ಮಸೀದಿ ನಿರ್ಮಿಸಿಕೊಳ್ಳಲು 5 ಎಕರೆ ಭೂಮಿ ಒದಗಿಸಲು ಸುಪ್ರೀಂ ಕೋರ್ಟ್ ಆದೇಶ; ಹಿಂದೂ ಮಹಾಸಭಾ ವಕೀಲ

ನವದೆಹಲಿ, ನ  9 :   ಆಯೋಧ್ಯೆಯ  ಪ್ರಮುಖ  ಸ್ಥಳದಲ್ಲಿ  ಮಸೀದಿ ನಿರ್ಮಿಸಿಕೊಳ್ಳಲು   ಪರ್ಯಾಯವಾಗಿ  ಐದು ಎಕರೆ  ಭೂಮಿ  ಒದಗಿಸಲು   ಸುಪ್ರೀಂ ಕೋರ್ಟ್  ತನ್ನ   ತೀರ್ಪುನಲ್ಲಿ ಆದೇಶಿಸಿ ಎಂದು  ಹಿಂದೂ ಮಹಾಸಭಾ  ವಕೀಲ ವಿಷ್ಣು  ಶಂಕರ್ ಜೈನ್   ಶನಿವಾರ  ಹೇಳಿದ್ದಾರೆ. ಸುಪ್ರೀಂ ಕೋರ್ಟ್ ಐತಿಹಾಸಿಕ  ತೀಪು ಪ್ರಕಟಿಸಿದ ನಂತರ  ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,    ಐವರು ನ್ಯಾಯಮೂರ್ತಿಗಳ  ಸಂವಿಧಾನಿಕ ಪೀಠ,  ದ್ವಂಸಗೊಳಿಸಲಾದ ಬಾಬ್ರಿ ಮಸೀದಿ  ಸ್ಥಳವನ್ನು   ಮಂದಿರ ನಿರ್ಮಿಸಲು  ಹಿಂದೂಗಳ ಪರ ಆರ್ಜಿದಾರರಿಗೆ  ಮಂಜೂರು ಮಾಡಿದ್ದು, ಮುಸ್ಲಿಂ ಕಕ್ಷಿದಾರರಿಗೆ ಮಸೀದಿ ನಿರ್ಮಿಸಿಕೊಳ್ಳಲು ಪರ್ಯಾಯವಾಗಿ ಐದು ಎಕರೆ ಜಮೀನು ನೀಡಲು ಆದೇಶಿಸಿದೆ ಎಂದು ಹೇಳಿದರು. ಪ್ರಕರಣದಲ್ಲಿ   ಒಂದು ಪಕ್ಷವಾಗಿದ್ದ   ನಿರ್ಮೊಹಿ  ಆಖಾಡದ ಮನವಿಗಳನ್ನು ಸುಪ್ರೀಂ ಕೋರ್ಟ್  ವಜಾಗೊಳಿಸಿದೆ ಎಂದು ಹೇಳಿದರು. ಮೂರು ತಿಂಗಳೊಳಗೆ  ಟ್ರಸ್ಟ್ ವೊಂದನ್ನು  ರಚಿಸಿ, ವಿವಾದಿತ ಭೂಮಿಯನ್ನು  ರಾಮ ದೇಗುಲ ನಿರ್ಮಿಸಲು ಹಸ್ತಾಂತರಿಸಬೇಕು ಹಾಗೂ  ಸುನ್ನಿ ವಕ್ಫ್ ಮಂಡಳಿಗೆ  ಮಸೀದಿ ನಿರ್ಮಿಸಿಕೊಳ್ಳಲು ಐದು ಎಕರೆ ವಿಸ್ತೀರ್ಣದ ಭೂಮಿ  ನೀಡಬೇಕು ಎಂದು  ಸುಪ್ರೀಂ ಕೋರ್ಟ್ ಆದೇಶಿಸಿದೆ ಎಂದು ವಿವರಿಸಿದರು.