ಲಕ್ಕಲಕಟ್ಟಿ ತಾಂಡಾ ಭೇಟಿ ವೇಳೆ ಗ್ರಾಪಂ ಸಿಬ್ಬಂದಿಗೆ ತಾಕೀತು ಮಾಡಿದ ತಾಪಂ ಇಒ ಚಂದ್ರಶೇಖರ ಕಂದಕೂರ
TP EO Chandrashekar Kandakura issued a warning to Gram Panchayat staff
ಗಜೇಂದ್ರಗಡ 29: ತಾಲೂಕಿನ ತಾಂಡಾ ನಿವಾಸಿಗಳಿಗೆ ಮೂಲಭೂತ ಸೌಲಭ್ಯಗಳ ಪೂರೈಕೆಯಲ್ಲಿ ಯಾವುದೇ ಲೋಪದೋಷಗಳಾಗದಂತೆ ನೋಡಿಕೊಳ್ಳಿ ಅಂತ ಗ್ರಾಮ ಪಂಚಾಯತ ಸಿಬ್ಬಂದಿಗಳಿಗೆ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ ಚಂದ್ರಶೇಖರ ಬಿ, ಕಂದಕೂರ ತಾಕೀತು ಮಾಡಿದರು.
ತಾಂಡಾ ನಿವಾಸಿಗಳು ದೂರವಾಣಿ ಕರೆ ಮಾಡಿ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಗಜೇಂದ್ರಗಡ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು ಇಂದು ಲಕ್ಕಲಕಟ್ಟಿ ತಾಂಡಾಕ್ಕೆ ಭೇಟಿ ನೀಡಿ ತಾಂಡಾ ಗ್ರಾಮಸ್ಥರ ಜೊತೆ ಸಮಾಲೋಚನೆ ನಡೆಸಿ ಸಮಸ್ಯೆ ಆಲಿಸಿದರು.ಭೇಟಿ ವೇಳೆ ಲಕ್ಕಲಕಟ್ಟಿ ತಾಂಡಾದಲ್ಲಿ 50 ಕ್ಕೂ ಅಧಿಕ ಕುಟುಂಬಗಳಿದ್ದು, ತಾಂಡಾದಲ್ಲಿ ನಿರಂತರ ವಿದ್ಯುತ್ ಸಂಪರ್ಕಕ್ಕೆ ಗ್ರಾಮಸ್ಥರು ಮನವಿ ಮಾಡಿದರು. ಮನವಿಗೆ ಸ್ಪಂದಿಸಿದ ಇಒ ಅವರು, ಸ್ಥಳದಲ್ಲೇ ಸಂಬಂಧಿಸಿದ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ನಿರಂತರ ವಿದ್ಯುತ್ ಸಂಪರ್ಕ ಇಲ್ಲದೇ ತಾಂಡಾ ನಿವಾಸಿಗಳು ಸಂಕಷ್ಟ ಎದುರಿಸುತ್ತಿದ್ದು, ನಿರಂತರ ವಿದ್ಯುತ್ ಸಂಪರ್ಕ ನೀಡಿ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು.
ತಾಂಡಾಕ್ಕೆ ಸಮರ್ಕ ಕುಡಿಯುವ ನೀರು ಹಾಗೂ ತಾಂಡಾದಲ್ಲಿ ಸ್ವಚ್ಛತೆ ಕಾರ್ಯ ನಿರಂತರವಾಗಿ ಕೈಗೊಂಡು ತಾಂಡಾದ ವಾತಾವರಣ ಸ್ವಚ್ಛಂದವಾಗಿಟ್ಟುಕೊಳ್ಳುವಂತೆ ಶ್ರಮಿಸಬೇಕೆಂದು ಸ್ಥಳದಲ್ಲಿದ್ದ ಗ್ರಾಮ ಪಂಚಾಯತಿ ಸಿಬ್ಬಂದಿಗಳಿಗೆ ತಾಕೀತು ಮಾಡಿದರು.ತಾಂಡಾ ನಿವಾಸಿಗಳು ಇ-ಕೆವೈಸಿ ಮಾಡಿಸಿಕೊಂಡು ನರೇಗಾ ಯೋಜನೆ ಸದುಪಯೋಗ ಪಡೆಯಿರಿನರೇಗಾ ಕಾಮಗಾರಿಗಳಲ್ಲಿ ಕೆಲಸ ಮಾಡಲು ಕೂಲಿಕಾರರಿಗೆ ಕೇಂದ್ರ ಸರ್ಕಾರ ಇ-ಕೆವೈಸಿ ಮಾಡಿಸುವುದು ಕಡ್ಡಾಯಗೊಳಿಸಿದೆ. ಅಕ್ಟೋಬರ್ -31 ರೊಳಗಾಗಿ ತಾಂಡಾದ ನರೇಗಾ ಕೂಲಿಕಾರರೆಲ್ಲರೂ ಇ-ಕೆವೈಸಿ ಮಾಡಿಸಿಕೊಳ್ಳಬೇಕು. ಇಲ್ಲವೇ ನರೇಗಾ ಉದ್ಯೋಗ ಚೀಟಿ ರದ್ದಾಗುವ ಸಾಧ್ಯತೆ ಹೆಚ್ಚು ಅಂತ ತಾಂಡಾ ನಿವಾಸಿಗಳಿಗೆ ತಿಳುವಳಿಕೆ ಮೂಡಿಸಿದರು. ಖುದ್ದು ಇಒ ಚಂದ್ರಶೇಖರ ಕಂದಕೂರ ಅವರೇ ತಾಂಡಾ ನಿವಾಸಿಗಳ ಇ-ಕೆವೈಸಿ ಮಾಡುವ ಮೂಲಕ ಕೂಲಿಕಾರರಲ್ಲಿ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಲಕ್ಕಲಕಟ್ಟಿ ಗ್ರಾಪಂ ಪಿಡಿಒ ಶಿವಯೋಗಿ ರಿತ್ತಿ, ಕಾರ್ಯದರ್ಶಿ ಶರಣಪ್ಪ ಮೇಟಿ, ತಾಂಡಾ ರೋಜಗಾರ ಮಿತ್ರ ಸಕ್ಕುಬಾಯಿ ರಾಥೋಡ, ಗ್ರಾಮ ಕಾಯಕ ಮಿತ್ರ ಸುಜಾತ ಮ್ಯಾಗೇರಿ ಹಾಗೂ ಗ್ರಾಪಂ ಸಿಬ್ಬಂದಿ ವರ್ಗ ಹಾಜರಿದ್ದರು.ಇದೇ ವೇಳೆ ತಾಂಡಾ ದಲ್ಲಿ ಬಾಕಿಯಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಇಂದು ಸಾಯಂಕಾಲದೊಳಗಾಗಿ ಪೂರ್ಣಗೊಳಿಸಬೇಕೆಂದು ಸಿಬ್ಬಂದಿಗೆ ಇಒ ಚಂದ್ರಶೇಖರ ಕಂದಕೂರ ಅವರು ಸೂಚಿಸಿದರು.
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್ 