ಎಲಿಸ್‌ ಪೆರಿಗೆ ಶಸ್ತ್ರಚಿಕಿತ್ಸೆ

ಮೆಲ್ಬೋರ್ನ್‌, ಮಾ 26 ಆಸ್ಟ್ರೇಲಿಯಾ ತಂಡದ ಆಟಗಾರ್ತಿ ಎಲಿಸ್‌ ಪೆರಿ ಅವರು ಮಂಡಿರಜ್ಜು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ತಂಡದ ಕೋಚ್‌ ಮ್ಯಾಥ್ಯೂ ಮಾಟ್‌ ಮಾಹಿತಿ ನೀಡಿದ್ದಾರೆ.ಕಳೆದ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ನ್ಯೂಜಿಲೆಂಡ್‌ ವಿರುದ್ಧದ ಲೀಗ್‌ ಪಂದ್ಯದಲ್ಲಿ ಫೀಲ್ಡಿಂಗ್‌ ಮಾಡುತ್ತಿದ್ದ ಎಲಿಸ್‌ ಪೆರಿ ಮಂಡಿರಜ್ಜು ನೋವಿಗೆ ಒಳಗಾಗಿದ್ದರು. ಹೀಗಾಗಿ ಫೈನಲ್‌ ಸೇರಿದಂತೆ ಇನ್ನಿತರ ಪಂದ್ಯಗಳಿಗೆ ಅವರು ಅಲಭ್ಯರಾಗಿದ್ದರು. ಆದರೆ,  ಸಮಸ್ಯೆಯಿಂದ ಮುಕ್ತಿ ಪಡೆಯಲು ಅವರಿಗೆ ಶಸ್ತ್ರಚಿಕಿತ್ಸೆಯ ಅಗತ್ಯವಿದ್ದ ಕಾರಣ ವೈದ್ಯಕೀಯ ಪ್ರಕ್ರಿಯೆ ಮುಗಿಸಲಾಗಿದೆ ಎಂದು ಕ್ರಿಕೆಟ್‌ ಆಸ್ಟ್ರೇಲಿಯಾದ ಮೂಲಗಳು ತಿಳಿಸಿವೆ.''ಶಸ್ತ್ರ ಚಕಿತ್ಸೆಯನ್ನುಯಶಸ್ವಿಯಾಗಿ ಮುಗಿಸಲಾಗಿದೆ. ಸದ್ಯ ಅವರು ಮೆಲ್ಬೋರ್ನ್‌ನಲ್ಲಿದ್ದು, ಅವರಿಗೆ ಪುನಶ್ಚೇತನ ಮಾಡಲಾಗುವುದು,'' ಕ್ರಿಕೆಟ್‌ ಆಸ್ಟ್ರೇಲಿಯಾದ ಪ್ರಕಟಣೆ ತಿಳಿಸಿದೆ.ಎಲಿಸ್‌ ಅವರು ಆಸ್ಟ್ರೇಲಿಯಾ ತಂಡದ ಪ್ರಧಾನ ಆಟಗಾರ್ತಿಯಾಗಿದ್ದು, ವೇಗ ಬೌಲಿಂಗ್ ಜತೆಗೆ ಅಗತ್ಯ ಸಂದರ್ಭಗಳಲ್ಲಿ ಬ್ಯಾಟಿಂಗ್‌ನಲ್ಲೂ ಮಿಂಚುವ ಸಾಮರ್ಥ್ಯ ಹೊಂದಿದ್ದಾರೆ.
ಯುಎನ್ಐಆರ್ ಕೆ 1635