಿದ ಅವರು ಕನ್ನಡದ ಗೌರವವನ್ನು ಸದಾ ಕಾಪಾಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯೂ ಆಗಿದ್ದು, ಕನ್ನಡದ ಗತವೈಭವವನ್ನು ಕಾಣಬೇಕಿದೆ ಎಂದರು. 


ಪಟ್ಟಣ ಪಂಚಾಯತಿ ಅಧ್ಯಕ್ಷ ಸಾಧಿಕ ಸುಂಬಡ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ತಹಸೀಲ್ದಾರ ಎಸ್‌.ಎಸ್‌.ನಾಯಕಲಮಠ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಪಂಚಾಯತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ರಾಮು,ಜಿ ಅಗ್ನಿ , ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಸುರೇಶ ನಾಯಕ, ಎಸ್‌.ಐ ಅರವಿಂದ ಅಂಗಡಿ, ತಾಲ್ಲೂಕ ಗ್ಯಾರಂಟಿ ಸಮಿತಿಯ ಅಧ್ಯಕ್ಷ ಅಶೋಕ ಕೊಳಾರಿ,ತಾಲೂಕ ನೌಕರರ ಸಂಘದ ಅಧ್ಯಕ್ಷ ರವಿ ಬಿರಾದಾರ,ಎಪಿಎಮ್‌ಸಿ ಅಧ್ಯಕ್ಷ ಬಸವರಾಜ ಬಾಗೇವಾಡಿ,  ವೇದಿಕೆಯಲ್ಲಿದ್ದರು. ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶಿವಶರಣ ಗುಂದಗಿ ಮಾತನಾಡಿದರು. 


ಸಾಧಕರಿಗೆ ಗೌರವ : ತಾಲ್ಲೂಕು ಆಡಳಿತವು ವಿವಿಧ ಕ್ಷೇತ್ರಗಳಲ್ಲಿ ವಿಶೇಷ  ಸಾಧನೆ ಮಾಡಿದ ಹತ್ತು ಜನ ಸಾಧಕರನ್ನು ಸನ್ಮಾನಿಸಿತು. ಮಾಧ್ಯಮ ಕ್ಷೇತ್ರದಿಂದ ದೇವಣಗಾಂವ ಗ್ರಾಮದ ಗುರು ಹಿರೇಮಠ,ಸೇರಿ ಒಟ್ಟು  ಹತ್ತು ಸಾಧಕರನ್ನು ವೇದಿಕೆ ಮುಖಾಂತರ ಸನ್ಮಾನಿಸಲಾಯಿತು. ಕಸಾಪ ಗೌರವ ಕಾರ್ಯದರ್ಶಿ ಶ್ರೀಶೈಲ ಮಠಪತಿ ನಿರೂಪಿಸಿದರು. ಅಪ್ಪು ಶೆಟ್ಟಿ ವಂದಿಸಿದರು. 


ಭವ್ಯ ಮೆರವಣಿಗೆ : ನಾಡದೇವಿ ಭವನೇಶ್ವರಿದೇವಿ ಭಾವಚಿತ್ರದ ಮೆರವಣಿಗೆ ಅದ್ದೂರಿಯಾಗಿ ಬೆಳಿಗ್ಗೆ ತಹಶೀಲ್ದಾರ ಕಾರ್ಯಾಲಯದಿಂದ ಟ್ರ್ಯಾಕ್ಟರನಲ್ಲಿ  ಪ್ರಾರಂಭವಾಗಿ, ಬಸ್ ನಿಲ್ದಾಣದ ಪಕ್ಕಕೆ ಇರುವ ಕನ್ನಡಾಂಬೆ ವೃತ್ತಕ್ಕೆ ತೆರಳಿ ವಿವಿಧ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು ಹಾಗೂ ತಾಲೂಕಿನ ಎಲ್ಲ ಅಧಿಕಾರಿಗಳು ಹಾಗೂ ಗಣ್ಯರು ಧ್ವಜಾರೋಹಣ ನಡೆಸಿದರು. ನಂತರ  ತಾಲೂಕಿನ ಮಾಲಕ ಹಾಗೂ ಚಾಲಕ ಸಂಘದ ಪದಾಧಿಕಾರಿಗಳು ತಮ್ಮ ಎಲ್ಲ ವಾಹನಗಳನ್ನು ಶೃಂಗರಿಸಿ ವಿವಿಧ ಕಲಾತಂಡ, ಶಾಲಾ ಕಾಲೇಜು ವಿದ್ಯಾರ್ಥಿಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ  ಕನ್ನಡದ ಹಾಡುಗಳಿಗೆ  ಹೆಜ್ಜೆಹಾಕಿದ್ದು ವಿಶೇಷವಾಗಿತ್ತು.ಕಂದಾಯ ಅಧಿಕಾರಿ ಎಮ್‌.ಎ.ಅವರಾದಿ, ಗ್ರಾಮ ಆಡಳಿತ ಅಧಿಕಾರಿ ವಿನೋದ ಬಿಸೇ, ಯಮನೂರ ಗೊಂದಳಿ,ಮಡಿವಾಳಪ್ಪ ಬಿರಾದಾರ, ತಹಸೀಲ್ದಾರ ಎಸ್‌.ಎಸ್‌.ನಾಯಕಲಮಠ, ಕಂದಾಯ ನೀರೀಕ್ಷಕ ಎ.ಎಂ.ಅತ್ತಾರ,ಮುಖಂಡರಾದ ರಮೇಶ ಬಂಟನೂರ,ಪ್ರಭು ವಾಲೀಕಾರ,ಬಸವರಾಜ ತೆಲ್ಲೂರ, ಅಂಬಾದಾಸ ಬಿಳಂಬಗಿ,ಗಂಗಪ್ಪ ಭೋವಿ, ಹಸನಸಾಬ ಮುಲ್ಲಾ, ಭಾಗಣ್ಣಾ ಗುರಕಾರ, ಕನಸೇ ಜಿಲ್ಲಾ ಅಧ್ಯಕ್ಷ ಭೀಮಾಶಂಕರ ಕೋಟಾರಗಸ್ತಿ, ಕರವೇ ತಾಲ್ಲೂಕು ಅಧ್ಯಕ್ಷ ಶಶಿಧರ ಗಣಿಹಾರ, ಸೈಪನ ಜಮಾದಾರ,ಬುಡ್ಡಾ ಕಣ್ಣಿ, ಮಾಲಾಲಿ ಕಮಲಾಪೂರ,ಆದಮ ಕಣ್ಣಿ, ಬಶೀರ ತಾಂಬೊಳ್ಳಿ,ದಸ್ತಗೀರ ವಡಗೇರಿ ಹಾಗೂ ಪೊಲೀಸ ಸಿಬ್ಬಂದಿಗಳು  ಹಾಗೂ ವಿವಿಧ ಶಿಕ್ಷಣ ಸಂಸ್ಥೆಗಳ ಗುರುವೃಂದ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.