ಸ್ವಚ್ಚ ಸರ್ವೆಕ್ಷಣ್ ರಸ್ತೆ ಓಟ ಮತ್ತು ಜಾಗೃತಿ ಜಾಥ.

ಬೆಂಗಳೂರು, ಜ 25, ಬೆಂಗಳೂರು ನಗರ ಸ್ವಚ್ಚ, ಸುಂದರವಾಗಿಸುವ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಮತ್ತು ಸ್ವಚ್ಚ ಸರ್ವೇಕ್ಷಣ್ ಅಭಿಯಾನದಲ್ಲಿ ಭಾಗವಹಿಸುವಂತೆ ಪ್ರೇರೇಪಿಸಲು ಬಿ.ಬಿ.ಎಂ.ಪಿ.ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದಿಂದ ರಸ್ತೆ ಓಟ ಮತ್ತು ಜಾಗೃತಿ ಜಾಥ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಬ್ಬನ್ ಪಾರ್ಕ್ ಹಡ್ಸನ್ ವೃತ್ತದ ಬಳಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಉದ್ಘಾಟನೆಯನ್ನು ಮಹಾಪೌರರಾದ ಗೌತಮ್ ಕುಮಾರ್ ,ಆಯುಕ್ತರಾದ ಬಿ.ಹೆಚ್.ಆನಿಲ್ ಕುಮಾರ್, ಪ್ರತಿಪಕ್ಷದ ನಾಯಕ ಅಬ್ದುಲ್ ವಾಜಿದ್ ,ವಿಶೇಷ ಆಯುಕ್ತರಾದ ರಂದೀಪ್, ಜಂಟಿ ಆಯುಕ್ತರಾದ  ಪಲ್ಲಿವಿ ಜಾಥಗೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಸ್ವಚ್ಚ ಸರ್ವೆಕ್ಷಣ್ ಆಪ್ ಬಿಡುಗಡೆ ಮಾಡಲಾಯಿತು. 

ಮೇಯರ್  ಗೌತಮ್ ಕುಮಾರ್ ಮಾತನಾಡಿ ಬೆಂಗಳೂರು ನಗರ ಸ್ವಚ್ಚತೆಗೆ ಬಿ.ಬಿ.ಎಂ.ಪಿ.ಜೊತೆಯಲ್ಲಿ ಸಾರ್ವಜನಿಕರು ಕೈ ಜೋಡಿಸಬೇಕು .ನಮ್ಮ ಮನೆ ಎಷ್ಟು ಅಂದವಾಗಿ ಇಟ್ಟುಕೊಳ್ಳುತ್ತೆವೆಯೋ ಅದೇ ರೀತಿಯಲ್ಲಿ ನಮ್ಮ ರಸ್ತೆ , ನಮ್ಮ ನಗರ ಕೂಡ ಸ್ವಚ್ಚವಾಗಿರಬೇಕು. ಇಂತಹ ಮನೋಭಾವನೆಯನ್ನು  ಪ್ರತಿಯೊಬ್ಬ ನಾಗರಿಕರೂ ಬೆಳಸಿಕೊಳ್ಳಬೇಕು. ಪ್ಲಾಸ್ಟಿಕ್ ನಿಂದ ತಯಾರಿಸಿದ ವಸ್ತುಗಳನ್ನು ಬಳಸಬೇಡಿ .ಹಸಿ ಕಸ, ಒಣ ಕಸ ವಿಂಗಡನೆ ಮಾಡಿ ಬೆಂಗಳೂರುನಗರ ದೇಶದ ನಂಬರ್ ಓನ್ ಸ್ವಚ್ಚ ಸುಂದರ ನಗರ ಮಾಡಲು ಸಹಕರಿಸಿ ಎಂದು ಹೇಳಿದರು.

ಆಯುಕ್ತ ಆನಿಲ್ ಕುಮಾರ್ ಮಾತನಾಡಿ, ಸ್ವಚ್ಚತೆ ಇರುವ ಕಡೆ ಆರೋಗ್ಯವಾಗಿ ಇರಬಹುದು. ಸ್ವಚ್ಚ ಸರ್ವೇಕ್ಷಣ್ ಅಭಿಯಾನದಲ್ಲಿ ಬೆಂಗಳೂರಿನ ಪ್ರತಿಯೊಬ್ಬ ನಾಗರಿಕರು ತಮ್ಮ ಅಭಿಪ್ರಾಯಗಳನ್ನು ದಾಖಲಿಸಿ. ಬೆಂಗಳೂರು ನಗರದಲ್ಲಿ ಸ್ವಚ್ಚತೆ ಪ್ರತಿದಿನ ಆಂದೋಲನವಾಗುವಂತೆ ಸಹಕರಿಸಬೇಕು. ಬೆಂಗಳೂರು ನಗರ ಸ್ವಚ್ಛತೆಯಲ್ಲಿ ಸಹ ಗಮನ ಸೆಳೆಯುವ ಕೆಲಸ ಮಾಡಬೇಕು ಎಂದು ಹೇಳಿದರು.

ವಿಶೇಷ ಆಯುಕ್ತರಾದ ರಂದೀಪ್ ಮಾತನಾಡಿ, ಸ್ವಚ್ಚ ಸರ್ವೆಕ್ಷಣ್ ಬಗ್ಗೆ ಗೂಗಲ್ ನಲ್ಲಿ ಸಮಗ್ರ ಮಾಹಿತಿ ಇದ್ದು, ಬೆಂಗಳೂರಿನ ನಾಗರಿಕರು ಅಭಿಪ್ರಾಯಗಳನ್ನು ದಾಖಲಿಸಬೇಕು. ಇದರಿಂದ ನಗರದ ಅಭಿವೃದ್ದಿಯ ಬಗ್ಗೆ ಮಾಹಿತಿ ಲಭಿಸಿ ಮತ್ತಷ್ಟು ಅಭಿವೃದ್ದಿ ಯೋಜನೆಗಳನ್ನು ರೂಪಿಸಬಹುದು ಎಂದು ಹೇಳಿದರು.ಸಂಘದ ಪದಾಧಿಕಾರಿಗಳಾದ ನಲ್ಲಪ್ಪ ,ಎಸ್.ಜಿ.ಸುರೇಶ್ ,ಸಂತೋಷ್ ಕುಮಾರ್ ನಾಯಕ್ ,ಗಂಗಾಧರ್ ಜಾಣಗೆರೆ ,ಕೆ.ಮಂಜೇಗೌಡ ರೇಣುಕಾಂಬ,  ಮಹಾರಾಣಿ ಕಾಲೇಜು ,ಬಿ.ಬಿ.ಎಂ.ಪಿ.ಕಾಲೇಜು ,ಬಿಷಪ್ ಕಾಟನ್ ಕಾಲೇಜು ,ಹೋಮ್ ಸೈನ್ಸ್ ಕಾಲೇಜಿನ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.