ಲೋಕದರ್ಶನ ವರದಿ
ಬೈಲಹೊಂಗಲ 12: ದೇಶವನ್ನು ಮುನ್ನಡೆಸಲು ಸಶಕ್ತವಾದ ಯುವಪಡೆಯನ್ನು ನಿಮರ್ಿಸುವುದೇ ನನ್ನ ಗುರಿ ಎನ್ನುತ್ತಿದ್ದ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ, ಮಾನಸಿಕ,ದೈಹಿಕ, ಅಧ್ಯಾತ್ಮಿಕ, ನೈತಿಕ ಸಾಮಾಜಿಕವಾಗಿ ಎಂದೂ ಶಕ್ತಿ ಕಳೆದುಕೊಳ್ಳಬಾರದು ಎಂದು ಬಾಪೂಜಿ ಕಾಲೇಜಿನ ಪ್ರಾಚಾರ್ಯ ಹಸನ ಗೋರವನಕೊಳ್ಳ ಹೇಳಿದರು.
ಅವರು ರವಿವಾರ ಪಟ್ಟಣದ ಬಾಪೂಜಿ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದರ 157 ನೇ ಜಯಂತಿ ಅಂಗವಾಗಿ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ವಿವೇಕಾನಂದರ ವಿವೇಕವಾಣಿಯು ನಮ್ಮ ಯುವ ಪೀಳಿಗೆಯ ತಲೆ ಒಳಗೆ ಹೊಕ್ಕರೆ ಭಾರತೀಯ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಸಾಧ್ಯವಾಗುತ್ತದೆ ಎಂದರು.
ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ ಮಾತನಾಡಿ, ಸ್ವಾಮಿ ವಿವೇಕಾನಂದರು ತಮ್ಮ ಶಕ್ತಿಯುತ ವ್ಯಕ್ತಿತ್ವದ ಮೂಲಕ ಅಪೂರ್ವ ವಾಗ್ಮಿಯತೆ ಹಾಗೂ ಪ್ರಚೋದನಾತ್ಮಕ ಬರವಣಿಗೆ ಮೂಲಕ ನಮ್ಮ ರಾಷ್ರ್ಟ ಚೇತನವನ್ನು ಜಾಗೃತಗೊಳಿಸಿ ಯುವಕರಲ್ಲಿ ನವೋತ್ಸವಾಹವನ್ನು ಕೆರಳಿಸಿ ಅವರಲ್ಲಿ ನಮ್ಮ ಸಂಸ್ಕೃತಿಯ ಬಗ್ಗೆ ಹೆಮ್ಮೆಯನ್ನು ಕುದುರಿಸಿ ಸ್ವತಂತ್ರ ನವ ಭಾರತ ನಿಮರ್ಾಣಕ್ಕೆ ಬುನಾದಿ ಹಾಕಿದ್ದರು ಎಂದರು.
ಸಾರಿಗೆ ಸಂಸ್ಥೆ ಘಟಕದ ವ್ಯವಸ್ಥಾಪಕ ಚೇತನ ಸಾಲಿಮಠ, ಸಾರಿಗೆ ಇಲಾಖೆಯ ನಿವೃತ್ತ ನೌಕರ ಬಿ.ಬಿ.ಸಂಗನಗೌಡ್ರ, ಸಂಸ್ಥೆಯ ಅಧ್ಯಕ್ಷ ಎಸ್.ವ್ಹಿ.ಯರಡ್ಡಿ, ಸುರೇಶ ಯರಡ್ಡಿ, ಬೂದಿಹಾಳ ಸರಕಾರಿ ಶಾಲೆಯ ಮುಖ್ಯೋಪಾಧ್ಯಾಯ ಎನ್.ಆರ್.ಠಕ್ಕಾಯಿ, ಪ್ರಾಚಾರ್ಯ ಆರ್.ಜಿ.ಸವನೂರ ಉಪನ್ಯಾಸಕರಾದ ಎಸ್.ಡಿ.ಹೊಸಮನಿ, ಬಿ.ಸಿ.ಹುಬ್ಬಳ್ಳಿ, ಜಿ.ಎಮ್.ತುರಮರಿ, ಎಲ್.ಎಫ್.ಬೊಳೆತ್ತಿನ, ಎಂ.ಎಂ.ಕಟಕೋಳ, ಆರ್.ಎಸ್.ಕುಲಕಣರ್ಿ, ಎನ್.ಎಸ್.ಹೂಲಿ, ವಿ.ವಿ.ಸಂಗೊಳ್ಳಿ, ದೀಪಾ ಪಾಟೀಲ, ಜೆ.ಬಿ.ಕಮ್ಮಾರ, ಎಂ.ಎಂ.ಶೆಲ್ಲಿ, ಪಿ.ಡಿ.ಮೋಟಗಿ, ಎಸ್.ಎಸ್.ಉಪ್ಪಿನ ಹಾಗೂ ವಿದ್ಯಾಥರ್ಿಗಳು ಇದ್ದರು.
ಇದೇ ಸಂದರ್ಭದಲ್ಲಿ ವಿದ್ಯಾಥರ್ಿಗಳು ಸಾಂಪ್ರದಾಯಿಕ ಉಡಿಗೆ ತೊಟ್ಟು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಿದರು.