ಫಿಜಿಯೋಥೆರಪಿ ಚಿಕಿತ್ಸೆಯಿಂದ ಸರ್ಜರಿಯನ್ನು ತಪ್ಪಿಸಿಕೊಳ್ಳಬಹುದು , ಡಾಽಽ ಹರೀಶ್
Surgery can be avoided with physiotherapy treatment, says Dr. Harish
ಫಿಜಿಯೋಥೆರಪಿ ಚಿಕಿತ್ಸೆಯಿಂದ ಸರ್ಜರಿಯನ್ನು ತಪ್ಪಿಸಿಕೊಳ್ಳಬಹುದು , ಡಾಽಽ ಹರೀಶ್
ಬಳ್ಳಾರಿ 04 : ಸಕಾಲದಲ್ಲಿ ಫಿಜಿಯೋಥೆರಪಿ ಚಿಕಿತ್ಸೆಯನ್ನು ಪಡೆಯುವುದರಿಂದ ದೇಹಕ್ಕೆ ಮಾರಕವಾದ ಕಾಯಿಲೆಗಳಿಂದ ಮತ್ತು ಶಸ್ತ್ರ ಚಿಕಿತ್ಸೆಯಿಂದ ಪಾರಾಗಬಹುದು ಎಂದು ಡಾ. ಹರೀಶ್ ತಿಳಿಸಿದರು. ಅವರು ಇಂದು ನಗರದ ಡಾ. ರಾಜಕುಮಾರ್ ರಸ್ತೆಯ ಅನಂತ ವಾಸುದೇವ ಹಾಸ್ಪಿಟಲ್ ನಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿ, ಸೆಪ್ಟಂಬರ್ 8 ವಿಶ್ವ ಫಿಜಿಯೋಥೆರಪಿ ದಿನ ವಾಗಿದ್ದು ಪ್ರಯುಕ್ತ ವಾಸುದೇವ ಆಸ್ಪತ್ರೆಯಲ್ಲಿ ಉಚಿತ ಫಿಜಿಯೋಥೆರಪಿ ಚಿಕಿತ್ಸೆಯನ್ನು ಹಮ್ಮಿಕೊಳ್ಳಲಾಗಿದೆ ಇದರ ಸದುಪಯೋಗವನ್ನು ನಗರದ ಜನತೆ ಪಡೆದುಕೊಳ್ಳಬೇಕೆಂದರು. ಫಿಜಿಯೋಥೆರಪಿಸ್ಟ್ ಡಾಽಽ ಪ್ರಣತಿ ಮಾತನಾಡಿ, ಒಂದೇ ಸೂರಿನ ಅಡಿಯಲ್ಲಿ ಎಲ್ಲಾ ಚಿಕಿತ್ಸೆ ಎಂಬ ಧ್ಯೇಯ ವಾಕ್ಯದೊಂದಿಗೆ ನಮ್ಮ ಆಸ್ಪತ್ರೆಯಲ್ಲಿ, ಕ್ಯಾನ್ಸರ್, ಇಎನ್ಟಿ, ಜಾಯಿಂಟ್ ಪೇನ್ಸ್ ನರರೋಗ, ತಿರುವಿದ ಎಲುಬು, ಮಕ್ಕಳಲ್ಲಿನ ಮಾತನಾಡುವ ತೊಂದರೆ, ನಡೆದಾಡುವ ತೊಂದರೆ ಸೇರಿದಂತೆ ಎಲ್ಲಾ ರೋಗಕ್ಕೂ ಕೋಲ್ಡ್ ಲೇಸರ್ ಮೂಲಕ ಫಿಜಿಯೋಥೆರಪಿಯ ಸೂಕ್ತ ಚಿಕಿತ್ಸೆಯನ್ನು ನೀಡಿ ಶಸ್ತ್ರ ಚಿಕಿತ್ಸೆ ಇಲ್ಲದೆ ಗುಣಪಡಿಸಲಾಗುವುದು ಎಂದರು. ಈ ಪತ್ರಿಕಾಗೋಷ್ಠಿಯಲ್ಲಿ ಡಾಽಽ ಅಕಿಲ್ ರಾವ್ ಡಾಽಽ ಜಯಲಕ್ಷ್ಮಿ ನೇಕಾರ್ ಡಾಽಽ ರಾಕೇಶ್ ಮಾಣಿಕ್ ರಾವ್ ಡಾಽಽ ಅಖಿಲ್ ರಾವ್ ಸೇರಿದಂತೆ ಕಿರಿಯ ವೈದ್ಯರು ಮತ್ತು ವೈದ್ಯಕೀಯೇತರ ಸಿಬ್ಬಂದಿಗಳು ಇದ್ದರು.
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್ 