ಬೆಳಗಾವಿ, 11: ದಿ. 11ರಂದು ನಗರದ ಗೋಮಟೇಶ ವಿದ್ಯಾಪೀಠ ಹಿಂದವಾಡಿ, ಬೆಳಗಾವಿ ಇಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಹಾಗೂ ಭಾರತ ಮಾತಾ ಪೂಜಾ ಮತ್ತು ಧರ್ಮ ಜಾಗರಣ ಸಮನ್ವಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಮಾರಂಭದಲ್ಲಿ ದಿಲೀಪ ವೇಣರ್ೆಕರ, ಉತ್ತರ ಕನರ್ಾಟಕ ಪ್ರಾಂಥ ಸಂಯೋಜಕ, ಧರ್ಮ ಜಾಗರಣ ಇವರು ರಾಷ್ಟ್ರಭಕ್ತಿ, ಭಾರತಮಾತೆಯ ಪೂಜನದ ಬಗ್ಗೆ ವಿವರಿಸಿದರು, ಸ್ವಾಮಿ ವಿವೇಕಾನಂದರ ಚಿಕ್ಯಾಗೋ ಭಾಷಣದ ಬಗ್ಗೆ ವಿವರವಾಗಿ ಮಾತನಾಡಿದರು, ಇದೇ ಸಂದರ್ಭದಲ್ಲಿ ಗೋಮಟೇಶ ವಿದ್ಯಾಪೀಠದ ಅಧಿಷ್ಠಾತರೂ ಹಾಗೂ ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಮಾಜಿ ಶಾಸಕರಾದ ಸಂಜಯ ಪಾಟೀಲ ಇವರು ವಿದ್ಯಾಥರ್ಿಗಳು ಹಾಗೂ ಸಿಬ್ಬಂದಿವರ್ಗದವರನ್ನು ಉದ್ಧೇಶಿಸಿ ಮಾತನಾಡುತ್ತ ಭಾರತ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಯ ಬಗ್ಗೆ ಮನಮುಟ್ಟುವಂತೆ ವಿವರವಾಗಿ ಹೇಳಿದರು. ಈ ಸಂದರ್ಭದಲ್ಲಿ ಉತ್ತರ ಕನರ್ಾಟಕ ಪ್ರಾಂಥ ನಿಧಿ ಪ್ರಮುಖ ಲಕ್ಷ್ಮಣ ಪವಾರ ಇವರು ಉಪಸ್ಥಿತರಿದ್ದರು.
ಶ್ರೀಕಾಂತ ಬಿ ದೇಶನ್ನವರ ದೇಶ ಭಕ್ತಿಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭಮಾಡಿದರು, ಸಂಜೀವ ಕೆ ಇವರು ಅತಿಥಿಗಳನ್ನು ಸ್ವಾಗತಿಸಿ ಪರಿಚಯಸಿದರು, ಸುನೀಲ ಪಾಟೀಲ, ವಂದಿಸಿದರು. ಈ ಸಂದರ್ಭದಲ್ಲಿ ಗೋಮಟೇಶ ವಿದ್ಯಾಪೀಠದ ಸಿಬ್ಬಂದಿವರ್ಗ ಹಾಗೂ ವಿದ್ಯಾಥರ್ಿಗಳು ಉಪಸ್ಥಿತರಿದ್ದರು.