ಲೋಕದರ್ಶನ ವರದಿ
ಕಾರವಾರ 01: ಬೈತಖೋಲ ಅಂಚೆ ಕಚೇರಿಯಿಂದ ಜೂನ್ 2017ರಲ್ಲಿ ಬೆಳಕಿಗೆ ಬಂದ ಗ್ರಾಹಕರ ಠೇವಣಿ ಹಣ ಗುಳುಂ ಪ್ರಕರಣದಲ್ಲಿ ನ್ಯಾಯ ಕೇಳಿ ಕಾರವಾರದ ಪ್ರಧಾನ ಅಂಚೆ ಕಚೇರಿಯ ಎದುರು ಡಿ.3 ರಂದು ಬೆಳಿಗ್ಗೆ ಸಾಂಕೇತಿಕ ಪ್ರತಿಭಟನೆ ನಡೆಯಲಿದೆ ಎಂದು ಬೈತಖೋಲ ಅಂಚೆ ಕಚೇರಿ ವ್ಯಾಪ್ತಿಯ ಸಂತ್ರಸ್ತ ಗ್ರಾಹಕರ ಹಿತ ರಕ್ಷಣಾ ಸಮಿತಿ ತಿಳಿಸಿದೆ.
ಬೈತಖೋಲದಲ್ಲಿ ಗ್ರಾಹಕರಿಂದ ಹಣ ಪಡೆದು ಠೇವಣಿಯ ನೆಪದಲ್ಲಿ 20 ಲಕ್ಷಕ್ಕೂ ಹೆಚ್ಚಿನ ಹಣವನ್ನು ನುಂಗಿ ಹಾಕಿದ ಪ್ರಕರಣದಲ್ಲಿ ಪ್ರಧಾನ ಅಂಚೆ ಕಚೇರಿಯಿಂದಾಗಲಿ, ಜಿಲ್ಲಾಡಳಿತದಿಂದಾಗಲಿ, ಪೊಲೀಸರಿಂದಾಗಲಿ ನ್ಯಾಯ ಸಿಗಲಿಲ್ಲ ಎಂದು ಬೈತಖೋಲನ ಬಡ ಗ್ರಾಹಕರು ಶನಿವಾರ ಇಲ್ಲಿನ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು. ಅಂಚೆ ಇಲಾಖೆಯ ಹಿರಿಯ ಅಧಿಕಾರಿಗಳು ಸಹ ಹಂಗಾಮಿ ನೌಕರನ ವಂಚನೆಯನ್ನು ಬಯಲಿಗೆ ಎಳೆಯಲು ಬಡ ಮಹಿಳಾ ಗ್ರಾಹಕರ ಪರ ನಿಲ್ಲಲಿಲ್ಲ ಎಂದು ವಿಷಾಧಿಸಿದರು. ಬೆವರು ಸುರಿಸಿ ದುಡಿದ ಹಣವನ್ನು ಠೇವಣಿಯಾಗಿ ಇಟ್ಟಿದ್ದೆವು. ಅಂಚೆ ಕಚೇರಿಯ ಖಾತೆಯಲ್ಲಿ ಸಹ ದಿನವೂ ದುಡಿದ ಹಣದ ಸ್ವಲ್ಪಭಾಗವನ್ನು ಉಳಿತಾಯ ಮಾಡುತ್ತಿದ್ದೆವು. ಹಂಗಾಮಿ ನೌಕರನೊಬ್ಬ 18 ವರ್ಷಗಳಿಂದ ಗ್ರಾಹಕರನ್ನು ವಂಚಿಸಿದ ಬಗೆ ಇಲಾಖೆಗೆ ಹೇಗೆ ಅರ್ಥವಾಗಲಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದರು.
ಗ್ರಾಹಕರು ದೂರು ನೀಡಿದಾಗ ಅಂಚೆ ಇಲಾಖೆಯ ಹಿರಿಯ ಅಧಿಕಾರಿಗಳು ಪೊಲೀಸ್ ಠಾಣೆಗೆ ದೂರು ನೀಡಿ ತಮ್ಮ ಕೆಲಸ ಮುಗಿಯಿತು ಎಂದರು. ಪೊಲೀಸರು ಆರೋಪ ಹೊತ್ತ ವ್ಯಕ್ತಿಯನ್ನು ಬಂಧಿಸಿದರು. ಆದರೆ ಎಲ್.ಜಿ.ನಾಯ್ಕ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡಿದ್ದಾನೆ. ಬೈತಖೋಲದಲ್ಲಿ ಅನ್ಯಾಯಕ್ಕೆ ತುತ್ತಾದವರು, ಹಣ ಕಳೆದು ಕೊಂಡವರು ದೂರು ಸಹ ನೀಡದಂತೆ ಕೆಲವರು ಹಾದಿ ತಪ್ಪಿಸಿದರು. ನಿಮ್ಮ ಹತ್ತಿರ ಹಣ ಕಟ್ಟಿದ್ದಕ್ಕೆ ಆಧಾರವೇ ಇಲ್ಲ ಎಂದು ಮುಗ್ದರನ್ನು ಹಾದಿ ತಪ್ಪಿಸಿದರು ಎಂದು ಬೈತಖೋಲ ಅಂಚೆ ಕಚೇರಿ ವ್ಯಾಪ್ತಿಯ ಸಂತ್ರಸ್ತ ಗ್ರಾಹಕರ ಹಿತ ರಕ್ಷಣಾ ಸಮಿತಿಯವರು ಆರೋಪಿಸಿದರು. ಸಮಿತಿಯ ಪರವಾಗಿ ಮಾತನಾಡಿದ ಸಮಾಜಿಕ ಕಾರ್ಯಕರ್ತ ವಿಲ್ಸನ್ ಫನಾಂಡೀಸ್ ಬೈತಖೋಲದಲ್ಲಿ ದುಡಿಯುವ ಕಾಮರ್ಿಕರು ಅಂಚೆ ಕಚೇರಿಯಲ್ಲಿ ಹಣ ಇಟ್ಟು ಕಳೆದುಕೊಂಡಿದ್ದಾರೆ.
ಕೇಂದ್ರ ಸಕರ್ಾರಕ್ಕೆ, ಜಿಲ್ಲಾಧಿಕಾರಿಗೆ, ಪೊಲೀಸರಿಗೆ ದೂರು ನೀಡಿಯಾಯಿತು. ಸಮಸ್ಯೆಗೆ ಪರಿಹಾರ ಸಿಗಲಿಲ್ಲ. ಕೆಲವರು ಆರೋಪಿಯ ರಕ್ಷಣೆಗೆ ನಿಂತರು ಎಂದು ವಿಲ್ಸನ್ ಆರೋಪಿಸಿದರು. ಪತ್ರಿಕಾಗೋಷ್ಠಿಯಲ್ಲಿ ಇದ್ದ ಮಹಿಳಾ ಗ್ರಾಹಕರು ಕಣ್ಣೀರು ಹಾಕಿದರು. ಮೋಸ ಮಾಡಿದ ವ್ಯಕ್ತಿಗೆ ಹಿಡಿಶಾಪ ಹಾಕಿದ್ದು ಕೇಳಿಬಂತು.