ತಾಂತ್ರಿಕ ಅಡಚಣೆಗಳ ನಡುವೆಯೂ ಯಶಸ್ವಿಯಾಗಿ ಮುಕ್ತಾಯಗೊಂಡ ಸಮೀಕ್ಷೆ
Survey successfully completed despite technical difficulties
ತಾಂತ್ರಿಕ ಅಡಚಣೆಗಳ ನಡುವೆಯೂ ಯಶಸ್ವಿಯಾಗಿ ಮುಕ್ತಾಯಗೊಂಡ ಸಮೀಕ್ಷೆ
ಚಿಕ್ಕೋಡಿ, 10 : ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ರಾಜ್ಯದಾದ್ಯಂತ ನಡೆಯುತ್ತಿರುವ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಚಿಕ್ಕೋಡಿ ತಾಲೂಕು ಶೇ.105 ಮತ್ತು ನಿಪ್ಪಾಣಿ ತಾಲೂಕು ಶೇ.96 ರಷ್ಟು ಸಮೀಕ್ಷೆ ಕಾರ್ಯ ಯಶಸ್ವಿಯಾಗಿ ನಡೆಯುತ್ತಿದೆ..ಸಮೀಕ್ಷಾ ಕಾರ್ಯವು ಸೆಪ್ಟೆಂಬರ್ 22ರಂದು ಆರಂಭವಾಗಿದ್ದು, ಸರ್ವರ್ ಸಮಸ್ಯೆ, ನೆಟ್‌ವರ್ಕ್ ತೊಂದರೆ ಸೇರಿದಂತೆ ಹಲವು ತಾಂತ್ರಿಕ ಅಡಚಣೆಗಳ ನಡುವೆಯೂ ಯಶಸ್ವಿಯಾಗಿ ಪೂರ್ಣಗೊಂಡಿದೆ. ಆಯೋಗ ರೂಪಿಸಿದ ಮೊಬೈಲ್ ಆಪ್‌ಗಳ ಮೂಲಕ ಮನೆಮನೆಗೆ ತೆರಳಿ ಸಮೀಕ್ಷೆ ನಡೆಸಲಾಗಿತ್ತು.ಚಿಕ್ಕೋಡಿ ತಾಲೂಕಿನಲ್ಲಿ 798 ಹಾಗೂ ನಿಪ್ಪಾಣಿ ತಾಲೂಕಿನಲ್ಲಿ 636 ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಇತರೆ ಸರ್ಕಾರಿ ನೌಕರರು ಸಮೀಕ್ಷೆ ಕಾರ್ಯದಲ್ಲಿ ತೊಡಗಿದ್ದರು. ಒಬ್ಬ ಸಮೀಕ್ಷಕಾರನಿಗೆ ಸರಾಸರಿ 140ಹಿ150 ಮನೆಗಳ ಬ್ಲಾಕ್‌ಗಳನ್ನು ಹಂಚಲಾಗಿತ್ತು.ಚಿಕ್ಕೋಡಿ ತಾಲೂಕಿನಲ್ಲಿ 87,800 ಮನೆಗಳ ಪೈಕಿ 91,319 ಮನೆಗಳ ಸಮೀಕ್ಷೆ ನಡೆದಿದೆ. ಒಂದೇ ಕುಟುಂಬದಲ್ಲಿ ಪ್ರತ್ಯೇಕ ರೇಷನ್ ಕಾರ್ಡ್ ಇರುವುದರಿಂದ ಮನೆಗಳ ಸಂಖ್ಯೆ ಹೆಚ್ಚು ದಾಖಲಾಗಿದೆ. ನಿಪ್ಪಾಣಿ ತಾಲೂಕಿನಲ್ಲಿ 70,724 ಮನೆಗಳ ಪೈಕಿ 66,324 ಮನೆಗಳ ಸಮೀಕ್ಷೆ ಪೂರ್ಣಗೊಂಡಿದೆ.ಆದಿಯಲ್ಲಿ ಸರ್ವರ್ ಸಮಸ್ಯೆ, ಒಟಿಪಿ ವಿಳಂಬ, ನೆಟ್‌ವರ್ಕ್ ತೊಂದರೆ, ಮನೆಯವರ ಅಲಭ್ಯತೆ ಮುಂತಾದ ಅಡಚಣೆಗಳಿಂದ ಸಮೀಕ್ಷಾ ಕಾರ್ಯ ನಿಧಾನಗತಿಯಲ್ಲಿತ್ತು. ಕೆಲವರು ದಿನಕ್ಕೆ 4ಹಿ5 ಮನೆಗಳಷ್ಟೇ ಪೂರೈಸಲು ಸಾಧ್ಯವಾಗುತ್ತಿದ್ದರೆ, ಕೆಲವರಿಗೆ ಒಂದೆರಡು ಮನೆಗಳನ್ನೂ ಮುಗಿಸಲು ಸಾಕಷ್ಟು ಸಮಯ ತೆಗೆದುಕೊಳ್ಳಬೇಕಾಗುತ್ತಿತ್ತು.ಗ್ರಾಮೀಣ ಪ್ರದೇಶಗಳಲ್ಲಿ ನೆಟ್‌ವರ್ಕ್ ಸಮಸ್ಯೆಯು ಮತ್ತು ಆಪ್‌ನಲ್ಲಿ ಡೇಟಾ ಎಂಟ್ರಿ ನಿಧಾನಗತಿಯು ಸಮೀಕ್ಷಕಾರರ ತಲೆನೋವಿನ ಕಾರಣವಾಗಿತ್ತು. ಆದರೂ, 20 ದಿನಗಳ ಸತತ ಶ್ರಮದ ಫಲವಾಗಿ, ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲೂಕುಗಳಲ್ಲಿ ಸಮೀಕ್ಷಾ ಕಾರ್ಯ ಯಶಸ್ವಿಯಾಗಿ ಪೂರ್ಣಗೊಂಡಿದೆ.ಅಂತಿಮ ಹಂತದಲ್ಲಿ ಪ್ರತಿ ಮನೆಯ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ದಾಖಲು ಮಾಡುವ ಕಾರ್ಯ ನಡೆಯುತ್ತಿದ್ದು, ಆಯೋಗದ ಅಧಿಕಾರಿಗಳು ಸಮೀಕ್ಷಾಕಾರರ ಶ್ರಮವನ್ನು ಮೆಚ್ಚಿಕೊಂಡಿದ್ದಾರೆ.ಬಾಕ್ಸ್...
ಆರಂಭದಲ್ಲಿ ತಾಂತ್ರಿಕ ಅಡಚಣೆಗಳು, ನೆಟ್‌ವರ್ಕ್ ಸಮಸ್ಯೆ, ಒಟಿಪಿ ವಿಳಂಬಗಳ ನಡುವೆಯೂ ಸಮೀಕ್ಷೆ ಮಾಡಲಾಗಿದೆ. ಹಿರಿಯ ಅಧಿಕಾರಿಗಳ ಸಲಹೆ ಸೂಚನೆಯಂತೆ ಸಮೀಕ್ಷೆ ಮುಕ್ತಾಯ ಹಂತಕ್ಕೆ ಬಂದಿದೆ. ನಮಗೆ ವಹಿಸಿರುವ ಮನೆಗಳ ಸಮೀಕ್ಷೆ ಪ್ರಾಮಾಣಿಕವಾಗಿ ಮಾಡಲಾಗಿದೆ.
-ಎಸ್.ಎಂ.ಮೂಡಲಗಿ ಗಣತಿದಾರರು.
ಬಾಕ್ಸ್...ಚಿಕ್ಕೋಡಿ ತಾಲೂಕಿನಲ್ಲಿ ಸಮೀಕ್ಷೆ ಯಶಸ್ವಿಯಾಗಿ ನಡೆದು ಮುಕ್ತಾಯ ಹಂತಕ್ಕೆ ಬಂಧಿದೆ. ಎಲ್ಲಿಯಾದರೂ ಮನೆಗಳು ಉಳಿದಿದ್ದರೆ ಅವುಗಳ ಸಮೀಕ್ಷೆ ನಡೆಸಲು ಗಣತಿದಾರರಿಗೆ ಸೂಚನೆ ನೀಡಲಾಗಿದೆ.
ರಾಜೇಶ ಬುರ್ಲಿ ತಹಶಿಲ್ದಾರರು ಚಿಕ್ಕೋಡಿಸಾಮಾಜಿಕಹಿಆರ್ಥಿಕಹಿಶೈಕ್ಷಣಿಕ ಸಮೀಕ್ಷೆ ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲೂಕಿನಲ್ಲಿ ಯಶಸ್ವಿಯಾಗಿ ನಡೆದು ಮುಕ್ತಾಯದ ಹಂತಕ್ಕೆ ಬಂದಿದೆ. ಸಮೀಕ್ಷಾಕಾರರು ತಾಳ್ಮೆ ಮತ್ತು ಸಮರೆ್ಣಯಿಂದ ಕೆಲಸ ಮಾಡಿದ್ದಾರೆ. ಉಪವಿಭಾಗಾಧಿಕಾರಿಗಳು ಮತ್ತು ಎರಡು ತಾಲೂಕಿನ ತಹಶಿಲ್ದಾರರ ಸೂಚನೆಯಂತೆ ಎಲ್ಲಿಯೂ ಲೋಪವಾಗದಂತೆ ಸಮೀಕ್ಷೆ ಕಾರ್ಯ ನಡೆದು ಮುಕ್ತಾಯ ಹಂತಕ್ಕೆ ಬಂದಿದೆ.
-ವಿನಾ ಆರ್ ಮನಗೂಳಿತಾಲೂಕ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಚಿಕ್ಕೋಡಿ
ತಲ್ವಾರ್ ಹಲ್ಲೆ: ಒಂದೇ ಗಂಟೆಯಲ್ಲಿ 6 ಆರೋಪಿಗಳ ಬಂಧಿಸಿದ ಮಾಳಮಾರುತಿ ಪೋಲೀಸರು : ತನಿಖೆ ಚುರುಕು
ಹಳೇಯ ವೈಷಮ್ಯ : ಮೂವರ ಮೇಲೆ ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ 