ಪ್ರತಿಭೆ ಯಾರೊಬ್ಬರ ಸ್ವತ್ತಲ್ಲ: ಮೌನೇಶ್ವರ ಗುರುಜೀ

ಲೋಕದರ್ಶನವರದಿ

ರಾಣೇಬೆನ್ನೂರು 17:    ಪ್ರತಿಭೆ ಎಂಬುದು ಕಣ್ಣಿಗೆ ಕಾಣಲಾರದ ಅಂತರ್ಮನಸ್ಸಿನಲ್ಲಿ ಹುದುಗಿದ ಸುಪ್ತ ಶಕ್ತಿ. ಈ ಅಂತರ್ಮನಸ್ಸಿನಲ್ಲಿ ಹಿಂದಿನ ಹಾಗೂ ಇಂದಿನ ಜನ್ಮಗಳಲ್ಲಿಯ ನೆನಪುಗಳು, ವಿಚಾರ ಧಾರೆಗಳು, ಚಿಂತನೆಗಳು, ಕಲ್ಪನೆಗಳು, ಭಾವನೆಗಳು ಸಂಚಯವಾಗಿರುತ್ತವೆ ಎಂದು ನಗರದ ವಿಶ್ವವಿಭು ಧ್ಯಾನಪೀಠದ ಆಚಾರ್ಯ ಮೌನೇಶ್ವರ ಗುರೂಜಿ ಹೇಳಿದರು. 

ರವಿವಾರ ಇಲ್ಲಿನ ಉಮಾಶಂಕರ ನಗರದಲ್ಲಿರುವ ವಿಶ್ವವಿಭು ಧ್ಯಾನಪೀಠ(ಆಧ್ಯಾತ್ಮಿಕ ಶಕ್ತಿ ಉಪಚಾರ ಕೇಂದ್ರ)ದಲ್ಲಿ ನಡೆದ ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಪ್ರತಿಭಾವಂತ ವಿದ್ಯಾಥರ್ಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ಆವಿಚಾರಗಳು ಮರೆತಿರುವಂತಹುಗಳಾಗಿರುತ್ತವೆ. ಇದರ ಹೆಚ್ಚಿನ ಭಾಗವನ್ನು ಲೌಕಿಕವಾಗಿರಲಿ ಅಥವಾ ಆಧ್ಯಾತ್ಮಿಕವಾಗಿರಲಿ ಪ್ರಯೋಗದಲ್ಲಿ ತಂದಿರುವುದಿಲ್ಲ ಎಂದರು.

    ಇದರ ಉಪಯೋಗವನ್ನು ಹೇಗೆ ಮಾಡಬೇಕೆಂಬ ತಿಳುವಳಿಕೆಯೂ ಕೂಡ ಇರುವುದಿಲ್ಲ. ಎಲ್ಲ ಜ್ಞಾನಶಕ್ತಿಯು ಅಂತರ್ಮನಸ್ಸಿನಲ್ಲಿ  ಇರುತ್ತದೆ ಈ ಅಂತರ್ಮನಸ್ಸು ಜಗತ್ತಿನ ಅನಂತ ಜ್ಞಾನ ಭಂಡಾರವೇ ಆಗಿದೆ. ಪ್ರಪಂಚದಲ್ಲಿ ಗಳಿಸಿರುವ ಜ್ಞಾನವೆಲ್ಲವೂ ಒಳಗಿನ ಮನಸ್ಸಿನಿಂದಲೇ ಬಂದುದಾಗಿದ್ದು, ಆದರೆ ಅದರ ಮೇಲಿನ ಮುಸುಕನ್ನು ತೆರೆದಾಗ ಮಾತ್ರ ಬಾಹ್ಯವಾಗಿ ಪ್ರತಿಭೆಯಾಗಿ ಪ್ರಕಟವಾಗಬಲ್ಲದು ಎಂದು ಗುರೂಜೀ ನುಡಿದರು. 

ಹುಬ್ಬಳ್ಳಿ ವಿಶ್ವಮಯ ಸಾಹಿತ್ಯ ಪ್ರಚಾರ ಸಮಿತಿ ಸಂಚಾಲಕ ಭೀಮಸೇನ ಬಡಿಗೇರ ಮಾತನಾಡಿ, ಇಂದಿನ ದಿನಮಾನಗಳಲ್ಲಿ ಕೆಲ ತರುಣರು ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗುವ ಮೂಲಕ ಭಾರತೀಯ ಸಂಸ್ಕೃತಿ ಮರೆಯುತ್ತಿರುವುದು ವಿಷಾಧನೀಯ. ಸಮಾಜದಲ್ಲಿ ಹಿರಿಯರಾಗಲಿ ಅಥವಾ ಕಿರಿಯರಾಗಲಿ ಮೌಲ್ಯವನ್ನು ಕಳೆದುಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಪಾಲಕರು ಮೌಲ್ಯಗಳ ಬಗ್ಗೆ ಮಕ್ಕಳಲ್ಲಿ ಹೆಚ್ಚು ಗಮನಹರಿಸಬೇಕು ಎಂದರು.  

       ವಿದ್ಯಾಥರ್ಿಗಳು ಹೆಚ್ಚು ಹೆಚ್ಚು ಪದವಿಗಳನ್ನು ಪಡೆಯುವುದು ಮುಖ್ಯವಲ್ಲ. ಗುರು-ಹಿರಿಯರಿಗೆ ಎಲ್ಲಿ, ಹೇಗೆ ಗೌರವವನ್ನು ನೀಡುವುದನ್ನು ಕಲಿತುಕೊಳ್ಳಬೇಕು. ಅಂದಾಗ ಮಾತ್ರ ಓದಿಗೆ ಒಂದು ಅರ್ಥ ಬರುತ್ತದೆ. ಶಿಕ್ಷಣ ಎನ್ನುವುದು ಒಂದು ಶಕ್ತಿ. ಈ ನಿಟ್ಟಿನಲ್ಲಿ ಪೋಷಕರು ತಮ್ಮ ಮಕ್ಕಳಿಗೆ ವಿಧ್ಯಾಭ್ಯಾಸವನ್ನು ಕೊಡಿಸಬೇಕು ಎಂದರು. 

ವಿದ್ಯಾಥರ್ಿಗಳು ಸಮಾಜಮುಖಿಯಾಗಿ ಕಾರ್ಯ ಮಾಡಬೇಕು. ಸಮಾಜದ ತೊಂದರೆ, ತಾಪತ್ರಯಗಳನ್ನು ಆದಷ್ಟು ಬಗೆಹರಿಸುವ ಪ್ರಯತ್ನಶೀಲರಾಗಬೇಕು. ಸಮಾಜದಲ್ಲಿ ಜನ್ಮ ತಾಳಿದ ಮೇಲೆ ತಮಗಿಷ್ಟವಾದ ಕ್ಷೇತ್ರವನ್ನು ಆಯ್ಕೆಮಾಡಿಕೊಂಡು ನಿರಂತರ ಅಧ್ಯಯನ ಮಾಡಬೇಕು ಎಂದರು.

 ಇದೇ ಸಂದರ್ಭದಲ್ಲಿ ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾಥರ್ಿಗಳಾದ ಚೈತ್ರಾ ಸಾಸಲು, ಶ್ವೇತಾ ಬಡಿಗೇರ, ಕಿರಣಕುಮಾರ ಜಿಗಣಿಹಳ್ಳಿ, ಚೈತ್ರಾ ಬಿ.ಕೆ, ನಮ್ರತಾ ಬಡಿಗೇರ  ಇವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. 

         ಕಮಲಾಬಾಯಿ ಬಡಿಗೇರ ಕಾರ್ಯಕ್ರಮದ ಸಾನಿಧ್ಯವಹಿಸಿದ್ದರು. ಚಲನಚಿತ್ರ ಸಹನಿದರ್ೇಶಕ ರೇಣುಕಾಚಾರ್ಯ.ಎಸ್.ಬಿ, ನಿವೃತ್ತ ಸ.ಕಾ.ಅಭಿಯಂತರ ಶಾಮರಾವ್ ನಿಂಬರಗಿ, ಬಸವರಾಜ ಬಡಿಗೇರ. ಲಕ್ಷ್ಮೀದೇವಿ, ಖಂಡೇಶ ಬಡಿಗೇರ, ಮಲ್ಲಿಕಾಜರ್ುನ ಬಡಿಗೇರ, ಕೃಷ್ಣ ಬಡಿಗೇರ, ಸುರೇಶ ಬಡಿಗೇರ, ರಾಜಕುಮಾರ ಕಮ್ಮಾರ, ವಿಶ್ವನಾಥ ಕುಂಬಳೂರು ಸೇರಿದಂತೆ ಮತ್ತಿತರರು ಇದ್ದರು. ವಿಶ್ವರೂಪ ಲಲಿತಾ ಕಲಾ ನಿಕೇತನದ ವಿದ್ಯಾಥರ್ಿಗಳು ಪ್ರಾಥರ್ಿಸಿದರು. ಶಶಿಕಲಾ ಬಡಿಗೇರ ಸ್ವಾಗತಿಸಿ ನಿರೂಪಿಸಿದರು. ಶಿಕ್ಷಕ ಎಂ.ಟಿ.ಬಡಿಗೇರ ವಂದಿಸಿದರು.