ಹವಾಮಾನ ಬದಲಾವಣೆ ವಿರುದ್ಧದ ಹೋರಾಟಕ್ಕೆ 10 ಬಿಲಿಯನ್ ಡಾಲರ್ ನೆರವು : ವಿಶ್ವದ ಅತಿದೊಡ್ಡ ಶ್ರೀಮಂತ ಜೆಫ್ ಬೆಜೊಸ್ ಭರವಸೆ

ಮಾಸ್ಕೋ, ಫೆ 18, ಅಮೆರಿಕಾದ ಇಂಟರ್ನೆಟ್ ಉದ್ಯಮಿ ಮತ್ತು ಹೂಡಿಕೆದಾರ ಮತ್ತು ವಿಶ್ವದ ಶ್ರೀಮಂತ ವ್ಯಕ್ತಿ, ಜೆಫ್ ಬೆಜೊಸ್, ಹವಾಮಾನ ಬದಲಾವಣೆ ವಿರುದ್ಧದ ಹೋರಾಟಕ್ಕೆ  ನಿಧಿ ಸ್ಥಾಪಿಸಿದ್ದು 10 ಬಿಲಿಯನ್ ಡಾಲರ್ ನೆರವು ನೀಡುವುದಾಗಿ ಘೋಷಿಸಿದ್ದಾರೆ.

 ಹವಾಮಾನ ಬದಲಾವಣೆ ಭೂ ಗ್ರಹಕ್ಕೆ ಬಹುದೊಡ್ಡ ಅಪಾಯವಾಗಿದ್ದು, ಇದನ್ನು ನಿಗ್ರಹಿಸಲು ಹೊಸ ಮಾರ್ಗಗಳ ಅನ್ವೇಷಣೆಯ ಉಪಕ್ರಮಗಳಿಗೆ  ವಿಜ್ಞಾನಿಗಳು, ಸರ್ಕಾರೇತರ ಸಂಸ್ಥೆಗಳು ನಿಧಿಗಾಗಿ ಕೈ ಜೋಡಿಸುವಂತೆ  ಜೆಫ್ ಬೆಜೊಸ್ ಮನವಿ ಮಾಡಿದ್ದಾರೆ.  

 "ಸಣ್ಣ, ದೊಡ್ಡ ಕಂಪನಿಗಳು,  ಜಾಗತಿಕ ಸಂಘಟನೆಗಳು, ವ್ಯಕ್ತಿಗಳ ಸಾಮೂಹಿಕ ಇಚ್ಛಾಶಕ್ತಿಯಿಂದ ಹವಾಮಾನ ಬದಲಾವಣೆ ವಿರುದ್ಧದ ಪರಿಣಾಮಗಳನ್ನು ತಗ್ಗಿಸಬಹುದು ಈ ಕಾರ್ಯಕ್ಕೆ ಬೇಸಿಗೆ ವೇಳೆಗೆ ನಾನು 10 ಬಿಲಿಯನ್ ಡಾಲರ್ ನೀಡಲು ಬದ್ಧನಾಗಿರುವೆ” ಎಂದು ಇನ್ ಸ್ಟಾಗ್ರಾಮ್ ನಲ್ಲಿ ತಿಳಿಸಿದ್ದಾರೆ.