ತಡವಲಗಾಕ್ಕೆ ಕಾರ್ಯನಿರ್ವಾಹಕ ಅಧಿಕಾರಿ ಡಾ.ಭೀಮಾಶಂಕರ ಕನ್ನೂರ ಬೇಟಿ

ತಡವಲಗಾಕ್ಕೆ ಕಾರ್ಯನಿರ್ವಾಹಕ ಅಧಿಕಾರಿ ಡಾ.ಭೀಮಾಶಂಕರ ಕನ್ನೂರ ಬೇಟಿ  Tadavalaga

ಇಂಡಿ   24: ತಾಲ್ಲೂಕಿನ ನಾಲ್ಕನೇ ಅತಿದೊಡ್ಡ ಗ್ರಾಮ ಪಂಚಾಯಿತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು ಇಂಡಿ ತಾಲ್ಲೂಕಿನ ತಡವಲಗಾ ಗ್ರಾಮ ಪಂಚಾಯಿತಿಗೆ ಇಂದು ಇಂಡಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಡಾ ಭೀಮಾಶಂಕರ ಕನ್ನೂರ ಅವರು ಬೇಟಿ ನೀಡಿದರು.2025-26 ನೇ ಸಾಲಿನಲ್ಲಿ ನರೇಗಾ ಯೋಜನೆಯ ಅಡಿಯಲ್ಲಿ ಮಾಡಲಾದ ಕೃಷಿ ಹೊಂಡ ನಿರ್ಮಾಣ ಸೇರಿದಂತೆ.ಅನೇಕ ಕಾಮಗಾರಿಗಳನ್ನು ವಿಕ್ಷಣೆ ಮಾಡಿದರು.ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿದರು, ಕೆಲವರು ಗ್ರಾಮದ ಹಲವಾರು ಸಮಸ್ಯೆಗಳ ಬಗ್ಗೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳ ಗಮನಕ್ಕೆ ತಂದರು.ಇದಕ್ಕೆ ಉತ್ತರಿಸಿದ ಕಾರ್ಯನಿರ್ವಾಹಕ ಅಧಿಕಾರಿಗಳು ಈ ಬಾರಿ ಉತ್ತಮ ಮಳೆ ಆಗುತ್ತಿದೆ.ಕೆಲವು ಕಡೆ ವಿವಿಧ ವಸತಿಗಳ ರಸ್ತೆ ಹಾಳಾಗಿವೆ. 

ಈ ಬಗ್ಗೆ ನನ್ನ ಗಮನಕ್ಕೆ ಇದೆ, ಮುಂಬರುವ ದಿನಗಳಲ್ಲಿ ಗ್ರಾಮದ ಎಲ್ಲಾ ಸಮಸ್ಯೆಗಳ ಬಗ್ಗೆ ತಡವಲಗಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸಲು  ಸೂಚನೆ ನೀಡಿದರು. ಇಂಡಿಗೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸ್ವೀಕರಿಸಿದ ಬಳಿಕ ​‍್ರ​‍್ರಥಮವಾಗಿ ತಡವಲಗಾ ಗ್ರಾಮಕ್ಕೆ ಬಂದು ಡಾ ಭೀಮಾಶಂಕರ ಕನ್ನೂರ ಅವರನ್ನು ತಡವಲಗಾ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರು ಹಾಗೂ ಗ್ರಾಮದ ಪ್ರಮುಖ ಅವರನ್ನು ಸನ್ಮಾನಿಸಿದರು.ಈ ಸಂದರ್ಭದಲ್ಲಿ ನರೇಗಾ ಇಂಡಿ ತಾಲೂಕಿನ ತಾಂತ್ರಿಕ ಸಂಯೋಜಕರಾದ ಶ್ರೀ ಸಾಹೀಲ್ ಧನಶಟ್ಟಿ, ಹಾಗೂ ತಾಲೂಕು ಪಂಚಾಯಿತಿ ಎಸ್ ಡಿ ಎ ರಾಜು ಚವ್ಹಾಣ, ತಡವಲಗಾ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಸುನಂದಾ ವಾಲಿಕಾರ, ತಡವಲಗಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜುನಾಥ ಡೊಳ್ಳಿ, ಕಾರ್ಯದರ್ಶಿ ಎಸ್ ಎನ್ ನಾಮದಾರ,ಸಹೇಬಲಾಲ್ ವಾಲಿಕಾರ, ತಡವಲಗಾ ಗ್ರಾಮ ಪಂಚಾಯಿತಿ ಸದಸ್ಯರಾದ ರಾಮನಗೌಡ ಪಾಟೀಲ,ರಮೇಶ ಬಡಿಗೇರ ರವಿ ಹೊಸಮನಿ ಚನ್ನು ಜಾಡರ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.ಹಾಗೂ ತಡವಲಗಾ ಗ್ರಾಮದ ಗ್ರಂಥಾಲಯದಲ್ಲಿ ಸುಮಾರು ವರ್ಷಗಳ ಕಾಲ ಸೇವೆ ಸಲ್ಲಿಸಿ ಸೇವಾ ನಿವೃತ್ತರಾದ ಶ್ರೀ ಶರಣಗೌಡ ಪಾಟೀಲ ಹಾಗೂ ನರೇಗಾ ಯೋಜನೆಯ ಇಂಡಿ ತಾಲೂಕು ತಾಂತ್ರಿಕ ಸಂಯೋಜಕರಾದ ಸಾಹೀಲ್ ಧನಶಟ್ಟಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ತಡವಲಗಾ ಗ್ರಾಮದ ಪ್ರಮುಖರಾದ ಲಕ್ಷ್ಮಣ ಲೋಕೂರ ಗೋವಿಂದ ಲೋಕೂರ ಸೇರಿದಂತೆ ಗ್ರಾಮದ ಅನೇಕರು ಉಪಸ್ಥಿತರಿದ್ದರು.