ಟಿಡಿಎಸ್, ಜಿಎಸ್ಟಿ ಮುಕ್ತಗೊಳಿಸಲು ಆಗ್ರಹಿಸಿ ಮನವಿ

ಬೈಲಹೊಂಗಲ 13: ಸಹಕಾರ ಸಂಸ್ಥೆಗಳನ್ನು ಆದಾಯ ತೆರಿಗೆ, ಟಿಡಿಎಸ್ ಹಾಗೂ ಜಿಎಸ್ಟಿಯಿಂದ ಮುಕ್ತಗೊಳಿಸಬೇಕೆಂದು  ಒತ್ತಾಯಿಸಿ ಕನರ್ಾಟಕ ಸ್ಟೇಟ್ ಕೋ.ಆಪರೆಟಿವ್ ಅಸೋಸಿಷಿಯೆನ ರಾಜ್ಯ ವ್ಯಾಪ್ತಿ ಪ್ರತಿಭಟನೆ ಕರೆ ನೀಡಿದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಶುಕ್ರವಾರ ಸಹಕಾರಿ ಸಂಸ್ಥೆಗಳ ಮುಖ್ಯಸ್ಥರು ಪ್ರತಿಭಟಿಸಿ ಉಪವಿಭಾಗಾಧಿಕಾರಿಗಳ ಮೂಲಕ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನಾ ಮೆರವಣಿಗೆ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ರಾಯಣ್ಣನ ಪುತ್ಥಳಿಗೆ ಹೂಮಾಲೆಗೈದು ಉಪವಿಭಾಗಾಧಿಕಾರಿ ಕಚೇರಿ ತಲುಪಿತು.

ಶಾಸಕರಾದ ಮಹಾಂತೇಶ ಕೌಜಲಗಿ, ಮಹಾಂತೇಶ ದೊಡಗೌಡ್ರ, ಮಾಜಿ ಶಾಸಕರಾದ ಡಾ.ವಿಶ್ವನಾಥ ಪಾಟೀಲ, ಸಹಕಾರಿ ಡಾ.ವ್ಹಿ.ಎಸ್.ಸಾಧುನವರ, ಡಾ.ಆರ್.ಬಿ.ಪಾಟೀಲ ಮಾತನಾಡಿ, ಸಹಕಾರಿ ಕ್ಷೇತ್ರ ಈ ದೇಶದ ಕೃಷಿಕರ ಮಧ್ಯಮ ವರ್ಗ, ಕಡುಬಡವರಿಗೆ ಸೇವೆ ನೀಡುವ ಕ್ಷೇತ್ರವಾಗಿದೆ.  

ಈ ಸಂಸ್ಥೆಯು ನೂರಾರು ವರ್ಷಗಳ ಇತಿಹಾಸ ಹೊಂದಿದ್ದು ಈ ದೇಶದ ಆಥರ್ಿಕ ವ್ಯವಸ್ಥೆಗೆ ಅತ್ಯಮೂಲ್ಯವಾದ ಕೊಡುಗೆ ನೀಡುತ್ತಾ ಬಂದಿದೆ. ಇತ್ತಿಚೆಗೆ ಕೇಂದ್ರ ಸರಕಾರ ಸಹಕಾರ ಸಂಸ್ಥೆಗಳ ಮೇಲೆ ಆದಾಯ ತೆರಿಗೆ, ಟಿಡಿಎಸ್ ಹಾಗೂ ಜಿಎಸ್ಟಿ ವಿಧಿಸಿರುವುದು ಸಹಕಾರ ಸಂಸ್ಥೆಗಳ ಬೆಳವಣಿಗೆಗೆ  ತೊಡಕನ್ನುಂಟು ಮಾಡಿದೆ. 

ಟಿಡಿಎಸ್ ವಿಧಿಸುವದರಿಂದ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ 52 ಸಾವಿರಕ್ಕೂ ಹೆಚ್ಚು ಸಹಕಾರ ಕ್ಷೇತ್ರಗಳ ಅಭಿವೃದ್ದಿಗೆ ಮಾರಕವಾಗಿ ಪರಿಣಮಿಸಿದೆ. 

ಈ ಕ್ಷೇತ್ರದಲ್ಲಿ ಕೋಟ್ಯಾಂತರ ಜನರು ಸದಸ್ಯತ್ವ ಪಡೆದಿದ್ದು ಲಕ್ಷಾಂತರ ಉದ್ಯೋಗ ಅವಕಾಶ ನೀಡಿದೆ. ಸಹಕಾರ ಕ್ಷೇತ್ರ ಉಳಿಸಿ ಬೆಳೆಸುವ ದೃಷ್ಟಿಯಿಂದ ಸಹಕಾರಿ ತತ್ವದ ಮೇಲೆ ವಿಧಿಸಿರುವ ಆದಾಯ ತೆರಿಗೆ, ಟಿಡಿಎಸ್ ಹಾಗೂ ಜಿಎಸ್ಟಿ ಕೂಡಲೇ ರದ್ದುಪಡಿಸಬೇಕು ಎಂದರು.

ವಕೀಲ  ಶ್ರೀಶೈಲ ಅಬ್ಬಾಯಿ ನೇತೃತ್ವ ವಹಿಸಿದ್ದರು. ಎಂ.ಆರ್.ಮೆಳವಂಕಿ, ವಿಜಯ ಮೆಟಗುಡ್ಡ, ಶಿವಾನಂದ ಬಡ್ಡಿಮನಿ, ಆನಂದ ತುರಮರಿ,  ಮಲ್ಲಿಕಾಜರ್ುನ ಸಾಲಿಮಠ,  ಮಲ್ಲಯ್ಯ ರುದ್ರಾಪುರ, ಎಂ.ಕೆ.ಸರದಾರ, ಶ್ರೀಶೈಲ ಯಡಳ್ಳಿ, ಮಲ್ಲಿಕಾಜರ್ುನ ಉಳ್ಳಾಗಡ್ಡಿ,  ಎಂ.ಕೆ.ಕುಂಬಾರ,  ರಾಯಪ್ಪ ಸಂಗೊಳ್ಳಿ, ಫಕ್ರಸಾಬ ಹಳೇಮನಿ, ಎಸ್.ಎಸ್.ಗೊರವರ, ಎಸ್.ಡಿ.ಬೂದಿಹಾಳ,  ಮಲ್ಲಿಕಾಜರ್ುನ ಗೌರಿ, ಕೃಷ್ಣಮೂತರ್ಿ, ಡಿ.ಆಯ್.ನದಾಫ ಹಾಗೂ  ನೂರಾರು ಸಹಕಾರಿಗಳು, ಸಿಬ್ಬಂದಿ ವರ್ಗ  ಇದ್ದರು.ದುಂಡೇಶ ಗರಗದ ನಿರೂಪಿಸಿ, ವಂದಿಸಿದರು.