ಹಾನಿಕಾರ ಕೋನೋ ಕಾರ​‍್ಪಸ ಗಿಡಗಳು : ಮನುಷ್ಯನ ಆರೋಗ್ಯಕ್ಕೆ ಮಹಾ ಡೇಂಜರ್

ಹಾನಿಕಾರ ಕೋನೋ ಕಾರ​‍್ಪಸ ಗಿಡಗಳು : ಮನುಷ್ಯನ ಆರೋಗ್ಯಕ್ಕೆ ಮಹಾ ಡೇಂಜರ್ Harmful Kono Carpas plants: A great danger to human health

ಲೋಕದರ್ಶನ ವರದಿ

ಕಂಪ್ಲಿ 28:  ಪಟ್ಟಣದ ಪುರಸಭೆಗೆ ಒಳಪಡುವ ಉದ್ಯಾನವನಗಳು ಸಮರ​‍್ಕ ನಿರ್ವಹಣೆ ಇಲ್ಲದೇ ಕಳೆಗುಂದುವಂತೆ ಮಾಡಿರುವುದು ಒಂದೆಡೆಯಾದರೆ ಮತ್ತೊಂದೆಡೆ ಸಸಿಗಳಿಂದ ಹೆಮ್ಮರವಾಗಿ ಬೆಳೆದು ನಿಂತ ಕೋನೋ ಕಾರ​‍್ಪಸ ಗಿಡಗಳು ಮನುಷ್ಯ ಮತ್ತು ಪ್ರಾಣಿ, ಪಕ್ಷಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರತೊಡಗಿವೆ.  ನಗರದ ಸೌಂದರ್ಯೀಕರಣ ಹಾಗೂ ಪರಿಸರವನ್ನು ಹಸಿರಾಗಿಸಲು ಇಲ್ಲಿನ ಹೊಸಪೇಟೆ ಬೈಪಾಸ್ ರಸ್ತೆಯ ಮಹಾಲಕ್ಷ್ಮೀ ಲೇಓಟ್‌ನ ಪುರಸಭೆ ವ್ತಾಪ್ತಿಗೆ ಒಳಪಡುವ ಉದ್ಯಾನವನದಲ್ಲಿ ನೆಟ್ಟಿರುವ ಕೋನೋ ಕಾರ​‍್ಪಸ ಗಿಡಗಳು ಜನರ ಉಸಿರಿಗೆ ಕಂಟಕವಾಗುವ ಭೀತಿ ಎದುರಾಗಿದೆ.  

ಪಟ್ಟಣದ ಲೇಓಟ್ ನಲ್ಲಿರುವ ಉದ್ಯಾನವನದಲ್ಲಿ ನೂರಾರು ಗಿಡಗಳನ್ನು ಹಾಗೂ ಇತರೆ ಕಡೆಗಳಲ್ಲಿ ಸಾಕಷ್ಟು ಗಿಡಗಳನ್ನು ನೆಡಲಾಗಿತ್ತು. ಇಲ್ಲಿನ ಸ್ಥಳದಲ್ಲಿ ಗಿಡಗಳನ್ನು ನೆಡುವ ಮುನ್ನ ಇವೂ ಪರಿಸರಕ್ಕೆ ಹಾನಿಕಾರಕ ಎಂಬುದು ತಿಳಿದಿದ್ದರೆ, ಇಲ್ಲಿನ ಉದ್ಯಾನವನ ಸೇರಿದಂತೆ ನಾನಾ ಕಡೆಗಳಲ್ಲಿ ಕೋನೋ ಕಾರ​‍್ಪಸ ಹುಟ್ಟುತ್ತಿದ್ದಿಲ್ಲ. ಆದರೆ, ಇಲ್ಲಿ ಸಾಕಷ್ಟು ಗಿಡಗಳು ಬೆಳೆದು, ಈಗ ಪರಿಸರ ಮತ್ತು ಮನುಷ್ಯನ ಮೇಲೆ ದುಷ್ಪರಿಣಾಮದ ಹಿನ್ನಲೆ ಸ್ಥಳೀಯ ನಿವಾಸಿಗಳು ಗಿಡಗಳ ತೆರವಿಗೆ ಹಕ್ಕೋತ್ತಾಯ ಮಾಡುವಂತಾಗಿದೆ.  

ಇಂತಹ ಗಿಡಗಳನ್ನು ನೆರೆಯ ಹಲವು ರಾಜ್ಯಗಳಲ್ಲಿ ನಿಷೇಧಿಸಿದುಂಟು. ರಾಜ್ಯ ಸರ್ಕಾರದ ಸ್ಪಷ್ಟತೇ ಇಲ್ಲದೇ ಇದ್ದರೂ, ಅರಣ್ಯ ಇಲಾಖೆಯು ಪರಿಸರಕ್ಕೆ ಮಾರಕವಾದ ಕೋನೋ ಕಾರ​‍್ಪಸ ಗಿಡಗಳಿಗೆ ನಿಬಂರ್ಧಗಳನ್ನು ವಿಧಿಸಿದೆ. ಆದ್ದರಿಂದ ಕರ್ನಾಟಕ ರಾಜ್ಯದಲ್ಲಿ ಇಂತಹ ಗಿಡಗಳನ್ನು ಬುಡ ಸಮೇತವಾಗಿ ತೆಗೆದು ಹಾಕಲು ಸರ್ಕಾರ ಸೂಕ್ತ ನಿರ್ದೇಶನ ನೀಡಬೇಕಾಗಿದೆ. ಇಂತಹ ನಿಷೇಧಿತ ಸಸಿಗಳನ್ನು ಪಟ್ಟಣ ಸೇರಿದಂತೆ ತಾಲೂಕಿನದಲ್ಲಿ ಬೆಳೆಸುತ್ತಿರುವುದು ವಿಪರ್ಯಸವಾಗಿದೆ.  

ಉಸಿರು ನಿಲ್ಲಿಸುವ ಗಿಡ : ಕೋನೋ ಕಾರ​‍್ಪಸ ಎಂಬ ಗಿಡ ತುಂಬಾ ಅಪಾಯಕಾರಿಯಾಗಿದೆ. ಈ ಸಸ್ಯ ನೆಡುವುದರಿಂದ ಅಂತರ್ಜಲ ಮಟ್ಟ ಕುಸಿತಕ್ಕೆ ಕಾರಣ ಜತೆಗೆ ಜನರಿಗೆ ಉಸಿರಾಟ ಸಮಸ್ಯೆ ಹಾಗೂ ಅಸ್ತಮಾ ತಂದೊಡ್ಡಲಿದೆ ಎಂಬುದು ಅಧ್ಯಯನ ವರದಿಗಳಲ್ಲಿ ಬಹಿರಂಗ ಆಗಿದೆ. ಗಾಳಿಯಲ್ಲಿ ಬೀಜಗಳು ಹರಡಿದರೂ ಕೂಡ ವೇಗವಾಗಿ ಬೆಳೆಯುವ ಶಕ್ತಿ ಹೊಂದಿರುವ ಹಾಗೂ ಕಡಿಮೆ ನೀರಿನಲ್ಲೇ ಹಚ್ಚ ಹಸಿರಾಗಿ ಕಂಗೊಳಿಸುವ ಗಿಡಗಳ ನಿರ್ವಹಣೆ ಕೂಡ ಸುಲಭ ಎಂಬುವಂತಾಗಿದೆ. ಇದರಿಂದ ಅತಿ ಹೆಚ್ಚಾಗಿ ಇಂತಹ ಗಿಡಗಳ ಮೊರೆ ಹೋಗುತ್ತಿರುವುದು ದುರ್ಧೈವವಾಗಿದೆ.    

ತೆರವಿಗೆ ಆಗ್ರಹ : ಆಕ್ಸಿಜನ್ ಬದಲು ಕಾರ್ಬನ್ ಉತ್ಪಾದಿಸುವ ಕೋನೋ ಕಾರ​‍್ಪಸ ಗಿಡಗಳನ್ನು ಪಟ್ಟಣದ ಉದ್ಯಾನವನ ಹಾಗೂ ಇತರೆ ಕಡೆಗಳಲ್ಲಿ ನೆಟ್ಟಿರುವುದರಿಂದ ಅವುಗಳನ್ನು ತೆರವುಗೊಳಿಸಿ ಪರಿಸರ ಉಳಿಸಲು ಕ್ರಮ ಜರುಗಿಸುವ ಜವಾಬ್ದಾರಿ ಅರಣ್ಯ ಮತ್ತು ಪುರಸಭೆ ಮೇಲಿದ್ದು, ನಗರದಲ್ಲಿ ಪರಿಸರ ಗುಣಮಟ್ಟಕ್ಕಾಗಿ ನಮ್ಮ ಪರಿಸರ ಉಳಿಸಲು ಕೂಡಲೇ ಕೋನೋ ಕಾರ​‍್ಪಸ ಗಿಡಗಳನ್ನು ತೆರವು ಮಾಡಬೇಕೆಂಬುದು ಸ್ಥಳೀಯ ನಿವಾಸಿಗಳ, ಸಾರ್ವಜನಿಕರ, ಪರಿಸರ ಪ್ರೇಮಿಗಳ ಅಭಿಲಾಷೆಯಾಗಿದೆ. 

ಅಪಾಯದ ವಿದ್ಯುತ್ ಪರಿವರ್ತಕ : ಇಲ್ಲಿನ ಉದ್ಯಾನವನದಲ್ಲಿ ಮಕ್ಕಳ ಆಟಿಕೆ ಸಾಮಾನುಗಳಿದ್ದು, ಸಾಕಷ್ಟು ಮಕ್ಕಳು ಸೇರಿದಂತೆ ಸಾರ್ವಜನಿಕರು ಬರುವದುಂಟು. ಆದರೆ, ಇಲ್ಲಿನ ವಿದ್ಯುತ್ ಪರಿವರ್ತಕದ ಅಪಾಯದ ನಡುವೆ ಮಕ್ಕಳು, ಜನರು ಸಮಯ ಕಳೆಯುತ್ತಿದ್ದಾರೆ. ಮತ್ತು ಇಲ್ಲಿ ಮುಳ್ಳುಗಂಟಿಗಳಿಂದ ಆವೃತವಾಗಿದ್ದು, ವಿಷಜಂತು ನಡುವೆ ಮಕ್ಕಳು, ಜನರು ವಾಸಿಸುವಂತಾಗಿದೆ. ಆದ್ದರಿಂದ ಅಪಾಯಕ್ಕೆ ಆಹ್ವಾನಿಸುತ್ತಿರುವ ವಿದ್ಯುತ್ ಪರಿವರ್ತಕವನ್ನು ಬೇರೆಡೆ ಸ್ಥಳಾಂತರಿಸಬೇಕು. ಮತ್ತು ಸ್ಬಚ್ಚತೆಗೆ ಹೆಚ್ಚಿನ ಅಧ್ಯತೆ ನೀಡಬೇಕೆಂದು ಇಲ್ಲಿನ ಜನರ ಹಕ್ಕೋತ್ತಾಯವಾಗಿದೆ.