ಹುಟ್ಟು ಮತ್ತು ಸಾವಿನ ಮದ್ಯ ಇರುವ ಸುವರ್ಣ ಅವಕಾಶವನ್ನ ಸದುಪಯೋಗಪಡಿಸಿಕೊಳ್ಳಿ : ದಾನಮ್ಮನವರ

Take advantage of the golden opportunity of birth and death liquor : Danammanavara

ಹುಟ್ಟು ಮತ್ತು ಸಾವಿನ ಮದ್ಯ ಇರುವ ಸುವರ್ಣ ಅವಕಾಶವನ್ನ ಸದುಪಯೋಗಪಡಿಸಿಕೊಳ್ಳಿ : ದಾನಮ್ಮನವರ

ಹಾವೇರಿ  10: ಪ್ರತಿಯೊಬ್ಬ ಮನುಷ್ಯನ ಹುಟ್ಟು ಸಾಮಾನ್ಯ. ಹುಟ್ಟಿದ ಮೇಲೆ ಸಾಯುವುದು ಖಚಿತ. ಹುಟ್ಟು ಮತ್ತು ಸಾವಿನ ಮದ್ಯ ಇರುವ ಸುವರ್ಣ ಅವಕಾಶವನ್ನ ಸದುಪಯೋಗಪಡಿಸಿಕೊಂಡು ಶುದ್ಧವಾದ, ಪ್ರಾಮಾಣಿಕ ಕಠಿಣ ಕಾಯಕದಿಂದ ಉತ್ತಮ ಸಾಧನೆ ಮಾಡಿ ಸಾಯುವ ಮುನ್ನವೆ ಹೊಸ ಇತಿಹಾಸ ನಿರ್ಮಿಸಬೇಕು ಎಂದು ಹಾವೇರಿ ಗೌರವಾನ್ವಿತ ಜಿಲ್ಲಾಧಿಕಾರಿಗಳಾದ ಡಾ. ವಿಜಯಮಹಾಂತೇಶ. ಬ. ದಾನಮ್ಮನವರ ಹೇಳಿದರು. ಸುಕ್ಷೇತ್ರ ಬೆಳ್ಳಟ್ಟಿ ಶ್ರೀ ಮಠದಲ್ಲಿ ಕಪೂರ ಕಾರ್ತೀಕೋತ್ಸವ ಸಂಭ್ರಮದಲ್ಲಿ ದಾಸೋಹಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು ಸಾಧನೆ ಮಾಡದೆ ಸತ್ತರೆ ಸಾವಿಗೆ ಅವಮಾನ ಅದಕ್ಕೆ ಜೀವನದಲ್ಲಿ ಎಂತಹ ಕಷ್ಟಗಳು ಬಂದರು    ಅಂಜದೆ ಛಲದಿಂದ ನಿರಂತರ ಪ್ರಯತ್ನಿಸಿ ಗುರಿ ಸಾಧನೆಗೆ ಮುಂದಾಗಬೇಕು. ಅದಕ್ಕೆ ಪರಮ ಪೂಜ್ಯ ಬಸವರಾಜ ಮಹಾಸ್ವಾಮಿಗಳು ಏನೂ ಇಲ್ಲದ ಶ್ರೀ ರಾಮಲಿಂಗೇಶ್ವರ ದಾಸೋಹ ಮಠವನ್ನಆಕಾಶದೆತ್ತರಕ್ಕೆ ಅಭಿರುದ್ದಿ ಮಾಡಿ ಸ್ವರ್ಗದ ತಾಣವನ್ನಾಗಿ ಮಾಡಿರುವುದು ಒಂದು ದೊಡ್ಡ ಇತಿಹಾಸ. ಶ್ರೀಮಠವನ್ನ ನೋಡಿ ಹಾಗೂ ಇಂದಿನ ಕಾರ್ಯಕ್ರಮಕ್ಕೆ ಸೇರಿದ ಭಕ್ತ ಸಾಗರವನ್ನ ನೋಡಿ ನನಗೆ ತುಂಬಾ ಸಂತಸವಾಗಿದೆ ಎಂದರು.   ಶ್ರೀಮಠದ ಕ್ಷೇತ್ರಾದಿಪತಿಗಳಾದ ಪೂಜ್ಯ ಬಸವರಾಜ ಮಹಾಸ್ವಾಮಿಗಳು ಮಾತನಾಡಿ  ನಾಡಿನ  ಸರ್ವ ಭಕ್ತರು ಶ್ರೀ ಮಠದ ಪ್ರತಿ ಕಾರ್ಯಕ್ರಮಕ್ಕೆ ಆಗಮಿಸಿ ಸ್ವ ಇಚ್ಛೆಯಿಂದ ಮಠ ನಮ್ಮ ಮಠವೆಂದು ಭಕ್ತಿ ಸೇವೆ ಮಾಡುತ್ತಿರುವುದು ಶ್ರೀ ರಾಮಲಿಂಗೇಶ್ವರ ಮಠ ಅಭಿರುದ್ದಿಗೆ ಕಾರಣವಾಗಿದೆ ಎಂದರು.        

  ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಅಗಡಿ -ಗುತ್ತಲ ಶ್ರೀಮಠದ ಪೂಜ್ಯ ಗುರುಸಿದ್ದ ಮಹಾಸ್ವಾಮಿಗಳು ಮಾತನಾಡಿ ಶ್ರೀಗಳು ನಾಡಿನಲ್ಲಿಯೆ ವಿಶೇಷವಾದ ಕಪೂರ ಕಾರ್ತಿಕೋತ್ಸವ ಮಾಡುವ ಮೂಲಕ  5 ಸಾವಿರಕ್ಕೂ ಅಧಿಕ ಭಕ್ತರು ಸೇರಿದ ವಿಶೇಷ ಸಂಭ್ರಮವಾಗಿದೆ ಎಂದರು.    ದಾಸೋಹಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ರೋಣದ ಪಿ ಎಸ್ ಐ ಶ್ರೀ ಪ್ರಕಾಶ, ಎನ್, ಬಣಕಾರ ಶ್ರೀಗಳ ಅಬೂತಪೂರ್ವ ಕಾರ್ಯದಿಂದ ಸದ್ದು -ಗದ್ದಲವಿಲ್ಲದೆ ಅಭಿರುದ್ದಿಯಾಗುತ್ತಿದೆ ಎಂದರು.     

   ಶ್ರೀಮಠದ ಭಕ್ತ ಡಾ. ಗಂಗಯ್ಯ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿ  ಪೂಜ್ಯ ಬಸವರಾಜ ಮಹಾಸ್ವಾಮಿಗಳು ತಮ್ಮ ಅರ್ಥಪೂರ್ಣವಾದ, ಸ್ಫೂರ್ತಿದಾಯಕವಾದ ಪ್ರವಚನದಿಂದ ಭಕ್ತರನ್ನ  ಅಜ್ಞಾನದಿಂದ ಜ್ಞಾನದ ಪರಿವರ್ತನೆ ಕಡೆಗೆ  ಮಾಡುವ ಮೂಲಕ ಭಕ್ತರ ಹೃದಯಲ್ಲಿ ಶಾಶ್ವತವಾಗಿ ನೆಲಸಿ ಭಕ್ತರ ಭಕ್ತಿ ಪ್ರೀತಿಗೆ ಪಾತ್ರರಾಗಿದ್ದಾರೆ. ಆದ್ದರಿಂದ ಭಕ್ತರು ಮುಂಬರುವ ಬೆಳ್ಳಿ ರಜಿತ ಮಹೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ಅಂದ್ರೆ ಹಿಂದೆ ಮಾಡದ ಮುಂದೆಯೂ ಮಾಡದ ಹಾಗೆ  ವಿಶೇಷವಾಗಿ ಮಾಡಲು ಕಂಕಣಬದ್ಧರಾಗಿ ಶ್ರಮಿಸೋಣ ಎಂದರು.   ಈ ಸಂದರ್ಭದಲ್ಲಿ ಪರಮ ಪೂಜ್ಯ ಬಸವರಾಜ ಮಹಾಸ್ವಾಮಿಗಳಿಗೆ ಬೆಳ್ಳಿ ಕಿರಿಟ ಧಾರಣೆ ಕಾರ್ಯಕ್ರಮ ಜರುಗಿತು.  ತಂಗೋಡದ ಪೂಜ್ಯ ಶಿವಕುಮಾರ ಸ್ವಾಮಿಗಳು ಮಾತನಾಡಿ ಈ ನಾಡಿನಲ್ಲಿ ಸರ್ವ ಭಕ್ತರು ಹಾಗೂ ಸರ್ವ ಪೂಜ್ಯರಿಗೂ ಪ್ರಿಯರಾದ   ಪೂಜ್ಯರೆಂದರೆ ಅದು ಬೆಳ್ಳಟ್ಟಿ ಪೂಜ್ಯ ಬಸವರಾಜ ಮಹಾಸ್ವಾಮಿಗಳು ಎಂದರು.  

 ವೇದಿಕೆಯಲ್ಲಿ ಸಂಸ್ಕೃತ ಶಿಕ್ಷಕರಾದ ಎನ್‌. ಎಸ್‌. ಬಟ್, ಶಿವಮೂರ್ತಿಪ್ಪ ಸಿಂಪಗೇರಿ, ಗಣಪತಿ ಗಾಂವಕರ್, ಪಂಚಯ್ಯ ಹಿರೇಮಠ, ಶಿವಚಲಕುಮಾರ ಸಾಲಿಮಠ, ಶ್ರೀನಿವಾಸ ರೆಡ್ಡಿ ಬಸವರೆಡ್ಡಿ ಉಪಸ್ಥಿತರಿದ್ದರು.  ಆರಂಭದಲ್ಲಿ ಅಕ್ಷಯದೇವಿಯ ಅಕ್ಕನ ಬಳಗದವರು ಸಹಸ್ರ ಸ್ಲೋಕ ಪಠಣ ಮಾಡಿದರು. ಸರ್ವ ಭಕ್ತರೂ ಕಾರ್ಯಕ್ರಮದ ವೈಭವ ನೋಡಿ ಸಂತಸಪಟ್ಟು ಪ್ರಸಾದ ಸ್ವೀಕರಿಸಿದರು.ವೀರನಗೌಡ ಪಾಟೀಲ ಸ್ವಾಗತಿಸಿದರು. ನವೀನ ಅಳವಂಡಿ ಪರಿಚಯಿಸಿದರು, ಶಿಕ್ಷಕ ಎಸ್, ಎಂ, ಮರೀಗೌಡ್ರ ನಿರೂಪಿಸಿದರು.