ಸಸ್ಪೆನ್ಸ್, ಮಾಸ್ ಸಿನಿಮಾ ಅಂಜನಾದ್ರಿ ಒಂದುಕೋಟಿ ನಿರ್ಮಾಣದಲ್ಲಿ ಸಿನಿಮಾ ತಯಾರಿ
Suspense, mass movie Anjanadri film production in one crore budget
ಕೊಪ್ಪಳ 08: ಸಸ್ಪೆನ್ಸ್, ಪ್ರೀತಿ, ಕಥಾಹಂದರ ಒಳಗೊಂಡಿರುವ ಸ್ಪಿರಿಚುಯಲ್ ಮಾಸ್ ಸಿನಿಮಾ ಇದೇ ಜು.9ಕ್ಕೆ ತಾಲೂಕಿನ ನೀರಲಗಿಗ್ರಾಮದ ಶ್ರೀ ಅನ್ನದಾನೇಶ್ವರ ಮಠದಲ್ಲಿಗಣ್ಯರಿಂದ ಸಿನಿಮಾ ಪೋಸ್ಟರ್ ಬಿಡುಗಡೆಗೊಳಿಸುವ ಮೂಲಕ ಚಿತ್ರಕ್ಕೆ ಚಾಲನೆ ದೊರೆಯಲಿದೆಎಂದು ನಿರ್ದೇಶಕರಾಜ್ ಚುರ್ಚಿಹಾಳ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿಅವರು ಮಾತನಾಡಿದರು.ಕನ್ನಡಿಗರ ಆಶೀರ್ವಾದದಿಂದ ಮೊದಲ ಬಾರಿಗೆಉತ್ತರಕರ್ನಾಟಕದಗಾಂಧಿ ನಗರಖ್ಯಾತಿಯ ಕೊಪ್ಪಳದಲ್ಲಿ ರಾಜ್ ಪ್ರೊಡಕ್ಷನ್ ಬ್ಯಾನರ್ ಅಡಿ ನಿರ್ಮಾಣಗೊಳ್ಳುತ್ತಿರುವ ನನ್ನ ನಿರ್ದೇಶನ, ಚಿತ್ರಕಥೆ, ಸಂಭಾಷಣೆಯಲ್ಲಿ ಮೂಡಿಬಂದಿರುವ ಅಂಜನಾದ್ರಿ ಎಂಬಸಸ್ಪೆನ್ಸ್, ಮಾಸ್, ಸಿನಿಮಾ ಸೆಟ್ಟೇರಲಿದ್ದು, ಒಂದುಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣವಾಗಲಿದೆಎಂದರು.ಚಿತ್ರದ ನಾಯಕ ನಟನನ್ನುಇನ್ನೂ ಸಸ್ಪೆನ್ಸ್ ನಲ್ಲಿಟ್ಟಿದೆ. ಇನ್ನೂ ಈ ಸಿನಿಮಾದಲ್ಲಿ ಮೂವರು ನಟಿಯರುಇರಲಿದ್ದು ಪ್ರೇಕ್ಷರಕ ಮನ ಗೆಲ್ಲಲಿದೆಎಂಬುದು ಸಿನಿಮಾ ನಿರ್ದೇಶಕರ ಮಾತಾಗಿದೆ.ಕಲಾವಿದರಾಗಿ ಹೈದರಾಬಾದಿನ ಸುಂಕಾರಿ, ವರ್ಷೀಣಿ, ಗಜಾ ಕೊಪ್ಪಳ, ಸುರೇಶ ಹಲಗೇರಿ ಸೇರಿದಂತೆಇತರರುಅಭಿನಯಿಸಲಿದ್ದಾರೆ.ಚಿತ್ರಕಥೆ, ನಿರ್ದೇಶನ, ಸಂಭಾಷಣೆರಾಜ್ ಚುರ್ಚಿಹಾಳ, ಛಾಯಾಗ್ರಾಹಣಆನಂದ್ ಸ್ಟುಡಿಯೋ ಮತ್ತುರಾಜ್ ಫೋಟೋಗ್ರಫಿ, ಸಂಗೀತ ವಿಶ್ವಾಸ್ ಕೌಶಿಕ್, ಡ್ಯಾನ್ಸ್‌ಕೊರಿಯೋಗ್ರಾಫರ್‌ರಾಹುಲ್ ಕೊಪ್ಪಳ ಮತ್ತು ಶ್ರೇಯಾ ಹಿರೇಮಠ, ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಯಮನೂರ ನಾಯಕ ಹಾಗೂ ನಿರ್ಮಾಪಕರಾದ ಶಾಂತಲಾರಾಜ್ ಮತ್ತು ಮಂಜುನಾಥ ನಾಯಕಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಸುಮಾರುಎರಡು ವರ್ಷಗಳ ಕಾಲ ಸಿನಿಮಾ ಸಿನಿಮಾ ಶೂಟಿಂಗ್ ನಡೆಯಲಿದೆ.ಅಂದಕೊಂಡಂತೆಎಲ್ಲ ಕೆಲಸ ಶೀಘ್ರ ಫೂರ್ಣಗೊಂಡಲ್ಲಿ 2026 ಅಂತ್ಯಕ್ಕೆಅಂಜನಾದ್ರಿ ಸಿನಿಮಾತೆರೆಗೆ ಬರಲಿದೆಎಂದರು.ಇನ್ನೂ ಸಿನಿಮಾ ಚಿತ್ರೀಕರಣವನ್ನು ಕೊಪ್ಪಳ, ಹೈದರಾಬಾದ್ ಸೇರಿದಂತೆ ವಿವಿಧಕಡೆ ಶೂಟಿಂಗ್ ಮಾಡಲಿದ್ದೇವೆ. ಕೊಪ್ಪಳದಲ್ಲೇ ಸಣ್ಣ ಪ್ರಮಾಣದ ಸೆಟ್‌ತಯಾರಿ ಮಾಡಿ ಶೂಟಿಂಗ್ ಮಾಡಲಿದ್ದು, ಚಿತ್ರೀಕರಣಎರಡು ಹಂತದಲ್ಲಿ ನಡೆಯಲಿದೆ. ಸಂಗೀತ ನಿರ್ದೇಶಕ ವಿಶ್ವಾಸ್ ಕೌಶಿಕ್ ಅವರು ಅಂಜನಾದ್ರಿ ಚಿತ್ರದಲ್ಲಿ ಐದು ಹಾಡು ಬರೆದಿದ್ದು, ಈ ಹಾಡುಗಳು ನಮ್ಮಚಿತ್ರಕ್ಕೆ ಪ್ಲಸ್ ಪಾಯಿಂಟ್‌ಆಗಲಿದ್ದು, ಕನ್ನಡಿಗರ ಮನ ಗೆಲ್ಲಲಿದೆ ಎಂಬ ನಂಬಿಕೆಯಿದೆಎಂದು ನಿರ್ದೇಶಕರಾಜ್ ಚುರ್ಚಿಹಾಳ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಕಲಾವಿದರಾದ ಗಜಾ ಕೊಪ್ಪಳ, ಸುರೇಶ ಹಲಗೇರಿ, ಅಸಿಸ್ಟೆಂಟ್ ಡೈರೆಕ್ಟರ್‌ಯಮನೂರ ನಾಯಕ, ಡ್ಯಾನ್ಸ್‌ಕೊರಿಯೋಗ್ರಾಫರ್‌ರಾಹುಲ್ ಕೊಪ್ಪಳ, ಶ್ರೇಯಾ ಹಿರೇಮಠ ಸೇರಿದಂತೆಇತರರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 