ಪ್ರತಿಭಾ ನವನವೂನ್ಮೇಶ ಶಾಲಿನಿ: ದಾನೇಶ ಅವಟಿ
Talented and innovative Shalini: Danesh Avati
ವಿಜಯಪುರ 08: ಕವಿ ವಾಣಿಯಂತೆ ಮಾನವನಲ್ಲಿಯ ಪ್ರತಿಭೆ ನವ ನವೊನ್ಮೇಶ ಶಾಲಿನಿಯಾಗಿ ಹೊರ ಹೊಮ್ಮಿದಾಗಲೇ ಸಂತೃಪ್ತಿ ನೆಲೆ ಬೆಲೆ ಕಾಣಲು ಸಾಧ್ಯ ಅದು ಮಕ್ಕಳಲ್ಲಿಯ ಕಲೆ. ಸಾಹಿತ್ಯ.ಸಂಗೀತ ಮುಂತಾದವುಗಳ ಮೂಲಕ ಹೊರಹೊಮ್ಮಲು ಶಾಲೆಯಲ್ಲಿ ಪ್ರತಿಭಾ ಕಾರಂಜಿ ಕಾರ್ಯಕ್ರಮ ಅತ್ಯಂತ ಸೂಕ್ತ ವೇದಿಕೆ ಎಂದು ವಿಜಯಪುರ ಮಹಾನಗರ ಪಾಲಿಕೆ ವಾರ್ಡ ಸಮಿತಿ ಸಂಚಾಲಕ ಹಾಗೂ ನಗರದ ರೈಲು ನಿಲ್ದಾಣ ಹತ್ತಿರ ನಾಗೇಶ ಕಾಲೋನಿಯ ಸರಕಾರಿ ಕನ್ನಡ ಪ್ರಾಥಮಿಕ ಶಾಲೆ ನಂ.41 ರಲ್ಲಿ ದಿನಾಂಕ 07-11-2025 ರಂದು ಗುರುವಾರ ಬೆಳಿಗ್ಗೆ 11 ಘಂಟೆಗೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನ್ಯಾಯವಾದಿ ದಾನೇಶ ಅವಟಿ ಮಾತನಾಡಿದರು.
ಕಾರ್ಯಕ್ರಮವನ್ನು ಜ್ಯೋತಿ ಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿದ ವಾರ್ಡ ಸಂಖ್ಯೆ 15 ರ ಮಹಾನಗರ ಪಾಲಿಕೆ ಸದಸ್ಯೆ ಶ್ರೀಮತಿ ಸ್ವಪ್ನಾ ಕಣಮೂಚನಾಳ ಸ್ವಾಮೀ ವಿವೇಕಾನಂದರು ಹೇಳಿದಂತೆ ಮಕ್ಕಳ ಅಂತರಂಗದಲ್ಲಿ ಹುದುಗಿದ ಪ್ರತಿಭೆಯನ್ನು ಹೊರ ತರುವದೆ ಶಿಕ್ಷಣ ಆ ಒಂದು ಗುರುತರ ಜವಾಬ್ದಾರಿ ಪ್ರತಿಯೊಬ್ಬ ಶಿಕ್ಷಕರ ಮೇಲಿರುತ್ತದೆ.ರೈಲು ನಿಲ್ದಾಣದ ಹಿಂದುಳಿದ ಪ್ರದೇಶದಲ್ಲಿ ಹೆಚ್ಚಾಗಿ ಬಡವರು, ಕೂಲಿ, ಕಾರ್ಮಿಕರು ಹಿಂದುಳಿದವರು, ಅಲ್ಪ ಸಂಖ್ಯಾತರು ಇರುವದರಿಂದ, ಅವರ ಮಕ್ಕಳನ್ನು ಶಿಕ್ಷಕರು ಕರೆತಂದು ಶಿಕ್ಷಣದೊಂದಿಗೆ ಕಲೆ, ಕ್ರೀಡೆ, ಸಾಹಿತ್ಯ, ಸಂಗೀತ, ಮುಂತಾದ ಸೃಜನಾತ್ಮಕ ಕಾರ್ಯಗಳಲ್ಲೂ ತೊಡಗಿಸಿ ಮಕ್ಕಳನ್ನು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯಾರಿಗೂ ಕಡಿಮೆ ಇಲ್ಲದಂತೆ ತರಬೇತಿಗೂಳಿಸಿದ್ದು ಶ್ಲಾಘನೀಯ ಎಂದು ಕೊಂಡಾಡಿ ಭಾಗವಹಿಸಿದ ಎಲ್ಲಾ ಶಾಲೆಯ ಶಿಕ್ಷಕರನ್ನು, ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಖ್ಯಾತ ಉದ್ಯಮಿ ಎಸ್ ಡಿಎಂಸಿ ಅಧ್ಯಕ್ಷ ಜಗದೀಶ ಮಂಗಳವೇಡೆ. ನಿವೃತ್ತ ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ಶರಣಪ್ಪ ಕಾಳಗಿ, ಶಿಕ್ಷಣ ಸಂಯೋಜಕ ಪಿ.ಎಸ್. ನಾಲತವಾಡ, ಸಮೂಹ ಸಂಪನ್ಮೂಲ ವ್ಯಕ್ತಿ ಮುಬಾರಕ್ ಜಮಾದಾರ ಮಾತನಾಡಿದರು.
ವಿವಿಧ ಶಾಲೆಗಳ ಮುಖ್ಯೋಪಾಧ್ಯಾಯರಾದ ಕವಯಿತ್ರಿ ವಿಜಯಲಕ್ಷ್ಮೀ ಹುಡೇದ, ಪಿ.ಎಂ.ಹೀರೆಮಠ, ಗೋಪಾಲ ಪತ್ತಾರ, ಶಿಕ್ಷಕರಾದ ಶರಣಗೌಡ ಬಿರಾದಾರ, ದಯಾಸಾಗರ ದಾನಪ್ಪ ಸೂರಗೊಂಡ, ಹಿರಿಯರಾದ ಜಿ.ಎಂ.ಹಿರೇಮಠ, ಬಿ.ವೈ. ನರಹಟ್ಟಿ, ಶ್ರೀಮತಿ ವಿ.ಏ. ರಾಠೋಡ, ಹಿರಿಯರಾದ ಚಂದ್ರಶೇಖರ ವಂದಾಲ, ಸಂತೋಷ್ ಖ್ಯಾಡಿ, ದತ್ತಾತ್ರೇಯ ಮಹಿಂದ್ರಕರ, ಭೀಮರಾಯ ಬೆನಕನಹಳ್ಳಿ ಮುಂತಾದವರು ಉಪಸ್ಥಿತರಿದ್ದರು. ಶಿಕ್ಷಕಿ ಶ್ರೀಮತಿ ಎಂ ಆರ್ ಜೋಶಿ ಸ್ವಾಗತಿಸಿದರು. ಶಿಕ್ಷಕ ಎಂ. ಬಿ.ಬಿರಾದಾರ. ನಿರೂಪಿಸಿದರು. ಶಿಕ್ಷಕಿ ವಿ.ಎಚ್ಚ.ರಾಠೋಡ್ ವಂದಿಸಿದರು. ವಿವಿಧ ಶಾಲೆಯ ಮಕ್ಕಳಿಂದ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿದವು. ಸಿಹಿ ಭೋಜನದೊಂದಿಗೆ. ಕಾರ್ಯಕ್ರಮ ಯಶಸ್ವಿಯಾಗಿ ಕೊನೆಗೊಂಡಿತು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 