ವೃಕ್ಷಥಾನ್ ಹೆರಿಟೇಜ್ ರನ್‌- 2025ಗೆ ಅತಿಥಿಯಾಗಿ ಟಿ. ಭೂಬಾಲನ್‌ಗೆ ಆಹ್ವಾನ

ವೃಕ್ಷಥಾನ್ ಹೆರಿಟೇಜ್ ರನ್‌- 2025ಗೆ ಅತಿಥಿಯಾಗಿ ಟಿ. ಭೂಬಾಲನ್‌ಗೆ ಆಹ್ವಾನ T. Bhubalan invited as guest for Vrikshathan Heritage Run- 2025

ವಿಜಯಪುರ 10: ನಗರದಲ್ಲಿ ಡಿಸೆಂಬರ್ 7 ರಂದು ನಡೆಯಲಿರುವ ವೃಕ್ಷಥಾನ್ ಹೆರಿಟೇಜ್ ರನ್‌- 2025 ರಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವಂತೆ ರಾಜ್ಯ ಇ- ಆಡಳಿತ ಇಲಾಖೆಯ ನಾಗರಿಕರಿಗೆ ವಿದ್ಯುನ್ಮಾನ ಸೇವೆ ಪೂರೈಕೆ ನಿರ್ದೇಶಕ(ಇಟಜಛಿಣಡಿಠಛಿ ಆಜಟತಜಡಿಥಿ ಓಜಿ ಅಣದಜಟಿ ಖಜಡಿತಛಿ) ಟಿ. ಭೂಬಾಲನ್ ಅವರಿಗೆ ಆಹ್ವಾನ ನೀಡಲಾಗಿದ್ದು, ಈ ಆಮಂತ್ರಣಕ್ಕೆ ಅವರು ಒಪ್ಪಿಗೆ ಸೂಚಿಸಿದ್ದಾರೆ. 

ಇಂದು ಬುಧವಾರ ಬೆಂಗಳೂರಿನಲ್ಲಿ ವೃಕ್ಷಥಾನ್ ಹೆರಿಟೇಜ್ ರನ್‌- 2025ರ ರಾಯಭಾರಿ ಮತ್ತು ಭಾರತೀಯ ರೇಲ್ವೆಯ ಹಿರಿಯ ಅಧಿಕಾರಿ ಪ್ರವೀಣ ಕಾತರಕಿ ಮತ್ತು ಕೈಗಾರಿಕೆ ಸಚಿವರ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಹಾಂತೇಶ ಬಿರಾದಾರ ಅವರು ಟಿ. ಭೂಬಾಲನ್ ಅವರನ್ನು ಭೇಟಿಯಾಗಿ ಹೆರಿಟೇಜ್ ರನ್ ನಲ್ಲಿ ಅತಿಥಿಯಾಗಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಟಿ. ಭೂಬಾಲನ್ ಅವರು, ಬಸವನಾಡಿನ ಕೋಟಿ ವೃಕ್ಷ ಅಭಿಯಾನದ ಯಶೋಗಾಥೆ ವಿಶ್ವಖ್ಯಾತಿಯ ನ್ಯೂಯಾರ್ಕ್‌ ಟೈಮ್ಸ್‌ ನಲ್ಲಿ ವಿಶೇಷ ವರದಿಯಾಗಿ ಪ್ರಕಟವಾಗಿರುವುದು ಎಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ.  ವಿಜಯಪುರ ಜಿಲ್ಲಾಧಿಕಾರಿಯಾಗಿ ನಾನೂ ಕೂಡ ಈ ಅಭಿಯಾನದಲ್ಲಿ ಅಳಿಲು ಸೇವೆ ಸಲ್ಲಿಸಿದ ಬಗ್ಗೆ ಸಂತಸವಿದೆ.  ಸಚಿವ ಎಂ. ಬಿ. ಪಾಟೀಲ ಅವರ ಕನಸಿನ ಈ ಅಭಿಯಾನಕ್ಕೆ ಬಸವನಾಡಿನ ನೀಡಿರುವ ಸ್ಪಂದನೆ ಸ್ಮರಣೀಯವಾಗಿದೆ.  ಅಷ್ಟೇ ಅಲ್ಲ, ವಿಜಯಪುರ ಜಿಲ್ಲೆಯ ಜನ ಭಾವನಾತ್ಮಕವಾಗಿ ಜಲ, ವೃಕ್ಷ, ಶಿಕ್ಷಣ, ಆರೋಗ್ಯದ ಬಗ್ಗೆ ಹೊಂದಿರುವ ಅಪಾರ ಕಾಳಜಿಯಿಂದ ಈ ಅಭಿಯಾನ ವಿಶ್ವವ್ಯಾಪಿ ಗಮನ ಸೆಳೆಯಲು ಕಾರಣವಾಗಿದೆ.   

ಈ ಬಾರಿಯ ಹೆರಿಟೇಜ್ ರನ್ ನಲ್ಲಿ ನಾನೂ ಕೂಡ 10 ಕಿ. ಮೀ. ಓಟದಲ್ಲಿ ಪಾಲ್ಗೊಳ್ಳುತ್ತೇನೆ.  ಅಲ್ಲದೇ, ಸಮಾನ ಮನಸ್ಕ ಓಟಗಾರ ಸ್ನೇಹಿತರನ್ನು ಪಾಲ್ಗೋಳ್ಳಲು ಆಹ್ವಾನಿಸುತ್ತೇನೆ ಎಂದು ಹೇಳಿದರು.ಧನ್ಯವಾದಗಳು.ಕಠಠ ಅಚಿಠಿಣಠ: 1 ಂಟಿಜ 2 ಗಿಡಿಣಚಿಣಠ ಖಿ ಃಠರಛಚಿಟಚಿಟಿ ಋತಣಜಜ: ವಿಜಯಪುರ ನಗರದಲ್ಲಿ ಡಿಸೆಂಬರ್ 7 ರಂದು ನಡೆಯಲಿರುವ ವೃಕ್ಷಥಾನ್ ಹೆರಿಟೇಜ್ ರನ್‌- 2025 ರಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವಂತೆ ರಾಜ್ಯ ಇ- ಆಡಳಿತ ಇಲಾಖೆಯ ನಾಗರಿಕರಿಗೆ ವಿದ್ಯುನ್ಮಾನ ಸೇವೆ ಪೂರೈಕೆ ನಿರ್ದೇಶಕ(ಇಟಜಛಿಣಡಿಠಛಿ ಆಜಟತಜಡಿಥಿ ಓಜಿ ಅಣದಜಟಿ ಖಜಡಿತಛಿ) ಟಿ. ಭೂಬಾಲನ್ ಅವರಿಗೆ ಬೆಂಗಳೂರಿನಲ್ಲಿ ವೃಕ್ಷಥಾನ್ ಹೆರಿಟೇಜ್ ರನ್‌- 2025ರ ರಾಯಭಾರಿ ಮತ್ತು ಭಾರತೀಯ ರೇಲ್ವೆಯ ಹಿರಿಯ ಅಧಿಕಾರಿ ಪ್ರವೀಣ ಕಾತರಕಿ ಮತ್ತು ಕೈಗಾರಿಕೆ ಸಚಿವರ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಹಾಂತೇಶ ಬಿರಾದಾರ ಅವರು  ಆಹ್ವಾನ ನೀಡಿದರು.