ಗವಿಮಠ ಜಾತ್ರೆಯ ಮಿಠಾಯಿ ಪಳಾರ ಅಂಗಡಿಕಾರರಿಗೆ ಸನ್ಮಾನ
Sweet shopkeepers honored at Gavimath fair
ಕೊಪ್ಪಳ 08: ನಗರ, ಭಾಗ್ಯನಗರ ಮತ್ತು 20 ಕ್ಕೂ ಅಧಿಕ ಹಳ್ಳಿಗಳ ಪರಿಸರ ಮಾಲಿನ್ಯಕ್ಕೆ ಕಾರಣವಾದ ದೂಳು, ವಿಷಾನಿಲ ಸೂಸುವ ಮೂಲಕ ಆರೋಗ್ಯಕ್ಕೆ ಮಾರಕವಾದ ಕಾರ್ಖಾನೆ ವಿರೋಧಿ ಹೋರಾಟ 70 ನೇ ದಿನ ಪೂರೈಸಿರು.
ಈ ಸಂದರ್ಭದಲ್ಲಿ ಗವಿಸಿದ್ಧೇಶ್ವರ ಜಾತ್ರೆಯಲ್ಲಿ ಹಾಕಲಾದ ಮಿಠಾಯಿ, ಪಳಾರ ಅಂಗಡಿಗಳಲ್ಲಿ ಕಾರ್ಖಾನೆ ವಿರುದ್ಧ, ಪರಿಸರ ರಕ್ಷಣೆ, ಬಲ್ಡೋಟಾ ಹಠಾವೋ ಘೋಷಣೆ ಮೂಲಕ ಜನಜಾಗೃತಿ ಮೂಡಿಸುವ ಕಾರ್ಯ ಮಾಡಿದ ಅಂಗಡಿ ಮಾಲಿಕರಿಗೆ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ, ಪರಿಸರ ಹಿತರಕ್ಷಣಾ ವೇದಿಕೆಯ ಜಂಟಿ ಕ್ರಿಯಾ ವೇದಿಕೆ ಮೂಲಕ ಸನ್ಮಾನ ಮಾಡಿ ಕೃತಜ್ಞತೆ ಸಲ್ಲಿಸಿದರು.
ಜಾತ್ರೆಯ ರಥಬೀದಿಯಲ್ಲಿ ಯುವತಿಯರು ಹಾಕಿದ ರಂಗೋಲಿಯಲ್ಲಿ ಕಾರ್ಖಾನೆ ವಿರೋಧಿ ಹೋರಾಟವನ್ನು ಬೆಂಬಲಿಸಿ ಹಾಕಿದ ರಂಗೋಲಿ ಮತ್ತು ಪಳಾರ, ಮಿಠಾಯಿ ಅಂಗಡಿ ಮಾಲಿಕರು ಬ್ಯಾನರ್ ನಲ್ಲಿ ಎಂ.ಎಸ್.ಪಿ.ಎಲ್ ವಿಸ್ತರಣೆ ನಿಲ್ಲಿಸಿ, ಬಲ್ಡೋಟಾ ಹಠಾವೋ ಕೊಪ್ಪಳ ಬಚಾವೋ, ಕಾರ್ಖಾನೆ ಕಳಿಸಿ ಪರಿಸರ ಉಳಿಸಿ, ಕೃಷಿ ಭೂಮಿ ಉಳಿಸಿ, ಕಾರ್ಖಾನೆ ನಿಲ್ಲಿಸಿ ಕೊಪ್ಪಳ ಉಳಿಸಿ ಎಂಬಿತ್ಯಾದಿ ಘೋಷಣೆಗಳನ್ನು ಬರೆಸುವ ಮೂಲಕ ಹೋರಾಟಕ್ಕೆ ಶಕ್ತಿ ನೀಡುವ ಜೊತೆಗೆ, ಹೋರಾಟವನ್ನು ಜನಸಮಾನ್ಯರ ಹತ್ತಿರ ತೆಗೆದುಕೊಂಡು ಹೋಗಿದ್ದಾರೆ, ಇದಕ್ಕೆ ಪ್ರೇರಣೆಯಾದ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಕಾರ್ಖಾನೆ ವಿರೋಧಿ ಹೋರಾಟದಲ್ಲಿ ಎಲ್ಲರೊಟ್ಟಿಗೆ ಇದ್ದಾರೆ, ಅವರ ಬೆಂಬಲ ಇರೋದು ಸ್ವಷ್ಟ ಎಂದು ಹೋರಾಟ ವೇದಿಕೆ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ಹೇಳಿದರು. ಪ್ರತಿ ಅಂಗಡಿಯ ಮುಂದೆ ಹೋಗಿ ಅದರ ಮಾಲಿಕರಿಗೆ ಸನ್ಮಾನ ಮಾಡಿ ಜಯಘೋಷಗಳನ್ನು ಹಾಕುವ ಮೂಲಕ ಜನಜಾಗೃತಿ ಮೂಡಿಸಲಾಯಿತು.
ಮಿಠಾಯಿ, ಪಳಾರ ಅಂಗಡಿ ಮಾಲೀಕರಾದ ಪ್ರದೀಪ, ಎಂ.ಡಿ. ರಫೀಕ್, ಎಂ.ಡಿ.ಜಾವೀದ್, ಎಂ.ಡಿ. ಹುಸೇನ ಮಿಠಾಯಿ, ಗುರುರಾಜ ಬಳ್ಳಾರಿ ಅವರಿಗೆ ಸನ್ಮಾನ ನೆರವೇರಿಸಿದ ತಂಡದಲ್ಲಿ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಪ್ರಕಾಶಕ ಡಿ.ಎಂ.ಬಡಿಗೇರ, ಕೃಷಿ ಬೆಲೆ ಆಯೋಗ ಸದಸ್ಯರು ಡಿ.ಎಚ್. ಪೂಜಾರ, ಮಹಿಳಾ ಮುಖಂಡರಾದ ಜ್ಯೋತಿ ಎಂ. ಗೊಂಡಬಾಳ, ಕವಿಯಿತ್ರಿ ಪುಷ್ಪಲತಾ ಏಳುಬಾವಿ, ವಿದ್ಯಾ ನಾಲವಾಡ, ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ, ಮಂಜುನಾಥ ಜಿ. ಗೊಂಡಬಾಳ, ಎಸ್. ಬಿ. ರಾಜೂರು, ಜಿ. ಬಿ. ಪಾಟೀಲ್, ಕವಿ ಮಹೇಶ ಮನ್ನಾಪುರ, ಶರಣು ಗಡ್ಡಿ, ಪಕೀರಗೌಡ ಕಾಸನಕಂಡಿ, ನಿವೃತ್ತ ಶಿಕ್ಷಕರು ವಿರುಪಾಕ್ಷಪ್ಪ ದೊಡ್ಡಮನಿ ಪಾಲ್ಗೊಂಡರು.
70ನೇ ದಿನದ ವೇದಿಕೆಯ ಧರಣಿಯಲ್ಲಿ ಹಿರಿಯ ಸಾಹಿತಿ ಎಚ್. ಎಸ್. ಪಾಟೀಲ್, ಎ. ಎಂ. ಮದರಿ, ಮಹಾಂತೇಶ ಮಲ್ಲನಗೌಡರ, ಶಿವಾನಂದಯ್ಯ ಬೀಳಗಿಮಠ, ಬಸವರಾಜ ಪೂಜಾರ, ಯಲ್ಲಪ್ಪ ಸಿದ್ದರು ಶಿವಪುರ, ಗವಿಸಿದ್ದಪ್ಪ ಎಫ್. ತೊಂಡಿಹಾಳ, ಬಸವರಾಜ್ ಸೋಮನಾಳ, ಅಂದಪ್ಪ ಹುರಳಿ, ಭೀಮಸೇನ ಕಲಕೇರಿ, ರಮೇಶ ಬೋಚನಹಳ್ಳಿ, ಮಂಜುನಾಥ ಕವಲೂರು ಪಾಲ್ಗೊಂಡರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 