ಜಿಲ್ಲಾ ತಳವಾರ ಸಮಾಜದ ವತಿಯಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಜಿಲ್ಲಾ ತಳವಾರ ಸಮಾಜದ ವತಿಯಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ Talent award program by the District Talawara Samaj

ವಿಜಯಪುರ: ಆ.24, ಶಿಕ್ಷಣ ಕೊರತೆ ಕಾರಣ ಈ ಸಮಾಜವು ಅತ್ಯಂತ ಹಿಂದುಳಿದ ಸಮಾಜವಾಗಿದೆ. ಈ ಸಮುದಾಯವು ಎಲ್ಲ ರಂಗಗಳಲ್ಲಿ ಮುಂದು ಬರಬೇಕೆಂದರೆ ಪ್ರತಿಯೊಬ್ಬರಿಗೂ ಶಿಕ್ಷಣ ಅಗತ್ಯ ಎಂದು ನಾಗಠಾಣ ಮತಕ್ಷೇತ್ರದ ಶಾಸಕರಾದ ವಿಠ್ಠಲ ದೋಂಡಿಬಾ ಕಟಕದೋಂಡ ಹೇಳಿದರು. 

ಇಂದು ನಗರದ ಚೌಧರಿ ಆಸ್ಪತ್ರೆ ಹತ್ತಿರ ವಿರುವ ಶ್ರೀ ಅನಂತಲಕ್ಷ್ಮೀ ಕಲ್ಯಾಣ  ಮಂಟಪದಲ್ಲಿ ವಿಜಯಪುರ ಜಿಲ್ಲಾ ತಳವಾರ ಸಮಾಜದ ಪ್ರತಿಭಾ ಪುರಸ್ಕಾರ ಸಮಿತಿ, ಜ್ಞಾನಗಂಗಾ ವಿವಿಧೋದ್ಧೇಶ ಸಹಕಾರಿ ಸಂಘ(ರಿ), ವಿಜಯಪುರ ಹಾಗೂ ದತ್ತಿದಾನಿಗಳ ಸಹಯೋಗದಲ್ಲಿ 7ನೇ ವರ್ಷದ ಪ್ರತಿಭಾ ಪುರಸ್ಕಾರ ಹಾಗೂ ಸೇವಾ ನಿವೃತ್ತ ನೌಕರರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಡಾ. ಬಿ.ಆರ್ ಅಂಬೇಡ್ಕರ ಅವರು ನಮ್ಮ ದೇಶಕ್ಕೆ ಕೊಡುಗೆಯನ್ನು ಕೊಟ್ಟಿದ್ದು ಶಿಕ್ಷಣದಿಂದ ಅವರ ಅಪಾರ ಜ್ಞಾನ ಹೊಂದಿದುರಿಂದ ನಮ್ಮ ದೇಶಕ್ಕೆ ಒಂದು ಒಳ್ಳೆಯ ಸಂವಿಧಾನವನ್ನು ನೀಡಿ ಶಿಕ್ಷಣದಲ್ಲಿ ಕ್ರಾಂತಿಕಾರಿಯನ್ನೆ ಮಾಡಿದ ಮಹಾನ್ ವ್ಯಕ್ತಿಯಾಗಿದ್ದರು ಅವರಂತೆ ತಮ್ಮ ಸಮಾಜವು ಕೂಡ  ಮಕ್ಕಳಿಗೆ ಉನ್ನತ ಶಿಕ್ಷಣಕ್ಕೆ ನೀಡುವುದರೊಂದಿಗೆ ಹಾಗೂ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿ ಪ್ರೋತ್ಸಾಹಿಸುವುದರಿಂದ ಮಕ್ಕಳಲ್ಲಿ ಆತ್ಮ ವಿಶ್ವಾಸ ಮೂಡುತ್ತದೆ. ವಿದ್ಯಾರ್ಥಿಗಳು ಕೂಡ ಕಲಿಕೆಯಲ್ಲಿ ಹೆಚ್ಚು ಆಸಕ್ತಿ ವಹಿಸಬಲ್ಲರು  ಆದುದರಿಂದ ಮಕ್ಕಳಿಗೆ ಮೊದಲು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಅವರು ಹೇಳಿದರು. 

ಬೆಂಗಳೂರಿನ ವಿಧಾನ  ಪರಿಷತ್ ಶಾಸಕರಾದ ಎನ್  ರವಿಕುಮಾರ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿ ಪ್ರತಿಭೆ ಅನ್ನುವುದು ಎಲ್ಲ ಪ್ರಾಣಿ, ಪಕ್ಷಿಗಳು, ಮಾನವರಲ್ಲಿ ಇದ್ದೇ ಇರುತ್ತದೆ. ಪ್ರತಿಭೆ ಇಲ್ಲದೇ ಜೀವನವೇ ಇಲ್ಲ ನಮ್ಮಲ್ಲಿ ಪ್ರತಿಭೆ ಇದ್ದಲ್ಲಿ ಜ್ಞಾನ, ಬುದ್ದಿಮಟ್ಟ ಬೆಳೆದು ವಿವಿಧ ಸಂಶೋಧನೆಗೆ ಸಹಕಾರಿಯಾಗಲಿದೆ. ನಮ್ಮಲ್ಲಿದ್ದ ಪ್ರತಿಭೆಯನ್ನು ಯಾರು ಕಿತ್ತುಕೊಳ್ಳಲು ಬರುವುದಿಲ್ಲ ಅದು ಯಾವಗಲು ನಮ್ಮ ಜೊತೆಯಲ್ಲಿಯೇ ಇರುತ್ತದೆ ಅದರಿಂದ ನಾವು ನಮ್ಮ ಪ್ರತಿಭೆಯನ್ನು ಮತ್ತಷ್ಟು  ಎತ್ತರಕ್ಕೆ ಕೊಂಡೊಯ್ಯಬಲ್ಲೆವು. ಪ್ರತಿಭೆ ಯಾರ ಆಸ್ತಿಯೂ ಅಲ್ಲ ನಮ್ಮಲ್ಲಿ ಏಕಾಗ್ರತೆ ,ಗುರಿ, ತಪಸ್ಸು ಇದ್ದಲ್ಲಿ ಪ್ರತಿಭೆ ತನ್ನಿಂದ ತಾನೆ ಬರುತ್ತದೆ. ಪ್ರತಿಯೊಬ್ಬರಲ್ಲಿ ಒಂದೊಂದು ಪ್ರತಿಭೆ ಇರುತ್ತದೆ. ಇಂದು ನಮ್ಮ ಸಮಾಜದ ಸಾಕಷ್ಟು ವಿದ್ಯಾರ್ಥಿಗಳು ಒಳ್ಳೆಯ ಪ್ರತಿಭೆಯಿಂದ ದೇಶ  ವಿದೇಶಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಉನ್ನತ ಕಂಪನಿಗಳಲ್ಲಿ ಉದ್ಯೋಗ ಹೊಂದಿದ್ದಾರೆ. ನಮ್ಮ ದೇಶ ಇಡೀ ವಿಶ್ವದಾಂದ್ಯಂತ ಪ್ರತಿಭಾವಂತ ವಿದ್ಯಾರ್ಥಿಗಳನ್ನು ನೀಡುವ ದೇಶವಾಗಿದೆ ಆದುದರಿಂದ ನಮ್ಮ ಸಮಾಜದಲ್ಲಿ ಕೂಡ ಇಂದಿನ ವಿದ್ಯಾರ್ಥಿಗಳು ಇಂಜಿನಿಯರಿಂಗ್, ಹಾಗೂ ವೈದ್ಯಕೀಯ ಕ್ಷೇತ್ರಗಳಲ್ಲಿ ಸಾಕಷ್ಟು ವಿದ್ಯಾರ್ಥಿಗಳು ಗುರುತಿಸಿಕೊಳ್ಳುತ್ತಿರುವುದು ಒಂದು ಒಳ್ಳೆಯ ಸಂಗತಿ ಇದೇ ರೀತಿ ಮಕ್ಕಳಲ್ಲಿ ಒಳ್ಳೆಯ ಸಂಸ್ಕಾರ, ಸಂಸ್ಕೃತಿ, ಗುರು ಹಿರಿಯರಿಗೆ ಗೌರವ ಭಾವನೆ ಮೂಡುವಂತೆ ತಿಳಿ ಹೆಳಬೇಕು. ಮಕ್ಕಳನ್ನು ಸನ್ಮಾನಿಸಿ ಪ್ರೊತ್ಸಾಹಿಸಬೇಕು. ಇಂತಹ ಕಾರ್ಯಕ್ರಮಗಳು ಮೇಲಿಂದ ಮೇಲೆ ಆಯೋಜಿಸಬೇಕು. ನಮ್ಮಲ್ಲಿ ಒಳ್ಳೆಯ ಪ್ರತಿಭೆ ಇದ್ದಲ್ಲಿ ಸಮಾಜ ಹಾಗೂ ಇನ್ನಿತರ ಸಮಾರಂಭಗಳಲ್ಲಿ ಸನ್ಮಾನಿಸಿ ಗುರುತಿಸಲು ಸಾಧ್ಯ ಆದುದರಿಂದ ಸಮಾಜದ ಪ್ರತಿಯೊಬ್ಬರ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಬೇಕು ಎಂದು ಅವರು ಹೇಳಿದರು. 

ಇನ್ನೋರ್ವ ಮುಖ್ಯ ಅತಿಥಿಗಳಾದ ಕರ್ನಾಟಕ ರಾಜ್ಯ ಜೆ.ಡಿ.ಎಸ್ ಪ್ರಧಾನ ಕಾರ್ಯದರ್ಶಿಗಳಾದ ಹಾಗೂ ಸಮಾಜದ ಮುಖಂಡರಾದ ಶಿವುಕುಮಾರ ನಾಟೀಕಾರ ಮಾತನಾಡಿ ಸಮಾಜವು ಆರ್ಥಿಕ, ಸಾಮಾಜಿಕ, ರಾಜಕೀಯ ಹಾಗೂ ಶೈಕ್ಷಣಕವಾಗಿ ಪ್ರಭಲರಾಗಲು ನಾವು ಇಂದು ಚಿಂತನ ಮಂಥನ ಮಾಡಬೇಕಾದ ಪರಿಸ್ಥಿತಿ ಬಂದಿದೆ. ನಮ್ಮಲ್ಲಿ ಶಿಕ್ಷಣ ಕೊರತೆಯಿಂದ ಹಿಂದುಳಿಯಲು ಕಾರಣ ಶಿಕ್ಷಣದ ಬೆಳವಣಿಗೆಗೆ  ನಮ್ಮ ಸಮಾಜದ ಎಲ್ಲರೂ ಜಾಗೃತರಾಗಬೇಕು. ಸಮಾಜವನ್ನು ಮುನ್ನೆಡೆಸುವಂಹ ಮಕ್ಕಳಲ್ಲಿ ಉನ್ನತ ಶಿಕ್ಷಣ ಕೊಡುವಲ್ಲಿ ನಾವು ಶ್ರಮ ವಹಿಸಬೇಕು. ನಮ್ಮಲ್ಲಿ ಒಗ್ಗಟ್ಟು ಇಚ್ಚಾಶಕ್ತಿ ಇದ್ದಲ್ಲಿ ಮಾತ್ರ ಸಮಾಜ ಕಟ್ಟಲು ಸಾಧ್ಯ ಎಂದು ಅವರು ಹೇಳಿದರು. 

ಕಾರ್ಯಕ್ರಮದ ಅತಿಥಿಗಳಾಗಿ ನರ, ಮನರೋಗ ಹಾಗೂ ದುಶ್ಚಟ ನಿವಾರಣಾ ತಜ್ಞರಾದ ಡಾ. ಮಂಜುನಾಥ ಮಸಳಿ, ಉದ್ದಿಮೇದಾರರಾದ ಲಕ್ಷ್ಮೀಕಾಂತ ನಿಂಬಾಳಕರ, ಮಾತನಾಡಿದರು. ಮಹಾನಗರ  ಪಾಲಿಕೆ ವಲಯ ಆಯುಕ್ತರಾದ ಶಿವಪ್ಪ ಅಂಬಿಗೇರ, ನಾಮ ನಿರ್ದೇಶಿತ ಸದಸ್ಯರಾದ ಶ್ರೀಮತಿ ಗಂಗೂಬಾಯಿ ಧುಮಾಳೆ, ಸಮಾಜದ ಮುಖಂಡರುಗಳಾದ  ಪ್ರತಿಭಾ ಪುರಸ್ಕಾರ ಸಮಿತಿ ಅಧ್ಯಕ್ಷರಾದ ಎಸ್‌.ಎಮ್ ಗಾಣೂರ, ಪ್ರಧಾನ ಕಾರ್ಯದರ್ಶಿಗಳಾದ ಪರಶುರಾಮ ಅಳಗುಂಡಗಿ ಸಮಾಜದ ಮುಖಂಡರುಗಳಾದ ಸಿದ್ದಣ್ಣ ಓತಿಹಾಳ, ಪಿ. ಕೆ. ಚೌಧರಿ, ಶಾರದಾ ನಾಗನೂರ, ಅಶೋಕ ತಟಗಾರ, ಭೀಮರಾಯ ಸುಣಗಾರ, ಪರಶುರಾಮ ವಾಲಿಕಾರ, ಪಾಯಣ್ಣ ತಳವಾರ, ಬಸವರಾಜ ನಾಯ್ಕೋಡಿ,  ರವಿ ಒಗ್ಗಿ, ದೇವೇಂದ್ರ ವಾಲಿಕಾರ, ಅಂಬರೀಷ ತಳವಾರ, ಭರತ ಕೋಳಿ, ಪ್ರಶಾಂತ ಕಲಬುರ್ಗಿ, ಪ್ರವೀಣ ನಾಟೀಕಾರ, ಆನಂದ ಬದ್ರೂಡ, ಅಂಬರೀಷ ಕಾಮನಕೇರಿ, ಲಕ್ಷಣ ಜಾವಡಗಿ, ಕೆ.ಪಿ. ಮನಗೂಳಿ, ಸುಭಾಸ ನಂದಿಹಾಳ, ಎಸ್‌. ಬಿ. ಕೋಲಕಾರ, ಎಸ್‌. ಸಿ. ಕಮತಗಿ, ರವಿ ಮೈಲಿಕರ, ಅಮೋಘಿ ಹರೆಣ್ಣವರ, ಚಂದ್ರು ಬಿರಾದಾರ, ಶಿವಾನಂದ ಅಂಬಿಗೇರ, ಚಂದ್ರಶೇಖರ ಯಾಳವಾರ, ವಸಂತ ನಾಯಕ, ಆರ್‌.ಆರ್‌. ಕೊಂಡಗೂಳಿ, ನಿಂಗಪ್ಪ ಕೂಟನೂರ,  ಆರ್‌.ಎಸ್ ವಾಲಿಕಾರ, ಧರ್ಮರಾಜ ವಾಲಿಕಾರ, ಚನಬಸಪ್ಪ ಯಾಳವಾರ ಉಪಸ್ಥತರಿದ್ದರು. ಶ್ರೀಮತಿ ಮಂಜುಳಾ ಹಿಪ್ಪರಗಿ, ಶಿವಶಂಕರ ಅಂಬಿಗೇರ, ಚಂದು ಬಿರಾದಾರ ರವರು ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಶಿಕ್ಷರಾದ ಹಣಮಂತ ಬೂದಿಹಾಳ ದಂಪತಿಗಳು ಕಾರ್ಯಕ್ರಮ ನಿರೂಪಿಸಿದರು. ಪ್ರತಿಭಾ ಪುರಸ್ಕಾರ ಸಮಿತಿ ಗೌರವ ಅಧ್ಯಕ್ಷ ಹಾಗೂ ಜ್ಞಾನಗಂಗಾ ವಿವಿಧೋದ್ಧೇಶ ಸಹಕಾರಿ ಸಂಘದ ಅಧ್ಯಕ್ಷರಾದ ಡಾ. ಅಶೋಕ ಸಾಸನೂರ ವಂದಿಸಿದರು.