ಟಿಸಿಐ ಎಕ್ಸ್ಪ್ರೆಸ್ ಲಿಮಿಟೆಡ್ ಎರಡನೇ ತ್ರೈಮಾಸಿಕ ಫಲಿತಾಂಶ ಪ್ರಕಟ
ಬೆಂಗಳೂರು, ನ.8: ಹೆಸರಾಂತ ಸರಕು ಸಾಗಣಿಕೆ ಸಂಸ್ಥೆಯಾದ ಟಿಸಿಐ ಎಕ್ಸ್ ಪ್ರೆಸ್ ಲಿಮಿಟೆಡ್ 2019 ರ ಎರಡನೇ ತ್ರೈಮಾಸಿಕದಲ್ಲಿ ಶೇಕಡ 9.3ರಷ್ಟು ಆದಾಯ ಮತ್ತು ಶೇಕಡ 60.6 ಲಾಭ ಬೆಳವಣಿಗೆಯನ್ನು ದಾಖಲಿಸಿದೆ. ಈ ತ್ರೈಮಾಸಿಕದಲ್ಲಿ 271 ಕೋಟಿ ರೂಪಾಯಿ ಕಾರ್ಯಾಚರಣೆ ಆದಾಯವನ್ನು ಗಳಿಸಿದರೆ ಇದೇ ಅವಧಿಯ ಹಿಂದಿನ ವರ್ಷದಲ್ಲಿ 248 ರೂಪಾಯಿ ಆದಾಯ ಗಳಿಸಿತ್ತು. ಹಣಕಾಸು ವರ್ಷ 2020 ರ ಎರಡನೇ ತ್ರೈಮಾಸಿಕದಲ್ಲಿ 26 ಕೋಟಿ ರೂಪಾಯಿ ಲಾಭವನ್ನು ಗಳಿಸಿದೆ. ಇದೇ ಸಮಯದಲ್ಲಿ ಕಳೆದ ವರ್ಷ ಸಂಸ್ಥೆಯು 16 ಕೋಟಿ ರೂಪಾಯಿ ಲಾಭ ಗಳಿಸಿತ್ತು. ಈ ಮೂಲಕ ಸಂಸ್ಥೆಯು 60.6 ರಷ್ಟು ಬೆಳವಣಿಗೆ ಕಂಡಿದೆ. ಲಾಭದ ಮಾರ್ಜಿನ್ ಹಣಕಾಸು ವರ್ಷ 2020 ರಲ್ಲಿ ಶೇಕಡ 9.6 ದಾಖಲಿಸಿದರೆ ಇದೇ ಸಂದರ್ಭದಲ್ಲಿ ಕಳೆದ ವರ್ಷ ಶೇಕಡ 6.6 ದಾಖಲಿಸಿತ್ತು. ಆಡಳಿತ ಮಂಡಳಿಯು 1.5 ರೂಪಾಯಿ ಪ್ರತಿ ಷೇರಿಗೆ ಮಧ್ಯಂತರ ಡಿವಿಡೆಂಟ್ ಘೋಷಿಸಿದೆ. ಟಿಸಿಐ ಎಕ್ಸ್ ಪ್ರೆಸ್ ಕಾರ್ಯಾಚರಣೆ ಆದಾಯ 271 ಕೋಟಿ ರೂಪಾಯಿ ಗಳಿಸಿದೆ ಎಂದು ಘೋಷಣೆ ಮಾಡಲು ಸಂತಸ ಆಗುತ್ತಿದೆ. ಶೇಕಡ 9.3 ರಷ್ಟು ಹೆಚ್ಚಳ ಕಂಡಿದೆ. ಸಂಸ್ಥೆಯು ಈ ಸಾಲಿನಲ್ಲಿ 26 ಕೋಟಿ ರೂಪಾಯಿ ಲಾಭವನ್ನು ಗಳಿಸಿದೆ. ಶೇಕಡ 60.6 ರಷ್ಟು ಹೆಚ್ಚಳ ಕಂಡಿದೆ. ಸಣ್ಣ ಮತ್ತು ಮದ್ಯಮ ಉದ್ಯಮದ ಗ್ರಾಹಕರ ಹೆಚ್ಚಳದ ಪರಿಣಾಮ ಆದಾಯ ಹೆಚ್ಚಾಗಿದೆ ಹಾಗೆಯೇ ಕಾರ್ಯಾಚರಣೆಯ ಕ್ಷಮತೆಯಿಂದ ಲಾಭದ ಮಾರ್ಜಿನ್ ನಲ್ಲಿ ಹೆಚ್ಚಳ ಕಂಡಿದೆ ಎಂದು ಟಿಸಿಐ ಎಕ್ಸ್ ಪ್ರೆಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಚಂದರ್ ಅಗರ್ವಾಲ್ ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 