2026ನೇ ಸಾಲಿನ ಕಣವಿ ಕಾವ್ಯ ಪುರಸ್ಕಾರಕ್ಕೆ ಸುರೇಶ ತಂಗೋಡ ಆಯ್ಕೆ
Suresh Thangoda has been selected for Kanavi Kavya Puraskar for the year 2026
ಲಕ್ಷ್ಮೇಶ್ವರ " 23 : ಗದಗ ಕರ್ನಾಟಕ ವಿದ್ಯಾ ವರ್ಧಕ ಸಂಘ ಧಾರವಾಡ ಇವರು ನಾಡೋಜ ಡಾ ಚನ್ನವೀರ ಕಣವಿ ಮತ್ತು ಶಾಂತಾದೇವಿ ಕಣವಿಯವರ ದತ್ತಿ ಅಂಗವಾಗಿ ಪ್ರತಿ ವರ್ಷವೂ ಆಯೋಜಿಸುವ ರಾಜ್ಯ ಮಟ್ಟದ ಕಾವ್ಯ ಸ್ಪರ್ಧೆಯಲ್ಲಿ 2026ನೇ ಸಾಲಿನ ಕಾವ್ಯ ಪುರಸ್ಕಾರ ಸುರೇಶ ತಂಗೋಡ ಬರೆದಿರುವ “ಅವನಲ್ಲ ಅವಳು”ಕಾವ್ಯಕ್ಕೆ ಲಭಿಸಿರುವುದು ಎಂದು ಸ್ಪರ್ಧೆಯ ಆಯೋಜಕರಾದ ಮತ್ತು ಕ. ವಿ. ವ.ಸಂಘ ಧಾರವಾಡದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಶಂಕರ ಹಲಗತ್ತಿ ಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸುತ ಕಾವ್ಯನಾಮದ ಮೂಲಕ ಸಾಹಿತ್ಯ ಕೃಷಿಯಲ್ಲಿ ತೊಡಗಿರುವ ಸುರೇಶ ತಂಗೋಡ ಅವರು "ಕಾಂಕ್ರೀಟ್ ಕಾಡು","ಅಂಗೈಯಲ್ಲಿ ಅಂಚೆ" ಎಂಬ ಕೃತಿಗಳನ್ನು ನಾಡಿನ ಸಾರಸ್ವತ ಲೋಕಕ್ಕೆ ಅರ್ಿಸಿದ್ದು ಅವರ ತಮ್ಮದೇ ಓದುಗ ಬಳಗವನ್ನು ಹೊಂದಿದ್ದಾರೆ. ಪ್ರಸ್ತುತ ಲಕ್ಷ್ಮೇಶ್ವರ ಅಂಚೆ ಕಚೇರಿಯಲ್ಲಿ ಅಧಿಕಾರಿಯಾಗಿರುವ ಅವರಿಂದ ಇನ್ನೂ ಅನೇಕ ಕೃತಿಗಳು ಹೊರಹೊಮ್ಮಲಿ, ನಾಡಿನಾದ್ಯಂತ ಅವರ ಹೆಸರು ಚಿರಪರಿಚಿತವಾಗಲೆಂದು ಲಕ್ಷ್ಮೇಶ್ವರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು,ಅವರ ಓದುಗ ವರ್ಗ ಮತ್ತು ಪತ್ರಿಕಾ ಬಾಂಧವರು ಅವರನ್ನು ಅಭಿನಂದಿಸಿದ್ದಾರೆ.
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ 