ಕೈಗಾ 5-6ನೇ ಘಟಕ ಸ್ಥಾಪನೆಗೆ ಬೆಂಬಲ
ಕಾರವಾರ: ಕೈಗಾದಲ್ಲಿ ಘಟಕ 5-6 ಸ್ಥಾಪನೆಗೆ ಉತ್ತರ ಕನರ್ಾಟಕ ಮಹಷರ್ಿ ವಾಲ್ಮೀಕಿ ಕಾಮರ್ಿಕರ ಬೆಟರ್ಮೆಂಟ್ ಮತ್ತು ವೆಲ್ಫೇರ್ ಸಂಘ ಬೆಂಬಲ ಸೂಚಿಸಿ ಜಿಲ್ಲಾಧಿಕಾರಿಗಳ ಮೂಲಕ ಸಕರ್ಾರಕ್ಕೆ ಮನವಿ ನೀಡಿದೆ. ಕಾರವಾರ ವಿಧಾನಸಭಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ ಹಾಗೂ ಜಿಲ್ಲಾ ಉಸ್ತುವಾರಿ ಮಾಜಿ ಸಚಿವ ದೇಶಪಾಂಡೆ ಹಾಗೂ ಎಸ್.ಎಲ್.ಘೋಟ್ನೇಕರ್ ಹಾಗೂ ಕಾರವಾರ ಕ್ಷೇತ್ರದ ಎಲ್ಲಾ ಮಾಜಿ ಶಾಸಕರುಗಳಿಗೆ ಸಹ ಮನವಿ ಪತ್ರ ಕಳುಹಿಸಿದ ನಂತರ ಶನಿವಾರ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿ ಮಾಡಿ, ಕೈಗಾ ಅಣುಸ್ಥಾವರ ವಿದ್ಯುತ್ ಬೇಡಿಕೆ ನೀಗಿಸಲು ಹಾಗೂ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಅಗತ್ಯವಿದೆ ಎಂದು ಸಂಘದ ಪದಾಧಿಕಾರಿಗಳು ಹೇಳಿದರು.
ಉತ್ತರ ಕನರ್ಾಟಕ ಮಹಷರ್ಿ ವಾಲ್ಮೀಕಿ ಕಾಮರ್ಿಕರ ಬೆಟರ್ಮೆಂಟ್ ಮತ್ತು ವೆಲ್ಫೇರ್ ಸಂಘದ ಅಧ್ಯಕ್ಷ ಶ್ಯಾಮ್ ಎಸ್.ವಾಲ್ಮೀಕಿ ಮಾತನಾಡಿ ಕೈಗಾ ಅಣುಸ್ಥಾವರದಲ್ಲಿ ಈಗಾಗಲೇ ನಾಲ್ಕು ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಎರಡು ದಶಕಗಳಿಂದ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಕೈಗಾದ ಲಾಭ ನಷ್ಟಗಳನ್ನು ಈಗಾಗಲೇ ಅನುಭವಿಸಿಯಾಗಿದೆ. ಅನೇಕ ಜನ ನೇರ ಮತ್ತು ಪರೋಕ್ಷ ಸೌಲಭ್ಯ ಪಡೆದಾಗಿದೆ. ಈಗ ಕೈಗಾ ಇಟ್ಟುಕೊಂಡೇ ಪರಿಸರ ರಕ್ಷಣೆ ಹೇಗೆ ಎಂಬ ಬಗ್ಗೆ ಚಿಂತನೆ ನಡೆಯಬೇಕಿದೆ. ಈಗಾಗಲೇ ಎನ್ಪಿಸಿಎಲ್ ನಿಗದಿತ ಯೋಜನೆಯ ಆರು ಘಟಕಗಳಿಗೆ ಬೇಕಾಗುವ ಭೂಮಿ ಮೊದಲೇ ಪಡೆದಿರುವ ಕಾರಣ ಯೋಜನೆಯನ್ನು ನಿಲ್ಲಿಸುವುದು ಕಷ್ಟಸಾಧ್ಯ. ಪರಿಸರ ಉಳಿಸಿಕೊಂಡೇ ಯೋಜನೆಯನ್ನು ಮುಂದುವರಿಸಬೇಕು. ನಿರುದ್ಯೋಗಿ ಯುವಕರಿಗೆ ಕೆಲಸ ಕೊಡಬೇಕೆಂಬುದು ನಮ್ಮ ನಿಲುವು ಆಗಿದೆ ಎಂದು ಶ್ಯಾಮ ವಾಲ್ಮೀಕಿ ಹಾಗೂ ಪ್ರಧಾನ ಕಾರ್ಯದಶರ್ಿ ಕರೀಂ ಅಜ್ರೇಕರ್ ಅಭಿಪ್ರಾಯಪಟ್ಟರು.
ಪರಿಸರ ಉಳಿಸಬೇಕು ಎಂಬುದಕ್ಕೆ ನಮ್ಮ ಸಹಮತವಿದೆ. ಆದರೆ ವಿದ್ಯುತ್ ಸಹ ಬೇಕು. ಅಲ್ಲದೇ ನಿರುದ್ಯೋಗಿಗಳಿಗೆ ಉದ್ಯೋಗ ಸಹ ಸಿಗಬೇಕು. ಕೈಗಾ ಹೊಸ ಘಟಕಗಳು ಆರಂಭವಾದರೆ, ನಿಮರ್ಾಣ ಹಂತದಲ್ಲಿ ಭಾರೀ ಪ್ರಮಾಣದ ಉದ್ಯೋಗ ಸೃಷ್ಟಿಯಾಗುವುದನ್ನು ಹಿಂದೆ ನೋಡಲಾಗಿದೆ. ಕಾಮರ್ಿಕರಿಗೆ, ಸಿಮೆಂಟ್, ಕಬ್ಬಿಣ, ಬಣ್ಣ ಮತ್ತು ಎಲೆಕ್ಟ್ರಿಕ್ ಗುತ್ತಿಗೆದಾರರಿಗೆ ಭಾರೀ ಅನುಕೂಲಕರವಾಗಲಿದೆ. ವಾಹನ ಬಾಡಿಗೆ, ಕಾಮರ್ಿಕರು, ಅಡುಗೆ ಸಿದ್ಧಪಡಿಸುವವರು, ಬಟ್ಟೆ ಇಸ್ತ್ರಿಅಂಗಡಿಯಿಂದ ಹಿಡಿದು ಪರೋಕ್ಷ ಉದ್ಯೋಗಗಳು ದೊಡ್ಡ ಪ್ರಮಾಣದಲ್ಲಿ ಸೃಷ್ಟಿಯಾಗುತ್ತವೆ. ನಿಮರ್ಾಣದ ನಂತರ ನಾನಾ ಬಗೆಯ ಉದ್ಯೋಗಗಳ ಸೃಷ್ಟಿ ಸಹ ಆಗಲಿದೆ. ಪರಿಸರ ಉಳಿಸಿಕೊಂಡು, ಅಣುಸ್ಥಾವರವನ್ನು ಸ್ವಾಗತಿಸುವುದು ಒಳಿತು. ಇದಕ್ಕಾಗಿ ಜನಪ್ರತಿನಿಧಿಗಳು ಸಹ ನಮ್ಮ ಆಶಯಕ್ಕೆ ಪೂರಕವಾದ ತಮ್ಮ ಬೆಂಬಲ ನೀಡುತ್ತಾರೆಂದು ನಿರೀಕ್ಷೆ ಇಟ್ಟುಕೊಂಡಿದ್ದೇವೆ ಎಂದು ಸುದ್ದಿಗೋಷ್ಠಿಯಲ್ಲಿ ವಾಲ್ಮೀಕಿ ಕಾ.ಕ,ಅಭಿವೃದ್ಧಿ ಸಂಘದ ಪದಾಧಿಕಾರಿಗಳು ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ಪ್ರಶಾಂತ ಎಸ್.ವಾಲ್ಮೀಕಿ, ಮಂಜುನಾಥ ಪಿ.ರೇವಣಕರ್, ಮೆಹಬೂಬ್ ಪೀರ್ ಫೀರ್ಜಾದೆ ಇದ್ದರು.