ತಾಳಿಕೋಟೆ; ಪುರಸಭೆ ಚುನಾವಣೆ 64 ಜನ ಕಣದಲ್ಲಿ

ಲೋಕದರ್ಶನ ವರದಿ

ತಾಳಿಕೋಟೆ 21: ಪಟ್ಟಣದ ಪುರಸಭೆ ಚುನಾವಣೆಗೆ 23 ವಾಡರ್ಿಗೆ ಸಂಬಂದಿಸಿ ಸೋಮವಾರರಂದು ನಡೆದ ನಾಮಪತ್ರ ಹಿಂತೆಗೆದುಕೊಳ್ಳುವ ಕೊನೆಯ ದಿನದಲ್ಲಿ ಸ್ಪರ್ಧಾಕಣದಲ್ಲಿ 84 ಜನರಲ್ಲಿ ಒಟ್ಟು 20 ಜನರು ನಾಮಪತ್ರಗಳನ್ನು ಹಿಂತೆಗೆದುಕೊಂಡಿದ್ದು ಇದರಲ್ಲಿ ಎರಡು ವಾರ್ಡಗಳಲ್ಲಿ  ಇಬ್ಬರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆಂದು ಚುನಾವಣಾಧಿಕಾರಿ ತಹಶಿಲ್ದಾರ ನಿಂಗಪ್ಪ ತಿಳಿಸಿದ್ದಾರೆ.

ವಾರ್ಡ ನಂ. 19ಕ್ಕೆ ಅಕ್ಕಮಹಾದೇವಿ ಕಟ್ಟಿಮನಿ ಹಾಗೂ ಗಾಯಿತ್ರಿ ಕಟ್ಟಿಮನಿ ನಾಮಪತ್ರ ಸಲ್ಲಿಸಿದ್ದರು ಆದರೆ ಕೊನೆಗಳಿಗೆಯಲ್ಲಿ ಗಾಯಿತ್ರಿ ಕಟ್ಟಿಮನಿ ನಾಮಪತ್ರ ಹಿಂತೆಗೆದುಕೊಂಡಿದ್ದರಿಂದ ಅಕ್ಕಮಹಾದೇವಿ ಕಟ್ಟಿಮನಿ ಅವರು ಅವಿರೋಧವಾಗಿ ಆಯ್ಕೆಗೊಂಡರು. ಅದರಂತೆ ವಾರ್ಡ ನಂ. 22 ಮೋಹನ ಶ್ರೀಪತಿ ಬಡಿಗೇರ, ಸಣ್ಣಪ್ಪ ಹಗರಗುಂಡ, ಬಸವರಾಜ ಸಜ್ಜನ 3 ಜನ ನಾಮಪತ್ರ ಸಲ್ಲಿಸಿದ್ದರು ಆದರೆ ಕೊನೆಗಳಿಗೆಯಲ್ಲಿ ಸಣ್ಣಪ್ಪ ಹಗರಗುಂಡ ಹಾಗೂ ಬಸವರಾಜ ಸಜ್ಜನ ಅವರು ನಾಮಪತ್ರ ಹಿಂತೆಗೆದುಕೊಂಡಿದ್ದರಿಂದ ಮೋಹನ ಶ್ರೀಪತಿ ಬಡಿಗೇರ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆಂದು ಚುನಾವಣಾಧಿಕಾರಿ ತಾಲೂಕಾ ತಹಶಿಲ್ದಾರ ನಿಂಗಪ್ಪ ಬಿರಾದಾರ ಘೋಷಿಸಿದರು.

ಪುರಸಭೆಯ 23 ವಾರ್ಡಗಳಲ್ಲಿ ಪೈಕಿ ವಾರ್ಡ ನಂ.9 ಮಲ್ಲಿಕಾಜರ್ುನ ಪಟ್ಟಣಶೆಟ್ಟಿ, ವಾರ್ಡ ನಂ.20 ಜುಬೇದಾ ಜಮಾದಾರ, ವಾರ್ಡ ನಂ.19 ಕ್ಕೆ ಅಕ್ಕಮಹಾದೇವಿ ಕಟ್ಟಿಮನಿ, ವಾರ್ಡ ನಂ. 22 ಕ್ಕೆ ಮೋಹನ ಬಡಿಗೇರ ಹೀಗೆ ಇಲ್ಲಿಯವರೆಗೆ ಒಟ್ಟು 4 ಜನರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.

ಪುರಸಭೆಯ 23 ವಾರ್ಡಗಳ ಪೈಕಿ ಸ್ಪರ್ಧಾ  ಆಕಾಂಕ್ಷೀಗಳಾಗಿ ಸ್ಪದರ್ಿಸಿದ್ದ 84 ಜನರಲ್ಲಿ 20 ಜನರು ಉಮೇದುವಾರಿಕೆಯನ್ನು ಹಿಂಪಡೆದುಕೊಂಡಿದ್ದು ಒಟ್ಟು 64 ಜನರು ಸ್ಪದರ್ಾ ಕಣದಲ್ಲಿ ಉಳಿದಿದ್ದಾರೆ. ಬಿಜೆಪಿ 8, ಕಾಂಗ್ರೇಸ್ 09, ಜೆಡಿಎಸ್ 2, ಪಕ್ಷೇತರ 45 ಜನ ಹೀಗೆ ಒಟ್ಟು 64 ಜನರು ಸ್ಪರ್ಧಾ  ಕಣದಲ್ಲಿ ಉಳಿದಿದ್ದಾರೆ.

ಪುರಸಭೆ ಚುನಾವಣೆಗೆ ಸಂಬಂದಿಸಿ 24 ಮತಗಟ್ಟೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಅಲ್ಲದೇ ಎಸ್.ಕೆ.ಕಾಲೇಜ್ನಲ್ಲಿ ಸ್ಟ್ರಾಂಗ್ ರೂಂ ನಿಮರ್ಿಸಲಾಗಿದೆ ಮತ ಏಣಿಕೆ ಕಾರ್ಯವೂ ಕೂಡಾ ಎಸ್.ಕೆ.ಕಾಲೇಜ್ ನಲ್ಲಿ ನಡೆಯಲಿದೆ ಎಂದು ತಹಶಿಲ್ದಾರ ನಿಂಗಪ್ಪ ಬಿರಾದಾರ ಮಾಹಿತಿ ನೀಡಿದ್ದಾರೆ.