ಧಾರವಾಡ 09: ಕೇಂದ್ರ ಗೃಹ ಸಚಿವರಾದ ಶ್ರೀ ಅಮೀತ ಷಾ ಅವರು ಭಾರತ ರತ್ನ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ
ಅಂಬೇಡ್ಕರರ ಕುರಿತು ರಾಜ್ಯಸಭೆಯಲ್ಲಿ ಅವಹೇಳನಕಾರಿ ಮಾತಾನಾಡಿದ್ದನ್ನು ಖಂಡಿಸಿ ಹುಬ್ಬಳ್ಳಿ ಧಾರವಾಡ ಬಂದನ್ನು ವಿವಿಧ ದಲಿತ ಸಂಘಟನೆಗಳು ಕರೆಕೊಟ್ಟಿದ್ದವು. ಸದರಿ ಕರೆಯನ್ನು ಬೆಂಬಲಿಸಿ ಕಾಂಗ್ರಸ್ ಪಕ್ಷವು ಧಾರವಾಡದಲ್ಲಿ ಶ್ರೀ ರಾಬರ್ಟ ದದ್ದಾಪುರಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳು ಹಾಗೂ ದೀಪಕ ಚಿಂಚೊರೆ ಇವರ ನೇತೃತ್ವದಲ್ಲಿ ಧುಮಕಿತ್ತು. ಬ್ಲಾಕ್ ಅಧ್ಯಕ್ಷ ರಾದ ಹನುಮಂತ ಗೊರವರ, ಮಹೇಶ ಹುಲಣ್ಣವರ, ಆನಂದ ಜಾಧವ, ಸುರೇಖಾ ಪೂಜಾರ, ಜೇಮ್ಸ ಯಾಮಾ, ಕವಿತಾ ಕಬ್ಬೇರ,ಬಿ.ಎಚ್. ಪೂಜಾರ ಮುಂದಾಳತ್ವವವನ್ನು ವಹಿಸಿದ್ದರು. ಕಾಂಗ್ರಸ್ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು, ಸದಸ್ಯರು ಮತ್ತು ಕಾಂಗ್ರೆಸ್ ಪಕ್ಷ ದ ಮಹಾನಗರ ಪಾಲಿಕೆ ಯ ಸದಸ್ಯರುಗಳು ಬೆಳಿಗ್ಗೆಯಿಂದಲೇ ರಸ್ತೆಗೆ ಇಳಿದಿದ್ದರು.
ಪ್ರತಿಭಾಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ರಾಬರ್ಟ ದದ್ದಾರಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳು, ಕೇಂದ್ರ ಗೃಹ ಸಚಿವರಾದ ಶ್ರೀ ಅಮೀತ ಷಾ ಅವರು ರಾಜ್ಯ ಸಭೆಯಲ್ಲಿ ಡಾ. ಅಂಬೇಡ್ಕರರವರ ಹೆಸರಿಗೆ ಬದಲು ದೇವರ ಹೆಸರನ್ನು
ಹೇಳಿದ್ದರೆ ಸ್ವರ್ಗಕ್ಕೆ ಹೋಗುತ್ತಿದ್ದಿರಿ .... ಎಂಬ ಮಾತನ್ನು ತೀರ್ವವಾಗಿ ಖಂಡಿಸಿದ ರಾಬರ್ಟ ದದ್ದಾಪುರಿ ನಮ್ಮ ದೇವರೇ ಡಾ.
ಬಾಬಾಸಾಹೇಬ ಅಂಬೇಡ್ಕರರು ಅವರ ಹೆಸರನ್ನು ನಿತ್ಯ ನಾವು ಪಠಿಸುತ್ತೇವೆ ಎಂದು ಒತ್ತಿ ಹೇಳಿದರು. ಮತ್ತು ಡಾ.
ಬಾಬಸಾಹೇಬ ಅಂಬೇಡ್ಕರರು ನೀಡಿರುವ ಸಂವಿಧಾನವೇ ಸಮಸ್ಥ ಭಾರತ ದೇಶದ ಜನತೆಗೆ ಸ್ವರ್ಗವನ್ನು ನೀಡಿದೆ. ಎಂದು
ಹರ್ಷೋದ್ಗಾರಗಳ ಮಧ್ಯೆ ಹೇಳಿದರು. ಇಂದಿನ ಗೃಹ ಮಂತ್ರಿಗಳು ಆ ಸ್ಥಾನಕ್ಕೆ ಹೋಗಬೇಕಿದ್ದರೆ ಅದಕ್ಕೆ ಡಾ. ಅಂಬೇಡ್ಕರರು
ಬರೆದ ಸಂವಿಧಾನವೇ ಕಾರಣ ಎಂದು ಹೇಳಿದರು. ಮತ್ತು ಅನೇಕರು ಮಾತನಾಡಿದರು.