ಸ್ವಚ್ಛತಾ ಹಿ ಸೇವಾ ಕಸ ವಿಲೇವಾರಿ ತಿಳುವಳಿಕೆ ಕಾರ್ಯಾಗಾರ : ಸ್ವಚ್ಛ ಪರಿಸರ ಸುಂದರ ನಗರಕ್ಕೆ ನಾಂದಿ: ಪ್ರಭು ಬುರಬುರೆ
Swachhta Hi Seva Garbage Disposal Awareness Workshop: A clean environment is the beginning of a beau
ಗದಗ 23 :- ಅವಳಿ ನಗರವಾದ ಗದಗ ಬೆಟಗೇರಿ ನಗರಸಭೆಯ ವ್ಯಾಪ್ತಿಯಲ್ಲಿ ವಿವಿಧ ಬಡಾವಣೆಗಳಲ್ಲಿ ಎಲ್ಲೆಂದರಲ್ಲಿ ಅವೈಜ್ಞಾಕವಾಗಿ ಕಸವಿಲೇವಾರಿಯಿಂದಾಗಿ ನಗರದ ಪ್ರಮುಖ ಬೀದಿಗಳ ಸೌಠರ್ಯಕ್ಕೆ ಮಾರಕವಾಗಿ ಪರಿಣಮಿಸಿದ್ದು, ಗದಗ ಬೆಟಗೇರಿ ಅವಳಿ ನಗರವನ್ನು ಸ್ವಚ್ಛ ಪರಿಸರ ಸುಂದರ ನಗರವನ್ನಾಗಿ ಪರಿವರ್ತಿಸುವ ಮಹದೋದ್ದೇಶದೊಂದಿಗೆ ಸಮಸ್ತ ನಗರವ್ಯಾಪಿ ನಾಗರಿಕರಿಗೆ ತಮ್ಮ ಮನೆಯಲ್ಲಿ ಸಂಗ್ರಹವಾಗುವ ಹಸಿ ಕಸ ಹಾಗೂ ಒಣ ಕಸವನ್ನು ಪ್ರತ್ಯೇಕವಾಗಿ ಮನೆಯಲ್ಲಿಯೇ ವಿಂಗಡಣೆ ಮಾಡಿ ಆ ಕಸವನ್ನು ನಗರಸಭೆಯ ಕಸ ವಿಲೇವಾರಿ ವಾಹನಕ್ಕೆ ನೀಡುವ ಕುರಿತು ವಿಶೇಷ ಸ್ವಚ್ಛತಾ ಹೀ ಸೇವಾ ತಿಳುವಳಿಕೆ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.
ಆ ಪ್ರಯುಕ್ತ ನಗರಸಭೆಯ 23 ನೇ ವಾರ್ಡಿನ ಹನಮನ ಗರಡಿ, ಕುಲಕರ್ಣಿ ಗಲ್ಲಿಯ ನಾಗರಿಕರಿಗಾಗಿ 3 ನೇ ನಂಬರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹತ್ತಿರದಲ್ಲಿ ಸುಮಾರು ಕಳೆದ ಹಲವಾರು ದಿನಗಳಿಂದ ಹಲವಾರು ಬಡಾವಣೆಯ ಪ್ರಜ್ಞಾಹೀನ ನಾಗರಿಕರಿಂದ ಉಂಟಾಗುತ್ತಿರುವ ಅವೈಜ್ಞಾನಿಕ ಕಸ ಹಾಕಿರುವುದರಿಂದ ಅಲ್ಲಿನ ಪ್ರಮುಖ ರಸ್ತೆಯು ಸಂಪೂರ್ಣ ಗಬ್ಬೆದ್ದು ನಾರುತ್ತಿತ್ತು ಆ ಪ್ರದೇಶವನ್ನು ಗುರುತಿಸಿ ನಗರಸಭೆಯ ಸಂಯೋಜಕರು ಈ ಸ್ಥಳವನ್ನು ಸ್ವಚ್ಛ ಗೊಳಿಸಿ ಅಲ್ಲಿಯೇ ರಂಗೋಲಿ ಚಿತ್ತಾರವನ್ನು ಬಿಡಿಸಿ ಸ್ವಚ್ಛತಾ ಹೀ ಸೇವಾ ಅಭಿಯಾನ ಕೈಗೊಂಡರು.
ನಗರಸಭೆಯ ಅಭಿಯಾನದ ಕುರಿತು ಬಡಾವಣೆಯ ಮುಖಂಡರಾದ ಪ್ರಭು ಬರಬುರೆಯವರು ಮಾತನಾಡಿ ಕಳೆದ ಹಲವಾರು ದಿನಗಳಿಂದ ಕಸದ ರಾಶಿಯಿಂದ ಗಬ್ಬುನಾರುತ್ತಿರುವ ಬಡಾವಣೆಯು ಇಂದು ನಗರಸಭೆಯ ಈ ಒಂದು ವಿಶಿಷ್ಟ ಕಾರ್ಯಕ್ರಮದಿಂದ ಇನ್ನೂ ಮುಂದಾದರೂ ನಾವು ನೀವೆಲ್ಲರೂ ಸ್ವಚ್ಛಠವಾಗಿ ಕಾಯ್ದುಕೊಳ್ಳೋಣ ಇದರಿಂದ ಸ್ವಚ್ಛ ಪರಿಸರ ಸುಂದರ ನಗರಕ್ಕೆ ನಾಂದಿಯಾಗಲಿ ಎಂದು ನುಡಿದರು. ಇನ್ನೊರ್ವ ಬಡಾವಣೆಯ ಪ್ರಮುಖರಾದ ಫಕ್ಕಿರಾ್ಪ ಹೆಬಸೂರ ರವರು ಮಾತನಾಡಿ ನಾವು ನಮ್ಮ ಮನೆಯನ್ನು ಹೇಗೆ ಸ್ವಚ್ಛವಾಗಿ ಇಟ್ಟುಕೊಳ್ಳುತ್ತೇವೆಯೋ ಅದರಂತೆ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಪರಿಶುದ್ಧವಾಗಿ ಕಾಯ್ದುಕೊಳ್ಳುವದು ನಮ್ಮ ನಿಮ್ಮೆಲ್ಲರ ಗುರುತರವಾದ ನೈತಿಕ ಜವಾಬ್ದಾರಿಯಾಗಿದೆ ಎಂದು ನುಡಿದರು.
ಈ ಸಂಧರ್ಭದಲ್ಲಿ ಗದಗ ಬೆಟಗೇರಿ ನಗರಸಭೆಯ ಪೌರಾಯುಕ್ತರಾದ ರಾಜಾರಾಮ ಪವಾರ, ನಗರಸಭಾ ಸದಸ್ಯರಾದ ಜನಾಬ್ ಬರಕತ್ ಅಲಿ ಮುಲ್ಲಾ,ಪರಿಸರ ಅಭಿಯಂತರರಾದ ಆನಂದ ಬದಿ, ಆರೋಗ್ಯ ನೀರೀಕ್ಷಕರಾದ ಎಮ್ ಎಮ್ ಮಕಾನದಾರ, ಚಂದ್ರು ಹಾದಿಮನಿ, ಸಂಗಪ್ಪ ಬೋಳಮ್ಮನವರ, ನಾಗಪ್ಪ ಗುಗ್ಗರಿ, 3 ನೇ ನಂಬರ್ ಶಾಲೆಯ ಮಕ್ಕಳು ಹಾಗೂ ಶಿಕ್ಷಕೀಯರು, ಸ್ವಚ್ಛತಾ ಹೀ ಸೇವಾ ತಂಡದ ಸಂಯೋಜಜಕರಾದ ನಾಗಮ್ಮ ಬಳ್ಳಾರಿ, ವಸಂತಲಕ್ಷ್ಮೀ ರಾಮಗಿರಿ, ಶ್ರುತಿ ಸೊಪ್ಪಿನಮಠ, ಜಯಲಕ್ಷ್ಮೀ ದೊಡ್ಡಮನಿ, ಸುಧಾ ಬೆನಕಣ್ಣವರ, ಜ್ಯೋತಿ ಅಕ್ಕಮ್ಮನವರ, ಜ್ಯೋತಿ ಪಲ್ಲೇದ, ಧರ್ಮರಾಜ್ ಪವಾರ, ಬಡಾವಣೆಯ ನಾಗರಿಕರಾದ ನಾಗಪ್ಪ ಗುಗ್ಗರಿ, ರಾಮಣ್ಣ ಗುಜಮಾಗಡಿ, ಆಂಜನೇಯ ಅಣ್ಣಿಗೇರಿ,ಮತ್ತು ವಕೀಲರು ಹಾಗೂ ಸಾಮಾಜಿಕ ಕಾರ್ಯಕರ್ತರಾದ ರಾಘವೇಂದ್ರ ಪಾಲನಕರ, ರೇಣವ್ವ ಬೋವಿ, ಹನಮವ್ವ ಜಾಲಿಹಾಳ, ರೋಹಿಮಾ ಬೇಗಮ್ ಶೇಖ್, ಸೌಜನ್ಯತಾ ಸಮಗ್ರ ನಾಗರಿಕ ಹಿತರಕ್ಷಣಾ ಸಮಿತಿಯ ಅಧ್ಯಕ್ಷರಾದ ಸಹನಾ ರಾಘವೇಂದ್ರ ಪಾಲನಕರ, ಮಾಬೂಸಾಬ್ ಅಡರಕಟ್ಟಿ ಹಾಗೂ ಸಮಸ್ತ ಬಡಾವಣೆಯ ನಾಗರಿಕರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 