ಹಣಕ್ಕಿಂತ ಹೆಚ್ಚಾಗಿ ಆರೋಗ್ಯ ಜೋಪಾನ ಮಾಡಿಕೊಳ್ಳಿ: ಡಾ. ಹೆಚ್.ಬಿ ರಾಜಶೇಖರ
Take care of your health more than money: Dr. H.B. Rajashekar
ಬೆಳಗಾವಿ 08: ಆರೋಗ್ಯ ಪ್ರಕೃತಿದತ್ತವಾಗಿ ಸಿಕಂ್ಕತಹ ಉಡುಗೊರೆ ಅದನ್ನು ಹಣಕ್ಕಿಂತ ಹೆಚ್ಚಾಗಿ ಜೋಪಾನ ಮಾಡಿಕೊಳ್ಳಬೇಕು ಆದರೆ ಇಂದಿನ ಯುವ ಜನತೆ ದುಶ್ಚಟಗಳಿಗೆ ದಾಸರಾಗುತ್ತಿರುವದು ನಿಜಕ್ಕೂ ಖೇದಕರವೆನ್ನಿಸುತ್ತದೆ. ಕೆ ಎಲ್ ಇ ಅಂತಹ ಆರೋಗ್ಯ ಸಂಸ್ಥೆಗಳು, ಸರಕಾರದ ಆರೊಗ್ಯ ಇಲಾಖೆ ಇನ್ನೂ ಅನೇಕ ರೀತಿಯ ಆರೋಗ್ಯ ಸಂಸ್ಥೆಗಳು ದುಶ್ಚಟಗಳಿಂದ ದೂರವಿರುವ ಬಗ್ಗೆ ಅನೇಕ ರೀತಿಯ ಜಾಗ್ರತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಲೇ ಇವೆ ಅವುಗಳನ್ನು ಅನುಸರಿಸಿ ಆರೋಗ್ಯ ಕಾಪಾಡಿಕೊಳ್ಳುವಂತ ಇಂದಿನ ಯುವಕರ ಗಮನ ಹರಿಸಬೇಕಿದೆ ಎಂದು ಯು.ಎಸ್.ಎಂ ಕೆ.ಎಲ್.ಇ ನಿರ್ದೇಶಕ ಡಾ. ಹೆಚ್.ಬಿ ರಾಜಶೇಖರ ಅವರು ಹೇಳಿದರು.
ಬೆಳಗಾವಿ ಕೆ.ಎಲ್.ಇ ಶತಮಾನೋತ್ಸವ ಚಾರಿಟೇಬಲ್ ಆಸ್ಪತ್ರೆಯ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರ ಯಳ್ಳೂರ ರಸ್ತೆ ಆಸ್ಪತ್ರೆಯ ಮುಂಭಾಗದಲ್ಲಿ ದಿ.7ರಂದು ಬೆಳಿಗ್ಗೆ 11ಘಂಟೆಗೆ ಹಮ್ಮಿಕೊಳ್ಳಲಾಗಿದ್ದ ವಿಶ್ವ ಆರೋಗ್ಯ ದಿನಾಚರಣೆಯನ್ನು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ ಅವರು ಮಾತನಾಡಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಆಸ್ಪತ್ರೆಯ ಆಡಳಿತಾಧಿಕಾರಿ ನವೀನ ಎನ್ ಅವರು ಮಾತನಾಡುತ್ತ, ಪ್ರತಿಯೊಬ್ಬ ಮನುಷ್ಯನು ಆರೋಗ್ಯಕರವಾಗಿ ಜೀವನ ನಡೆಸಲು ನಿಯಮಿತ ಊಟ, ವ್ಯಾಯಾಮ, ಆಚಾರ, ವಿಚಾರ, ಧ್ಯಾನ ಮತ್ತು ಯೋಗಗಳನ್ನು ಚಟುವಟಿಕೆಗಳಲ್ಲಿ ಅಳವಡಿಸಿಕೊಂಡಲ್ಲಿ ಆರೊಗ್ಯಕರ ಜೀವನ ನಡೆಸಲು ರಹದಾರಿಯಾಗಿದೆ ಎಂದು ಕರೆ ನೀಡಿದರು. ಆರೋಗ್ಯದ ಬಗ್ಗೆ ಸಮಸ್ಯಗಳಿದ್ದರೆ ಅವುಗಳನ್ನು ನಿರ್ಲಕ್ಷಿಸದೆ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.
ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಸಂಜಯ ಕಂಬಾರ ಮಾತನಾಡುತ್ತಾ ಆರೋಗ್ಯಕ್ಕಾಗಿ ಒಟ್ಟಾಗಿ, ವಿಜ್ಞಾನಕ್ಕೆ ಬೆಂಬಲ ನೀಡಿ ಎಂಬ ಘೋಷವಾಕ್ಯವನ್ನು ಹೊಂದಿರುವ ವಿಶ್ವ ಸಂಸ್ಥೆಯು ಆರೋಗ್ಯದ ಮೇಲೆ ಹೆಚ್ಚಿನ ಒತ್ತು ನೀಡುತ್ತಿರುವ ಅದರ ನಿಲುವು ನಿಜಕ್ಕೂ ಅಭಿನಂದನಾರ್ಹವಾಗಿದೆ. ಸತತ ಸಂಶೋಧನೆಗಳು, ಯೋಜನೆಗಳು ಫಲಪ್ರದವಾಗುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮೆಡಿಶಿನ್ ವಿಭಾಗದ ಹಿರಿಯ ಹಾಗೂ ನುರಿತ ತಜ್ಞ ವೈದ್ಯ ಡಾ.ಆರ್.ಆರ್.ವಾಳ್ವೇಕರ ಅವರು ಮಾತನಾಡುತ್ತ ಆರೋಗ್ಯ ಅಮೂಲ್ಯವಾದ ಸಂಪತ್ತು ಅದು ಅಧುನಿಕತೆಗೆ ಸಿಲುಕಿ ಆರೋಗ್ಯಯೆಂಬುದು ಇವತ್ತಿನ ದಿನಗಳಲ್ಲಿ ಮರೀಚಿಕೆಯಾಗಿದೆ. ವ್ಯಾಯಾಮ ರಹಿತತೆ, ಯಂತ್ರಗಳ ಮೇಲೆ ಅತಿಯಾದ ಅವಲಂಬನೆ, ಜಂಕ ಪುಢ್‌ಗಳ ಸೇವನೆ, ನಿಯಮಿತವಾಗಿ ಆರೋಗ್ಯ ತಪಾಸಣೆ ಹೊಂದದೇ ಇರುವದು ಹೀಗೆ ಅನೇಕ ಕಾರಣಗಳಿಂದ ಆರೋಗ್ಯವನ್ನು ಹೊಂದುವದು ಇಂದು ದುಸ್ತರವಾಗಿದೆ. ಈ ನಿಟ್ಟಿನಲ್ಲಿ ವಿಶ್ವದೆಲ್ಲೆಡೆ ಆರೋಗ್ಯದ ಅರಿವು ಮೂಡಿಸುವ ಸದುದ್ದೇಶವನ್ನು ಆರೋಗ್ಯ ಕಾರ್ಯಕರ್ತರಾದ ನಾವು ನೀವೆಲ್ಲರೂ ಸಾರ್ವಜನಿಕರಿಗೆ ಅರಿವು ಮೂಡಿಸುವದು ಆದ್ಯ ಕರ್ತವ್ಯವಾಗಿದೆ. ಎಂದು ಅಭಿಮತ ವ್ಯಕ್ತಪಡಿಸಿದರು.
ಮೆಡಿಶಿನ ವಿಭಾಗದ ಮುಖ್ಯಸ್ಥ ಡಾ. ಶ್ರೀನಿವಾಸ ಬಿ, ಮತ್ತು ಚಿಕ್ಕ ಮಕ್ಕಳ ವಿಭಾಗದ ತಜ್ಞ ವೈದ್ಯ ಡಾ. ಸೌಮ್ಯ ಅವರು ಮಾತನಾಡುತ್ತ ನೈಸರ್ಗಿಕವಾಗಿ ಸಿಗುವ ಹಾಗೂ ಮನೆಯಲ್ಲೆ ದೊರೆಯುವ ಸಂಪನ್ಮೂಲಗಳಿಂದ ಮತ್ತು ಸರಳ ಜೀವನ ಶೈಲಿಯಿಂದ ಆರೋಗ್ಯಕರ ಜೀವನವನ್ನು ಹೊಂದಬಹುದಾಗಿದೆ. ನಾವು ಸೇವಿಸುವ ಆಹಾರವೇ ಒಂದು ಮಹತ್ತರ ಓಷಧಿಯಾಗಿದ್ದು, ಅದನ್ನು ನಿಯಮಿತ ಪ್ರಮಾಣದಲ್ಲಿ ಸೇವಿಸಿ ಅದಕ್ಕೆ ತಕ್ಕಂತೆ ವ್ಯಾಯಾಮಗಳನ್ನು ಮೈಗೂಡಿಸಿಗೊಳ್ಳಬೇಕು. ಇದರಿಂದ ನಾವು ಆರೋಗ್ಯವಾಗಿದ್ದು ನಮ್ಮ ಸುತ್ತಮುತ್ತಲ ಜನರನ್ನು ಆರೊಗ್ಯವಂತರನ್ನಾಗಿಸಲು ಸಹಕಾರಿಯಾಗಿದೆ ಎಂದರು.
ವಿಶ್ವ ಆರೋಗ್ಯ ದಿನಾಚರಣೆ ಅಂಗವಾಗಿ ಶಿವಾಜಿ ಗಾರ್ಡನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಶಿಬಿರದಲ್ಲಿ 100ಕ್ಕೂ ಅಧಿಕ ಸಾರ್ವಜನಿಕರಿಗೆ ಆರೋಗ್ಯ ತಪಾಸಣೆ ಮಾಡಲಾಯಿತು. ಜೆ.ಎನ್.ಎಂ ಕಾಲೇಜಿನ ಪ್ರಾಶುಂಪಾಲ ಡಾ. ವಿಕ್ರಾಂತ ನೇಸರಿ, ಆಸ್ಪತ್ರೆಯ ವೈದ್ಯರು ಮತ್ತು ವೈದ್ಯಕೀಯೇತರ ಸಿಬ್ಬಂದಿ ವರ್ಗದವರು, ನರ್ಸಿಂಗ ವಿದ್ಯಾರ್ಥಿಗಳು ಹಾತೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಜನ ಸಂಪರ್ಕಧಿಕಾರಿ ಲಕ್ಷ್ಮೀ ಪಾಟೀಲ ನಿರೂಪಿಸಿ, ವಂದಿಸಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 