ತ್ರಿಪಕ್ಷೀಯ ವ್ಯವಸ್ಥೆ ಜಾರಿಗೆ ಎಸ್.ಆರ್.ಪಾಟೀಲ್ ಸಲಹೆ

ಬೆಂಗಳೂರು,ಮಾ. 11,ಬಹುಪಕ್ಷೀಯ ವ್ಯವಸ್ಥೆ ಇರುವ ಭಾರತದಲ್ಲಿ ತ್ರಿಪಕ್ಷ ವ್ಯವಸ್ಥೆ ಜಾರಿಯಾಗಬೇಕು ಎಂದು ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಮೇಲ್ಮನೆಯಲ್ಲಿ ಪ್ರತಿಪಾದಿಸಿದರು.ಸಂವಿಧಾನದ ಮೇಲಿನ ಚರ್ಚೆಯ ವೇಳೆ ಕಾಂಗ್ರೆಸ್ನ ನಾರಾಯಣಸ್ವಾಮಿ ಕರ್ನಾಟಕದಲ್ಲಿ ಚುನಾವಣಾ ವ್ಯವಸ್ಥೆಯನ್ನು ಹಾಳು ಮಾಡಿದ್ದೇ ಬಿಜೆಪಿ. ಬಳ್ಳಾರಿಯ ಗಣಿ ರೆಡ್ಡಿಗಳಿಗೆ ಚುನಾವಣಾ ಉಸ್ತುವಾರಿ ಕೊಟ್ಟು ಮತದಾರರನ್ನೇ ಖರೀದಿ ಮಾಡಿ ಸರ್ಕಾರವನ್ನೇ ಉರುಳಿಸಿದ ಶ್ರೇಯಸ್ಸು ನಿಮಗೆ ಸೇರಬೇಕೆಂದು ಕುಟುಕಿದರು.ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್,  ಹೆಂಡ ಹರಿಸಿ ಇಡೀ ವ್ಯವಸ್ಥೆಯನ್ನೇ ಕಲುಷಿತಗೊಳಿಸಲಾಗಿದೆ. ಈಗ ಯಾರೇ ಚುನಾವಣೆ ನಿಂತರೂ ಎಷ್ಟು ಕೊಡುತ್ತೀರಿ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಕಾರಣೀಭೂತರು ಯಾರು ? ಎಂದು ಪ್ರಶ್ನಿಸಿದರು.ಮಾತು ಮುಂದುವರೆಸಿದ ಶ್ರೀಕಂಠೇಗೌಡ, ಈಗಿನ ವ್ಯವಸ್ಥೆ ಪಾತಾಳಕ್ಕೆ ಇಳಿದಿದೆ. ಹಣ, ಹೆಂಡ ಹಂಚಿದ್ದರೆ ಗೆಲ್ಲಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಬಹುಪಕ್ಷೀಯ ವ್ಯವಸ್ಥೆಯ ಬದಲಿಗೆ ತ್ರಿಪಕ್ಷೀಯ ವ್ಯವಸ್ಥೆ ಜಾರಿಗೆ ತರಬೇಕಿದೆ. 2559 ರಾಜಕೀಯ ಪಕ್ಷಗಳು ಆಯೋಗದಲ್ಲಿ ನೋಂದಾಯಿಸಿಕೊಂಡಿವೆ. ಇದರಲ್ಲಿ ಎಂಟು ರಾಜಕೀಯ ಹಾಗೂ ಐವತ್ತೆಂಟು ಪ್ರಾದೇಶಿಕ ಪಕ್ಷಗಳು ಸಕ್ರಿಯವಾಗಿವೆ. ಅಮೆರಿದಲ್ಲಿ ದ್ವಿಪಕ್ಷೀಯ ಪದ್ಧತಿ ಜಾರಿಯಲ್ಲಿದ್ದರೆ ನಮ್ಮಲ್ಲಿ ಬಹುಪಕ್ಷೀಯ ವ್ಯವಸ್ಥೆ ಅಸ್ತಿತ್ವದಲ್ಲಿದೆ. ವ್ಯವಸ್ಥೆ ಸರಿಮಾಡಲು ತ್ರಿಪಕ್ಷೀಯ ವ್ಯವಸ್ಥೆ ಅಗತ್ಯವಿದೆ ಎಂದು ಸಲಹೆ ನೀಡಿದರು.