ಭಾರತ ಭೇಟಿಗೆ ಉತ್ಸುಕ, ಕಾತರ- ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್ ಫೆ 15 ಈ ತಿಂಗಳ ಕೊನೆಗೆ  ಭಾರತಕ್ಕೆ ಮೊದಲ ಬಾರಿಗೆ ಭೇಟಿ ನೀಡಲು ಬಹಳ ಉತ್ಸುಕ ಮತ್ತು ಕಾತರನಾಗಿದ್ದೇನೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್  ಸ್ವತಹ ಹೇಳಿಕೊಂಡಿದ್ದಾರೆ.  ಟ್ವಿಟ್ಟರ್ ನಲ್ಲಿ ಈ ಕುರಿತು ಪ್ರತಿಕ್ರಿಯಿಸಿ, ಅವರು  ಸಾಧ್ಯವಾದರೆ ವ್ಯಾಪರ ಒಪ್ಪಂದಕ್ಕೆ ಸಹಿ ಹಾಕುವ ಇಚ್ಚೆಯನ್ನೂ ಅವರು ವ್ಯಕ್ತಪಡಿಸಿದ್ದಾರೆ.ಪ್ರಧಾನಿ ನರೇಂದ್ರ ಮೋದಿಯವರ ಆಹ್ವಾನದ ಮೇರೆಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಿದೆ  24-25ರಂದು ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ ಎಂದು  ಅಮೆರಿಕ ಈಗಾಗಲೇ   ಸ್ಪಷ್ಟಪಡಿಸಿದೆ.  

ಅಧ್ಯಕ್ಷರ ಭೇಟಿ ಮಹತ್ವ ಮತ್ತು ಬಹಳ ವಿಶೇಷವಾಗಿದ್ದು, ಭಾರತದ ಜೊತೆಗಿನ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವಲ್ಲಿ  ಪ್ರಯೋಜಕಾರಿಯಾಗಲಿದೆ ಎಂದೂ  ಪ್ರಧಾನಿ ಮೋದಿ ತಿಳಿಸಿದ್ದಾರೆ.ಭಾರತಕ್ಕೆ ಆಹ್ವಾನಿಸಿರುವುದು ಬಹಳ ದೊಡ್ಡ ಗೌರವ, ಮಾರ್ಕ್ ಜುಕರ್ಬರ್ಗ್ ಇತ್ತೀಚೆಗೆ "ಡೊನಾಲ್ಡ್ ಜೆ. ಟ್ರಂಪ್ ಫೇಸ್ಬುಕ್ನಲ್ಲಿ ನಂಬರ್ 1 ಸ್ಥಾನದಲ್ಲಿದ್ದರೆ,  ಭಾರತದ ಪ್ರಧಾನಿ ನರೇಂದ್ರ ಮೋದಿ 2ನೇ ಸ್ಥಾನದಲ್ಲಿದ್ದಾರೆ ಎಂದು ತಿಳಿಸಿದ್ದರು.