ಮೂಡಲಗಿ 04: ಸಮೀಪದ ಹಳ್ಳೂರ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮೂಡಲಗಿ ಇವರಿಂದ ನೆರೆ ಪರಿಹಾರ ಹಾಗೂ ಸಾಲ ಮನ್ನಾ ಮತ್ತು ಪ್ರವಾಹ ಎದುರಾಗಿ ಹಾನಿಯಾದ ಕಬ್ಬಿನ ಬೆಳೆಗೆ ಸೂಕ್ತವಾದ ಬೆಲೆ ನಿಗಧಿ ಮಾಡುವಂತೆ ಸಿಎಂ ಯಡಿಯೂರಪ್ಪ ಅವರಿಗೆ ಮನವಿ ಪತ್ರ ಕೊಡಲು ಕಾಯುತ್ತಿದ್ದ ವೇಳೆ ಪೋಲಿಸ್ ಅಧಿಕಾರಿಗಳು ಹಾಗೂ ರೈತ ಸಂಘದ ಮುಖಂಡರ ನಡುವೆ ಮಾತಿನ ವಾಗ್ವಾದಗಳು ನಡೆದ ಘಟನೆ ಶುಕ್ರವಾರ ಜರುಗಿತು.
ಸಿಎಂ ಯಡಿಯೂರಪ್ಪ ಅವರು ದರೂರಿನಿಂದ ಮುಗಳಖೋಡ ಕ್ಷೇತ್ರಕ್ಕೆ ಭೇಟಿ ನೀಡಿ. ಹಳ್ಳೂರ ಗ್ರಾಮದ ಮಾರ್ಗವಾಗಿ ಬಾಗಲಕೋಟಿ ಹೋಗುವ ಮಾರ್ಗ ಮಧ್ಯೆ ರೈತ ಸಂಘದವರು ಮನವಿ ಕೊಡಲು ಕಾಯುತ್ತಿದ್ದರು. ಆದರೆ ಇದಕ್ಕೆ ಪೋಲಿಸ್ ಅಧಿಕಾಗಳು ರೈತರನ್ನು ರಸ್ತೆಗೆ ಹೋಗದಂತೆ ರೈತ ಸಂಘದ ಮುಖಂಡರನ್ನು ತಡೆದರು. ಈ ನಡುವೆ ಪೋಲಿಸ್ ಅಧಿಕಾರಿಗಳಿಗೆ ಹಾಗೂ ರೈತರಿಗೆ ಮಾತಿನ ವಾಗ್ವಾದ ನಡೆಯಿತು. ಈ ಸಮಯದಲ್ಲಿ ರೈತ ಸಂಘದ ಸಂಚಾಲಕ ಶ್ರೀಶೈಲ ಅಂಗಡಿ ಮಾತನಾಢಿ, ಕಳೆದ ದಿನಗಳಲ್ಲಿ ಉತ್ತರ ಕರ್ನಾಟಕದಲ್ಲಿ ಪ್ರವಾಹ ಎದುರಗಿ ಸಾಕಷ್ಟು ಹಾನಿಯಗಿದ್ದು. ಮನೆ, ಮಠ, ಆಸ್ತಿ ಎಲ್ಲರನ್ನೂ ಕಳೆದುಕೊಂಡು ಸಂತ್ರಸ್ತರಾದವರು ಸಂಕಷ್ಟಕ್ಕೀಡಾಗಿ ಸರ್ಕಾರದ ಮುಂದೆ ನೆರವಿನ ಹಸ್ತಚಾಚಿದರು ಏನೂ ಪ್ರಯೋಜನೆಯಾಗುತ್ತಿಲ್ಲಾ. ಆದರಿಂದ ಸಿಎಂ ಅವರಿಗೆ ಮನವಿ ಪತ್ರ ನೀಡಲು ಅವಕಾಶ ಮಾಡಿಕೊಡದ ಪೋಲಿಸ್ ಅಧಿಕಾರಿಗಳ ವಿರುದ್ದ ಆಕ್ರೋಶ ಹೋರಹಾಕಿದ್ದರು. ಪ್ರವಾಹ ಎದುರಾಗಿ ಕೆಲವು ದಿನಗಳು ಕಳೆದರು ಯಾವುದೇ ಸೂಕ್ತವಾದ ಪರಿಹಾರ ಸಿಕ್ಕಿಲ್ಲಾ. ಕೇಂದ್ರ ಸರ್ಕಾರವು ಕೂಡ ಪರಿಹಾರ ಘೋಷಣೆ ಮಾಡಿಲ್ಲ. ಹೀಗಿರುವಾಗ ಸಂತ್ರಸ್ತರು ಇನ್ನೂ ಎಷ್ಟು ದಿನ ಹೀಗೆ ನರಳಬೇಕು ಎಂದು ಸಿಎಂ ವಿರುದ್ದ ಆಕ್ರೋಶ ವ್ತಕ್ತಪಡಿಸಿದ್ದರು.
ನೆರೆ ಪರಿಹಾರ ಮತ್ತು ಕಬ್ಬಿನ ಬೆಳೆಗೆ ನಿಗಧಿತ ಬೆಲೆ ಘೊಷಣೆ ಮಾಡಿ ಎಂದು ಸರ್ಕಾರದ ವಿರೋಧ ಹೋರಾಟ ಮಾಢಿದ್ದಾರೆ ರೈತರ ಮೇಲೆ ಕೇಸ್ ದಾಖಲು ಮಾಡಿ ಜೈಲಿಗೆ ಹಾಕುತ್ತಾರೆ. ಅದೇ ರಾಜಕಾರಣಿಗಳು ಹಹರಣ ಮಾಡಿದರು ಅವರು ವಿರೋಧ ಕೇಸ್ ದಾಖಲು ಆಗುವುದಿಲ್ಲಾ. ದೇಶಕ್ಕೆ ಅನ್ನ ಕೊಡುವ ರೈತನಿಗೆ ಆದ ಅನ್ಯಾಯದ ವಿರೋಧ ಹೋರಾಟ ಮಾಡಿದರೆ ರೈತರ ಮೇಲೆ ರಾಜಕಾರಣಿಗಳು ಪೋಲಿಸ್ ಅಧಿಕಾರಿಗಳ ಮೂಲಕ ರೈತರನ್ನು ಹತ್ತಿಕ್ಕುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ರಾಜಕಾರಣಿಗಳಿಗೆ ಹಾಗೂ ಪೋಲಿಸ್ ಅಧಿಕಾರಿಗಳ ವಿರುದ್ದ ರೈತ ಸಂಘದವರು ಆಕ್ರೋಶ ವ್ಯಕ್ತಪಡಿಸಿದರು.
ಈರಣ್ಣ ಸಸಾಲಟ್ಟಿ, ರವೀಂದ್ರ ನುಚ್ಚುಂಡಿ, ನಂದ್ಯಪ್ಪ ನೇಸೂರ, ಕುಮಾರ ಮರಡಿ, ಗೋಂವಿಧ ತುಕ್ಕಾನಟ್ಟಿ, ಶಿವಲಿಂಗ ಮೂಲಿಮನಿ, ಪದಮ್ಮಣ ಉಂದ್ರಿ, ಪ್ರಕಾಶ ತೇರದಾಳ ಹಾಗೂ ಮುಂತಾದವರು ಇದ್ದರು. ಪತ್ರಕರ್ತನ ಮೇಲೆ ಪೋಲಿಸ್ ಅಧಿಕಾರಿ ದಬ್ಬಾಳಿಕೆ: ರೈತ ಸಂಘದ ಮುಖಂಡರು ಹಾಗೂ ಪೋಲಿಸ್ ಅಧಿಕಾರಿಗಳ ಮಧ್ಯೆ ಮಾತಿನ ವಾಗ್ವಾದ ನಡೆಯುತ್ತಿರುವ ಸಂದರ್ಭದಲ್ಲಿ ಪತ್ರಕರ್ತ ಆ ದೃಶ್ಯಗಳನ್ನು ವಿಡಿಯೋ ಮಾಡುತ್ತಿದ ವೇಳೆ ಹಿರಿಯ ಪೋಲಿಸ್ ಅಧಿಕಾರಿ ಆ ದೃಶ್ಯಗಳನ್ನು ವಿಡಿಯೋ ಮಾಡದಂತೆ ಪತ್ರಕರ್ತನ ಮೇಲೆ ದಬ್ಬಾಳಿಕೆ ಮಾಡಿದ ಘಟನೆ ನಡೆದಿದೆ.
ಇದನ್ನು ನೋಡಿದ ರೈತ ಸಂಘದ ಮುಖಂಡರು ತಮ್ಮ ಹೋರಾಟ ಬಿಟ್ಟು. ಆ ಪತ್ರಕರ್ತನ ಬೆಂಬಲಕ್ಕೆ ನಿಂತು. ಪೋಲಿಸ್ ಅಧಿಕಾರಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಹೀಗೆ ಕಾರ್ಯನಿರತ ಪತ್ರಕರ್ತರ ಮೇಲೆ ಪೋಲಿಸ್ ಅಧಿಕಾರಿಗಳು ಮೇಲಿಂದ ಮೇಲೆ ದಬ್ಬಾಳಿಕೆ ನಡೆಯುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ. ಪತ್ರಕರ್ತರು ಸಮಾಜದ ಅ0ಕುಡೊಂಕುಗಳನ್ನು ತಿದ್ದುವ ಕಾರ್ಯ ಮಾಡುತ್ತಿರುತ್ತಾರೆ. ಪತ್ರಕರ್ತರ ಅಡ್ಡಿಪಡಿಸುತ್ತಿರುವುದು ಬೇಸರದ ಸಂಗತಿಯಾಗಿದೆ.