ಮಥುರಾ, ಫೆ 19, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಗ್ರಾದ ತಾಜ್ ಮಹಲ್ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಯಮುನಾ ನದಿಗೆ 500 ಕ್ಯೂಸೆಕ್ಸ್ ನೀರನ್ನು ಬಿಡುಗಡೆ ಮಾಡಲಾಗಿದೆ . ಯಮುನಾ ನದಿಯ ಸುಸುತ್ತಮುತ್ತಲ ಪ್ರದೇಶದ'ಪರಿಸರದ ಪರಿಸ್ಥಿತಿ' ಸುಧಾರಿಸಲು ಉತ್ತರಪ್ರದೇಶದ ನೀರಾವರಿ ಇಲಾಖೆ ಯಮುನಾ ನದಿಗೆ ನೀರು ಬಿಡುಗಡೆ ಮಾಡಿದೆ. ಟ್ರಂಪ್ ಇದೇ 24ರಿಂದ ಭಾರತಕ್ಕೆ ಎರಡು ದಿನಗಳ ಭೇಟಿ ನೀಡಲಿದ್ದಾರೆ. ಭೇಟಿಯ ವೇಳೆ ಉತ್ತರಪ್ರದೇಶದ ಆಗ್ರಾ ಹಾಗೂ ಗುಜರಾತ್ ಅಹ್ಮದಾಬಾದ್ ನಗರಕ್ಕೆ ಭೇಟಿ ನೀಡುವ ಕಾರ್ಯಕ್ರಮವಿದೆ. 'ಅಮೆರಿಕ ಅಧ್ಯಕ್ಷ ಟ್ರಂಪ್ ಭೇಟಿಯನ್ನು ಗಮನದಲ್ಇ ಇಟ್ಟುಕೊಂಡು ಯಮುನಾ ನದಿಯ ಪರಿಸರ ಕಾಪಾಡಲು ನೀರು ನ್ನು ಬಿಡುಗಡೆ ಮಾಡಲಾಗಿದೆ. ನೀರು ನಾಳೆ ಮಥುರಾದಲ್ಲಿರುವ ಯಮುನಾ ನದಿ ತಲುಪಲಿದೆ. ನದಿ ನೀರು ಬಿಡುಗಡೆಯಿಂದಾಗಿ ಯಮುನಾ ನದಿಯಲ್ಲಿ ಕೆಟ್ಟ ವಾಸನೆ ಕಡಿಮೆ ಆಗುವ ಸಾಧ್ಯತೆಯಿದೆ ಎಂದೂ ಉತ್ತರಪ್ರದೇಶದ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.