ಬಕ್ರೀದ ತ್ಯಾಗ ಬಲಿದಾನದ ಪ್ರತೀಕ: ಡಾ.ಮಿನಹಾಜುದ್ದೀನ
Symbol of Bakrida Tyaga Sacrifice: Dr. Minahazuddin
ತಾಳಿಕೋಟಿ 28: ಬಕ್ರೀದ್ ಹಬ್ಬದ ನಿಮಿತ್ಯ ಪಟ್ಟಣದ ಇತಿಹಾಸಿಕ ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರು ಗುರುವಾರ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಧಾರ್ಮಿಕ ಯುವ ಮುಖಂಡ ಡಾ. ಮಿನಹಾಜ್ಜುದ್ದೀನ ಕಾಜಿ ಅವರು ಮಾತನಾಡಿ ತ್ಯಾಗ ಮತ್ತು ಬಲಿದಾನದ ಪ್ರತೀಕವಾಗಿರುವ ಬಕ್ರೀದ್ ಹಬ್ಬವು ಪ್ರವಾದಿ ಇಬ್ರಾಹೀಮರು ತಮ್ಮ ಪುತ್ರ ಇಸ್ಮಾಯೀಲರನ್ನು ದೇವಸಂ ಪ್ರೀತಿಗಾಗಿ ಬಲಿ ನೀಡಲು ಮುಂದಾದ ಅವಿಸ್ಮರಣೀಯ ಘಟನೆಯನ್ನು ಸ್ಮರಿಸುವ ದಿನವಾಗಿದೆ. ನಾವೆಲ್ಲರೂ ದೇವನಲ್ಲಿ ಅಚಲವಾದ ವಿಶ್ವಾಸವನ್ನಿಟ್ಟು ಬದುಕಬೇಕು ಅನ್ಯಾಯದ ಮಾರ್ಗ ತುಳಿಯಬಾರದು. ಇತರ ಧರ್ಮಿಯರ ಭಾವನೆಗಳಿಗೆ ಧಕ್ಕೆ ಆಗದ ರೀತಿಯಲ್ಲಿ ಹಬ್ಬಗಳನ್ನು ಎಲ್ಲಾ ಧರ್ಮಿಯರನ್ನು ಜೊತೆಗೂಡಿಸಿಕೊಂಡು ಆಚರಿಸಬೇಕು ಎಂದರು. ಅಲ್ಲಾಹನಿಗೆ ಪ್ರಾಮಾಣಿಕ ಗುಣ ಅತ್ಯಂತ ಪ್ರಿಯವಾದದ್ದು ಅದನ್ನು ಬೆಳೆಸಿಕೊಂಡರೆ ಪುಣ್ಯ ಪ್ರಾಪ್ತವಾಗುತ್ತದೆ.
ಎಂದಿಗೂ ಅನ್ಯಾಯದ ಮಾರ್ಗ ತುಳಿಯಬಾರದು, ಬಡವರ ಕಷ್ಟಗಳಿಗೆ ಸ್ಪಂದಿಸಬೇಕು ಕಷ್ಟದಲ್ಲಿರುವವರ ಸಮಸ್ಯೆಗಳಿಗೆ ಸ್ಪಂದಿಸಿದರೆ ದೇವನು ಸಂತುಷ್ಟನಾಗುತ್ತಾನೆ. ಪ್ರವಾದಿ ಮೊಹಮ್ಮದ್ ಅವರ ಆದರ್ಶಗಳನ್ನು ಅನುದಿನವು ಅನುಸರಿಸಿ. ದುಶ್ಚಟಗಳಿಂದ ದೂರವಿದ್ದು ಉತ್ತಮ ಬದುಕನ್ನು ರೂಡಿಸಿಕೊಳ್ಳಿ ಇತರ ಧರೆಮಿಯರೊಂದಿಗೆ ಪ್ರೀತಿ ಮತ್ತು ವಿಶ್ವಾಸದಿಂದ ಬದುಕಲು ಪ್ರಯತ್ನಿಸಿ. ದೇಶದ ಕಾನೂನು ಮತ್ತು ಇತರ ಧರ್ಮಿಯರ ಭಾವನೆಗಳಿಗೆ ಧಕ್ಕೆ ಆಗದ ರೀತಿಯಲ್ಲಿ ಹಬ್ಬಗಳನ್ನು ಆಚರಿಸಿ ಎಂದರು. ಈದ್ ಸಾಮೂಹಿಕ ಪ್ರಾರ್ಥನೆಯಲ್ಲಿ ಧಾರ್ಮಿಕ ಮುಖಂಡ ಸಯ್ಯದ್ ಶಕೀಲ ಅಹ್ಮದ್ ಖಾಜಿ,ಹಫೀಜ ಇಬ್ರಾಹಿಂ ಮುಲ್ಲಾ, ಮುಫ್ತಿ ಅಜರುದ್ದೀನ ಕಾಸ್ಮಿ, ಗನಿಸಾಬ ಲಾಹೋರಿ,
ಅಲ್ಲಾಭಕ್ಷಸಾಬ ನಮಾಜಕಟ್ಟಿ, ಅಬ್ದುಲ್ ರೆಹಮಾನಸಾಬ ಎಕೀನ,ಹಸನಸಾಬ ಮನಗೂಳಿ,ಅಬ್ದುಲ್ ರಜಾಕ ಮನಗೂಳಿ, ಸಿಕಂದರಸಾಬ ವಠಾರ,ಫಸಿಯುದ್ದೀನ ಖಾಜಿ, ಖಾಜಾಹುಸೇನ ಸಗರ,ಎಂ.ಎ.ಮೇತ್ರಿ,ರೋಶನ ಡೋಣಿ,ಎ.ಕೆ.ಬಾಗಬಾನ, ಮೆಹಬೂಬ ಚೋರಗಸ್ತಿ, ನಿರಂಜನಶಾ ಮಕಾಂದಾರ, ಅಬ್ದುಲ್ ಸತ್ತಾರ ಅವಟಿ,ಡಾ.ನಜೀರ ಕೋಳ್ಯಾಳ, ಮುಜಾಹೀದ ನಮಾಜಕಟ್ಟಿ, ಇಬ್ರಾಹಿಂ ಮನ್ಸೂರ, ಅಬ್ದುಲ್ ರೆಹಮಾನ ನಮಾಜಕಟ್ಟಿ, ಶಮಶುದ್ದೀನ ನಾಲಬಂದ, ದಾದಾಪೀರ ಚೌಧರಿ, ಮಹಮ್ಮದ್ ಶಫೀಕ ಇನಾಮದಾರ, ತನ್ವೀರ್ ಮನಗೂಳಿ ಮತ್ತಿತರರು ಇದ್ದರು.
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ
ಕೆಪಿಸಿಸಿ ಮಾಜಿ ಸದಸ್ಯ, ವೈದ್ಯ ಡಾ. ಡಿ.ಎಚ್.ಮಾಲದಾರ ವಿಧಿವಶ
ಕನ್ನಡಪರ ನಿರ್ಣಯಕ್ಕೆ ಹಿಂದೇಟು: ಮಹಾಪೌರರ ನಡೆ ಈಗ ಸಂಶಯಕ್ಕೆ ಯಡೆ
ಬೆಳಗಾವಿಯಲ್ಲಿ ಬಿಗ್ ಹಾಕಿದ ಮನೆಗಳಿಗೆ ಪೊಲೀಸ ಭದ್ರತೆ ವ್ಯವಸ್ಥೆಗೆ ಜನರ ಮೆಚ್ಚುಗೆ
ಬೆಳಗಾವಿಗೆ ಬಂದ 20 ಜನ ಬಾಂಗ್ಲಾದವರಲ್ಲ : ಬಂಗಾಳ ಮೂಲದ ಚಿನ್ನದಂಗಡಿ ಕೂಲಿ ಕಾರ್ಮಿಕರು
ಭೀಕರ ಅಪಘಾತಕ್ಕೆ ಓರ್ವ ಸಾವು : ಮೂವರಿಗೆ ಗಂಭೀರ ಗಾಯ 