ಹಾವೇರಿ: ಫೆ.27: ಮಹಿಳೆಯರ ಅಭಿವೃದ್ಧಿ ಹಾಗೂ ಬೆಳವಣಿಗೆಗಾಗಿ ಇರುವಂತಹ ಸಕರ್ಾರದ ವಿವಿಧ ಯೋಜನೆಯ ಲಾಭ ಪಡೆದುಕೊಳ್ಳಬೇಕು ಎಂದು ಧಾರವಾಡದ ಉತ್ತರ ಕನರ್ಾಟಕ ಪೋಸ್ಟ್ಮಾಸ್ಟರ್ ವೀಣಾ ಶ್ರೀನಿವಾಸ ಅವರು ಹೇಳಿದರು.
ರಟ್ಟೀಹಳ್ಳಿ ತಾಲೂಕಿನ ಕುಂಚೂರು ಗ್ರಾಮ ಹಾಗೂ ಹಾವೇರಿ ತಾಲೂಕಿನ ಬೂದುಗಟ್ಟಿ ಸವಣೂರ ತಾಲೂಕಿನ ಹೊಸಗುಂಡೂರು ಗ್ರಾಮಗಳಲ್ಲಿ ಜರುಗಿದ ಸಂಪೂರ್ಣ ಅಂಚೆ ವಿಮಾಗ್ರಾಮ, ಸಂಪೂರ್ಣ ಸುಕನ್ಯಾ ಸಮೃದ್ಧಿ ಗ್ರಾಮ, ಸಂಪೂರ್ಣ ಬಚತ್ ಗ್ರಾಮಗಳ ಘೋಷಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಂಚೆ ಕಛೇರಿಗಳಲ್ಲಿ ಹೆಣ್ಣುಮಕ್ಕಳ ಹೆಸರಿನಲ್ಲಿ ಸುಕನ್ಯಾ ಸಮೃದ್ಧಿ ಖಾತೆಗಳನ್ನು ತೆರೆದಿದ್ದ ಫಲಾನುಭವಿಗಳು ಮದ್ಯದಲ್ಲಿ ಕಂತು ಕಟ್ಟುವದನ್ನು ನಿಲ್ಲಿಸದೇ ಮುಂದುವರೆಸಿ. ಮುಂದಿನ ದಿನಗಳಲ್ಲಿ ಆ ಹೆಣ್ಣುಮಗಳ ಳ ಉನ್ನತ ಶಿಕ್ಷಣ ಅಥವಾ ಮದುವೆಗೆ ಆ ಹಣವನ್ನು ಉಪಯೋಗಿಸಿದಾಗ ಮಾತ್ರ ಕೇಂದ್ರ ಸರಕಾರದ "ಬೇಟಿ ಬಚಾವೋ, ಬೇಟಿ ಪಡಾವೋ" ಯೋಜನೆ ಸಾಕಾರಗೊಳ್ಳುತ್ತದೆ. ಇಂದಿನ ದಿನಗಳಲ್ಲಿ ಹೆಣ್ಣುಮಕ್ಕಳು ಎಲ್ಲ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.
ರಟ್ಟಿಹಳ್ಳಿ ತಾಲೂಕಿನ ಕುಂಚೂರ ಹಾಗೂ ವಡೆಯರಹಳ್ಳಿ ಗ್ರಾಮಗಳನ್ನು ಕ್ರಮವಾಗಿ ಸಂಪೂರ್ಣ ಸುಕನ್ಯಾ ಸಮೃದ್ಧಿ ಗ್ರಾಮ ಹಾಗೂ ಸಂಪೂರ್ಣ ವಿಮಾ ಗ್ರಾಮವನ್ನಾಗಿ, ಹಾವೇರಿ ತಾಲ್ಲೂಕಿನ ಬೂದಗಟ್ಟಿ ಗ್ರಾಮವನ್ನು ಸಂಪೂರ್ಣ ಸುಕನ್ಯಾ ಸಮೃದ್ಧಿ ಗ್ರಾಮ, ಸಂಪೂರ್ಣ ಅಂಚೆ ವಿಮಾ ಗ್ರಾಮ ಹಾಗೂ ಸಂಪೂರ್ಣ ಬಚತ್ ಗ್ರಾಮವನ್ನಾಗಿ, ಸವಣೂರ ತಾಲ್ಲೂಕಿನ ಹೊಸಗುಂಡೂರು ಗ್ರಾಮವನ್ನು ಸಂಪೂರ್ಣ ಅಂಚೆ ಜೀವವಿಮಾ ಗ್ರಾಮ ಹಾಗೂ ಸಂಪೂರ್ಣ ಸುಕನ್ಯಾ ಸಮೃದ್ಧಿ ಗ್ರಾಮ, ತೆಗ್ಗಿಹಳ್ಳಿ ಗ್ರಾಮವನ್ನು ಸಂಪೂರ್ಣ ಬಚತ್ ಗ್ರಾಮ ಮತ್ತು ಸಂಪೂರ್ಣ ಸಕ್ಷಮ ಗ್ರಾಮಗಳನ್ನಾಗಿ ಘೋಷಿಸಲಾಯಿತು. ಈವರೆಗೂ ಹಾವೇರಿ ಜಿಲ್ಲೆಯಲ್ಲಿ 16 ಸಂಪೂರ್ಣ ವಿಮಾಗ್ರಾಮ, 71 ವಿಮಾಗ್ರಾಮ, 52 ಐಪಿಪಿಬಿ ಸಕ್ಷಮ ಗ್ರಾಮ, 7 ಸುಕನ್ಯಾ ಸಮೃದ್ಧಿ ಗ್ರಾಮ ಹಾಗೂ 4 ಬಚತ್ ಗ್ರಾಮಗಳೆಂದು ಘೋಷಿಸಲ್ಪಟ್ಟಿವೆ.
ಹಾವೇರಿಯ ಐಪಿಪಿಬಿ ಸೀನಿಯರ್ ಬ್ರಾಂಚ್ ಮ್ಯಾನೇಜರ್ ಜಗದೀಶ ಚಿಕ್ಕನರಗುಂದ ಮಾತನಾಡಿ, ಸಕರ್ಾರದ ಯೋಜನೆಗಳಾದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್, ಬೆಳೆವಿಮೆ, ನೆರೆಪರಿಹಾರ, ಪಿಂಚಣಿಗಳು, ಮಾತೃವಂದನ, ಗ್ಯಾಸ್ ಸಬ್ಸಿಡಿ, ವಿದ್ಯಾಥರ್ಿವೇತನ ಮುಂತಾದ ಯೋಜನೆಗಳಿಂದ ಬಂದಂತಹ ಹಣವನ್ನು ಅಂಚೆ ಕಚೇರಿಗಳು ಅಂಚೆ ಪೇಮೆಂಟ್ಸ್ ಬ್ಯಾಂಕ್ ಮೂಲಕ ಜನರ ಬಾಗಿಲಿಗೆ ತಲುಪಿಸುತ್ತಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಹಾವೇರಿ ವಿಭಾಗದ ಅಂಚೆ ಅಧೀಕ್ಷಕರಾದ ರಮೇಶ ಪ್ರಭು ಮಾತನಾಡಿದರು. ಅಂಚೆ ಗ್ರಾಹಕರಿಗೆ ಗ್ರಾಮೀಣ ಅಂಚೆ ಜೀವ ವಿಮಾ ಪಾಲಸಿ ಬಾಂಡ್ಗಳನ್ನು, ಸುಕನ್ಯ ಸಮೃದ್ಧಿ ಖಾತೆಯ ಪಾಸ್ ಪುಸ್ತಕಗಳನ್ನು ವಿತರಿಸಲಾಯಿತು. ಬೂದಗಟ್ಟಿ ಗ್ರಾಮದಲ್ಲಿ ಅಂಚೆ ನೌಕರರಿಂದ "ಅಂಚೆ ಮಹಾತ್ಮೆ ಕಿರುನಾಟಕ ಪ್ರದಶರ್ಿಸಲಾಯಿತು. ಚಿಕ್ಕಮಾಗನೂರಿನ ಬ್ರಾಂಚ್ ಪೋಸ್ಟಮಾಸ್ಟರ್ ಕೊಟ್ರಪ್ಪ ಚಲವಾದಿ ಇವರು ಜಾನಪದ ಹಾಡುಗಳನ್ನು ಹಾಡಿದರು.
ಕಾರ್ಯಕ್ರಮದಲ್ಲಿ ಕುಂಚೂರ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಕುಸುಮಾ ಮೇಗಳಮನಿ, ಬೂದಗಟ್ಟಿ ಗ್ರಾಮಪಂಚಾಯ್ತಿಯ ಶಾಂತವ್ವ ಕುರುಬರ, ಹಾಗೂ ಪವಿತ್ರಾ ಬಸವರಾಜ ಶೆಟ್ಟರ ಅಧ್ಯಕ್ಷತೆವಹಿಸಿದ್ದರು. ರಾಣೇಬೆನ್ನೂರ ಉಪವಿಭಾಗದ ನಿರೀಕ್ಷಕರಾದ ಆನಂದ ವಂದಾಲ, ಹಾವೇರಿ ಉಪವಿಭಾಗದ ನಿರೀಕ್ಷಕ ಸಾದೀಕ ಬಂಕಾಪುರ, ಶಿಗ್ಗಾಂವ ಉಪವಿಭಾಗದ ನಿರೀಕ್ಷಕ ಮೋಹನ ಮಾಳೋದೆ, ಹಾವೇರಿ ವಿಭಾಗದ ಸಹಾಯಕ ಅಂಚೆ ಅಧೀಕ್ಷಕ ನಿಂಗನಗೌಡ ಬಂಗಿಗೌಡ್ರ, ಅಂಚೆ ಸಿಬ್ಬಂದಿ, ಮೇಲ್ವಿಚಾರಕರು ಉಪಸ್ಥಿತರಿದ್ದರು.