ತಾಹಿರ್ ಅಲಿ ಯವರ ಸುಪುತ್ರಿ ವಿವಾಹ ಕಾರ್ಯಕ್ರಮ

Tahir Ali's daughter's wedding ceremony

ಕೊಪ್ಪಳ  13: ಜಿಲ್ಲೆಯ ಅಲ್ಪಸಂಖ್ಯಾತ ಸಮುದಾಯದ ಪ್ರಮುಖ ಮುಖಂಡ ಉದ್ಯಮಿ  ಹಾಲಿ ವಸತಿ ಮೈಸೂರಿನ ತಾಹಿರ್ ಅಲಿ ಯವರ ಸುಪುತ್ರಿ ಡಾ, ಸಭಾತ ಝಮೀನ್‌ರವರ ಮದುವೆ ಹಾಲಿ ವಸತಿ ಬೆಂಗಳೂರಿನ ಡಾ, ಶೇಕ್ ಮುನಾಫ್‌ರೊಂದಿಗೆ ಜೂನ್ 12 ರ ಗುರುವಾರದಂದು ಮೈಸೂರಿನ ವೈಟ್ ಪ್ಯಾಲೇಸ್ ಫಂಕ್ಷನ್ ಹಾಲ್ ನಲ್ಲಿ ಜರುಗಿತು,.

ಸದರಿ ಮದುವೆ ಕಾರ್ಯದಲ್ಲಿ ಮೈಸೂರು ಜಿಲ್ಲೆಯ ಹಿರಿಯ ರಾಜಕಾರಣಿ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಜಿ.ಟಿ ದೇವೇಗೌಡರವರು ಭೇಟಿ ಮಾಡಿ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನೂತನ ವಧು ವರರಿಗೆ ಶುಭ ಹಾರೈಸಿದರು. 

ಈ ಸಂದರ್ಭದಲ್ಲಿ ತಾಹೀರ್ ಅಲಿಯವರ ಕುಟುಂಬದ ಪರವಾಗಿ ಜಿಟಿ ದೇವೇಗೌಡರವರಿಗೆ ಆತ್ಮೀಯವಾಗಿ ಸನ್ಮಾನಿಸಿ ಬರಮಾಡಿಕೊಂಡರು,  

ಕಾರ್ಯಕ್ರಮದಲ್ಲಿ ಸೋದರ ಸಂಬಂಧಿ ಹಾಗೂ ಕೊಪ್ಪಳ ನಗರ ಸಭೆಯ ಅಧ್ಯಕ್ಷ ಅಮ್ಜದ್ ಪಟೇಲ್, ಹಿರಿಯ ಸೋದರ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯ ಮತ್ತು ಕೊಪ್ಪಳದ ಹಿರಿಯ ಪತ್ರಕರ್ತ ಎಂ ಸಾಧಿಕ್ ಅಲಿ, ಬೆಳಗೋಳದ ಹಿರಿಯರಾದ ಹಾಜಿ ಎಂ ಹೆಚ್ ಜಾಗೀರ್ದಾರ್ ,ಕೊಪ್ಪಳದ ನಿವೃತ್ತ ಎ ಇ ಇ ಹಾಜಿಅಬ್ದುಲ್‌ರಜಾಕ್ ಪಟೇಲ್, ಮೈಸೂರಿನ ನಿವೃತ್ತಿ ಶಿಕ್ಷಕ ಹಾಗೂ ಸಮಾಜದ ಹಿರಿಯರಾದರ ಹಮತ್ ಉಲ್ಲಾ ಶರೀಫ್, ಮೈಸೂರು ಐಟಿಐ ಕಾಲೇಜಿನ ಪ್ರಾಚಾರ್ಯರಾದರ ಫೀಕ್ ಅಹಮದ್, ಕೊಪ್ಪಳದ ಕಾಂಗ್ರೆಸ್ ಮುಖಂಡಕರಿಮುದ್ದೀನ್‌ಕಿಲ್ಲೆದಾರ್, ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಅಮೀರ್ ಹಮ್ಜಾ ನದಾಫ್, ಕಾಂಗ್ರೆಸ್ ಮುಖಂಡ ಎಂ ಪಾಷಾ ಕಾಟನ್  ಸಿಂಧನೂರಿನ ಪ್ರಥಮ ದರ್ಜೆ ಗುತ್ತಿಗೆದಾರ ನಜೀರ್ ಹುಸೇನ್ ಸಾಲಗೊಂದ ತಾವರಗೆರೆಯ ಸೈಯದ್‌ರಫಿಕ್ ಹುಸೇನ್ ಪೀರಾ ,ಕೊಪ್ಪಳದ ಎಂ ವಿಜಾರತ್ ಅಲಿ ,ಬೆಂಗಳೂರಿನ ಸಾಫ್ಟ್ವೇರ್ ಇಂಜಿನಿಯರ್ ಇಮ್ರಾನ್ ಅಹಮದ್ ಜಾಗೀರ್ದಾರ್, ಶ್ರೀರಂಗಪಟ್ಟಣ ಕ್ಷೇತ್ರದ ಕಾಂಗ್ರೆಸ್ ಅಲ್ಪಸಂಖ್ಯಾತ ನಾಯಕ ಇರ್ಫಾನ್ ಅಹಮದ್ ಜಾಗೀರ್ದಾರ್ ಸೇರಿದಂತೆ ಕುಟುಂಬದ ಸದಸ್ಯರು ವಿವಿಧ ಸಂಘಟನೆಗಳ ಪದಾಧಿಕಾರಿಗಳು ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೊಂಡಿದ್ದರು.