ಕೊಪ್ಪಳ 29: ಅರಣ್ಯಹಕ್ಕು ಕಾಯ್ದೆಯಡಿ ಬಾಕಿ ಇರುವ ಅರ್ಜಿಗಳ ಕುರಿತು ಸವರ್ೇ ಕಾರ್ಯ ಕೈಗೊಂಡು ಮುಂದಿನ ಕ್ರಮಕ್ಕಾಗಿ ಅರಣ್ಯ ಇಲಾಖೆಗೆ ವರದಿ ಸಲ್ಲಿಸುವಂತೆ ಸಂಬಂಧಿಸಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಕೊಪ್ಪಳ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಅವರು ಸೂಚನೆ ನೀಡಿದರು.
ಅನುಸೂಚಿತ ಬುಡಕಟ್ಟುಗಳ ಮತ್ತು ಇತರೆ ಪಾರಂಪರಿಕ ಅರಣ್ಯವಾಸಿಗಳ ಅಧಿನಿಯಮ 2006 ಮತ್ತು ನಿಯಮಗಳು 2008 (ನಿಯಮಗಳ ತಿದ್ದುಪಡಿ 2012) ರನ್ವಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರದಂದು (ಜುಲೈ.29) ಆಯೋಜಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅನುಸೂಚಿತ ಬುಡಕಟ್ಟುಗಳ ಮತ್ತು ಇತರೆ ಪಾರಂಪರಿಕ ಅರಣ್ಯವಾಸಿಗಳ (ಅರಣ್ಯ ಹಕ್ಕುಗಳನ್ನು ಮಾನ್ಯ ಮಾಡುವ) ಅಧಿನಿಯಮ 2006 ಮತ್ತು ನಿಯಮಗಳು 2008 (ನಿಯಮಗಳ ತಿದ್ದುಪಡಿ 2012) ಪ್ರಕಾರ ಬುಡಕಟ್ಟುಗಳ ಮತ್ತು ಇತರೆ ಪಾರಂಪರಿಕ ಅರಣ್ಯ ವಾಸಿಗಳು ದಿ. 13.12.2005ಕ್ಕೆ ಮುಂಚೆ ಅರಣ್ಯದಲ್ಲಿ ವಾಸ ಅಥವಾ ಜೀವನೋಪಾಯಕ್ಕಾಗಿ ಅರಣ್ಯ ಪ್ರದೇಶಗಳ ಮೇಲೆ ಅವಲಂಬಿತರಾದವರು ಅರಣ್ಯ ಹಕ್ಕುಗಳ ಮಾನ್ಯತೆ ಪಡೆಯಲು ಅರ್ಹರಾಗಿರುತ್ತಾರೆ. ಈ ಬಗ್ಗೆ ಗ್ರಾಮೀಣ ಮಟ್ಟದಲ್ಲಿ ರಚಿಸಲಾದ ಅರಣ್ಯ ಹಕ್ಕು ಸಮಿತಿಯು ಗ್ರಾಮದ ಅರಣ್ಯ ವಾಸಿಗಳು ಸಲ್ಲಿಸಿದ ವೈಯಕ್ತಿಕ ಅಥವಾ ಸಾಮೂಹಿಕ ಕ್ಲೇಮ್ಗಳ ಅಜರ್ಿಗಳನ್ನು ಸ್ವೀಕರಿಸುವ, ಪಟ್ಟಿ ತಯಾರಿಸುವ, ಸಭೆ ಕರೆದು ಪರಿಶೀಲಿಸುವ, ಕ್ಷೇತ್ರ ಭೇಟಿ ನೀಡಿ ಪರಿಶೀಲನೆ ಮಾಡುವ ಮತ್ತು ಅಂತಿಮವಾಗಿ ಕ್ಲೇಮುದಾರರ ಹಕ್ಕು ಮಾನ್ಯ ಮಾಡುವ ಅಥವಾ ತಿರಸ್ಕರಿಸುವ ಕರ್ತವ್ಯ ಮತ್ತು ಜವಾಬ್ದಾರಿಯನ್ನು ನಿರ್ವಹಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸಂಬಂಧಿಸಿದ ಗ್ರಾಮ ಪಂಚಾಯತ್ಗಳ ಪಿಡಿಒಗಳು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಈ ಕುರಿತು ಸವರ್ೇ ಮಾಡಬೇಕು. ಅಲ್ಲದೇ ಬುಡಕಟ್ಟು ಜನಾಂಗದವರು ಕನಿಷ್ಠ ಮೂರು ತಲೆಮಾರುಗಳಿಂದ ಅಥವಾ 75 ವರ್ಷಗಳಿಂದ ಅರಣ್ಯ ಜಮೀನಿನಲ್ಲಿ ವಾಸವಿರುವ ಅಥವಾ ಸಾಗುವಳಿ ಮಾಡುತ್ತಿರುವವರು ಅರಣ್ಯಹಕ್ಕು ಕಾಯ್ದೆಯಡಿ ಅರ್ಹರಾಗಿರುತ್ತಾರೆ. ಆದ್ದರಿಂದ ಈ ಕುರಿತು ಪರಿಶೀಲಿಸಿ ಸವರ್ೇ ಮತ್ತು ರೀಸವರ್ೇಗಳನ್ನು ಕೈಗೊಂಡು ಉಪ ವಿಭಾಗೀಯ ಅರಣ್ಯ ಹಕ್ಕು ಸಮಿತಿಗೆ ವರದಿ ಸಲ್ಲಿಸಬೇಕು.
ಸರ್ಕಾರದಿಂದ ರಚಿತವಾದ ಉಪ ವಿಭಾಗಾಧಿಕಾರಿಗಳ ಅಧ್ಯಕ್ಷತೆಯ ಉಪ ವಿಭಾಗೀಯ ಅರಣ್ಯ ಹಕ್ಕು ಸಮಿತಿಯು ಗ್ರಾಮ ಅರಣ್ಯ ಹಕ್ಕು ಸಮಿತಿ ಸಲ್ಲಿಸಿದ ಅರಣ್ಯ ಹಕ್ಕು ಕ್ಲೇಮ್ಸ್ಗಳನ್ನು ಪರಿಶೀಲಿಸಿ ಅನುಮೋದಿಸುವ ಅಥವಾ ತಿರಸ್ಕರಿಸುವ ಅಧಿಕಾರ ಹೊಂದಿದ್ದು, ಅನುಮೋದನೆ ಮಾಡಿದ ಕ್ಲೇಮ್ಸ್ಗಳನ್ನು ಮಾನ್ಯ ಮಾಡಲು ಜಿಲ್ಲಾ ಮಟ್ಟದ ಅರಣ್ಯ ಹಕ್ಕು ಸಮಿತಿಗೆ ಕಳುಹಿಸಿಕೊಡಬೇಕು. ಪ್ರಸ್ತುತ ವಿಭಾಗ ಮಟ್ಟದಲ್ಲಿರುವ ಬಾಕಿ ಅರ್ಜಿಗಳನ್ನು ಸಂಬಂಧಪಟ್ಟ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಜಂಟಿ ಸರ್ವೇ ಕಾರ್ಯ ವರದಿಯನ್ನು ಅರಣ್ಯ ಇಲಾಖೆಯವರಿಗೆ ಮುಂದಿನ ಕ್ರಮಕ್ಕಾಗಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಅವರು ಸೂಚನೆ ನೀಡಿದರು.
ಅರಣ್ಯ ಇಲಾಖೆ ಅಧಿಕಾರಿಗಳು ಮಾತನಾಡಿ, ಅರಣ್ಯಹಕ್ಕು ಕಾಯ್ದೆಯಡಿ ಜಿಲ್ಲೆಯ ಒಟ್ಟು 306 ಅಜರ್ಿಗಳಲ್ಲಿ 18 ಅಜರ್ಿಗಳು ಒಂದೇ ಕುಟುಂಬದವರಿಂದ ಎರಡು ಬಾರಿ ಅಜರ್ಿಗಳು ಸ್ವೀಕೃತವಾಗಿವೆ. ಜಂಟಿ ಸವರ್ೇಯಲ್ಲಿ ಕಂಡುಬಂದ ಕಾರಣ ಪ್ರಸ್ತುತ 288 ಅರ್ಜಿಗಳು ಉಳಿದಿದ್ದು, ಅದರಲ್ಲಿ 203 ಅಜರ್ಿಗಳು ಜಂಟಿ ಸವರ್ೇ ಕಾರ್ಯ ಪೂರ್ಣಗೊಂಡಿದೆ. ಉಳಿದ 85 ಅರ್ಜಿಗಳಲ್ಲಿ ಅರಣ್ಯ ಇಲಾಖೆಯಿಂದ ನೆಡತೋಪು ಮಾಡಿರುವುದರಿಂದ ಈ ಸವರ್ೇ ಕಾರ್ಯ ಕೈಗೊಂಡಿರುವುದಿಲ್ಲ. ಜಿಲ್ಲಾ ಮಟ್ಟದ ಅರಣ್ಯ ಹಕ್ಕು ಸಮಿತಿಯಲ್ಲಿರುವ ಬಾಕಿ ಇರುವ ಅಜರ್ಿಗಳ ಪ್ರಗತಿಯಡಿ ಒಟ್ಟು 09 ಅರ್ಜಿಗಳಲ್ಲಿ 04 ಅಜರ್ಿಗಳಿಗೆ ಹಕ್ಕು ಪತ್ರ ವಿತರಣೆ ಮಾಡಿದ್ದು, ಹಕ್ಕು ಪತ್ರ ಮಾಡಿದ ಅಜರ್ಿಗಳಿಗೆ ಆರ್.ಟಿ.ಸಿ. ನೋಂದಣಿ ಮಾಡಲಾಗಿದೆ. ಬಾಕಿ ಇರುವ 05 ಅಜರ್ಿಗಳಲ್ಲಿ 03 ಅಜರ್ಿಗಳ ದಾಖಲಾತಿಗಳು ಸ್ವೀಕೃತವಾಗಿದ್ದು, 02 ಅರ್ಜಿ ಗಳು ತೀರಸ್ಕರಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಪ್ರೊಬೇಷನರಿ ಐಎಎಸ್ ಅಧಿಕಾರಿ ಸ್ನೇಹಾ ಜೈನ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಬಿ.ಕಲ್ಲೇಶ ಸೇರಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.