ಡಿ.16ರಂದು ಬೆಂಬಲ ಬೆಲೆ ಭತ್ತ ಖರೀದಿ ಕೇಂದ್ರ ಆರಂಭ: ಡಿಸಿ ಡಾ.ವೆಂಕಟೇಶ್

ಡಿ.16ರಂದು ಬೆಂಬಲ ಬೆಲೆ ಭತ್ತ ಖರೀದಿ ಕೇಂದ್ರ ಆರಂಭ: ಡಿಸಿ ಡಾ.ವೆಂಕಟೇಶ್

ಹಾವೇರಿ01: ಕೇಂದ್ರ ಸಕರ್ಾರದ ನಿದರ್ೆಶನದ ಮೇರೆಗೆ ಬೆಂಬಲ ಬೆಲೆ ಯೋಜನೆಯಡಿ  ಜಿಲ್ಲೆಯ ಹಾನಗಲ್, ಶಿಗ್ಗಾಂವ ಹಾಗೂ ಹಿರೇಕೆರೂರ ಪಟ್ಟಣಗಳಲ್ಲಿ ಬೆಂಬಲ ಬೆಲೆ ಭತ್ತ ಖರೀದಿ ಕೇಂದ್ರಗಳನ್ನು ಡಿ. 16ರಿಂದ ಆರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರು ತಿಳಿಸಿದರು.

ಶನಿವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿಸುವ ಕುರಿತು ಟಾಸ್ಕಪೋಸರ್್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೇಂದ್ರ ಸಕರ್ಾರ ರಾಜ್ಯಕ್ಕೆ ಎರಡು ಲಕ್ಷ ಮೆಟ್ರಿಕ್ ಟನ್ ಭತ್ತ ಖರೀದಿಗೆ  ಗುರಿ ನಿಗಧಿಪಡಿಸಿದೆ. ಸಾಮಾನ್ಯ ಭತ್ತವನ್ನು  ರೂ.1750/- ಹಾಗೂ ಗ್ರೇಡ್-ಎ ಭತ್ತವನ್ನು ರೂ.1770/-ಗಳ ದರದಲ್ಲಿ ನೋಂದಾಯಿತ ರೈತರಿಂದ ಖರೀದಿಸಲಾಗುವುದು.  ಡಿಸೆಂಬರ್ 5 ರಿಂದ 15ರವರೆಗೆ ಆನ್ಲೈನ್ ಮೂಲಕ ರೈತರ ನೋಂದಣಿಮಾಡಿಕೊಳ್ಳಬೇಕು.  ಡಿ. 16 ರಿಂದ  ದಿ. 31-03-2019ರವರೆಗೆ  ನೋಂದಾಯಿತ ಪ್ರತಿಯೊಬ್ಬ ರೈತರಿಂದ 40 ಕ್ವಿಂಟಾಲ್ ಭತ್ತವನ್ನು ಮಾತ್ರ ಖರೀದಿಸಲಾಗುವುದು. ದಲ್ಲಾಳಿಗಳು ಮತ್ತು ಮಧ್ಯವತರ್ಿಗಳ ಹಾವಳಿ ತಪ್ಪಿಸಲು  ಹಾಗೂ ನೈಜ ರೈತರಿಗೆ ಇದರ ಲಾಭವನ್ನು ಸಮರ್ಪಕವಾಗಿ ತಲುಪಿಸಲು ರೈತರ ಆನ್ಲೈನ್ ನೋಂದಣಿ ಕಡ್ಡಾಯವಾಗಿದೆ ಎಂದು ಹೇಳಿದರು.

ರೈತರು ಭತ್ತ ಎಂದು ನಮೂದಿಸಿದ ಪಹಣಿ ಪತ್ರ, ಆಧಾರ್ ಕಾಡರ್್, ಬ್ಯಾಂಕ್  ಖಾತೆ ವಿವರ ನೀಡಬೇಕು. ಪಹಣಿಯಲ್ಲಿ ಭತ್ತ ಎಂದು ನಮೂದಿಸದಿದ್ದಲ್ಲಿ ಗ್ರಾಮ ಲೆಕ್ಕಾಧಿಕಾರಿಗಳಿಂದ ದೃಢೀಕರಣಪತ್ರ ಹಾಗೂ  ಪಾಸ್ ಪೋರ್ಟ ಅಳತೆಯ ಭಾವಚಿತ್ರದೊಂದಿಗೆ  ಹಾನಗಲ್, ಶಿಗ್ಗಾಂವ ಹಾಗೂ ಹಿರೇಕೆರೂರು ಎ.ಪಿ.ಎಂ.ಸಿ.ಗಳಲ್ಲಿ ತೆರೆಯುವ ಆನ್ಲೈನ್ ಕೇಂದ್ರಗಳಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು ಎಂದು ಹೇಳಿದರು.

ಹಾನಗಲ್ ತಾಲೂಕಿನಲ್ಲಿ 35 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬಿತ್ತನೆಯಾಗಿದ್ದು,  ಈ ಹಿನ್ನೆಲೆಯಲ್ಲಿ ಹಾನಗಲ್, ಶಿಗ್ಗಾಂವ ಹಾಗೂ ಹಿರೇಕೆರೂರು ತಾಲೂಕುಗಳಲ್ಲಿ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸಲಾಗುವುದು. ಮುಂದಿನ ದಿನಗಳಲ್ಲಿ ಬೇರೆ ತಾಲೂಕುಗಳಿಂದ ಬೇಡಿಕೆ ಬಂದಲ್ಲಿ ಆ ಪ್ರದೇಶದಲ್ಲಿಯೂ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸಲಾಗುವುದು.  ಖರೀದಿ ನಂತರ ಭತ್ತವನ್ನು ಅಕ್ಕಿ ಮಿಲ್ಗಳಿಗೆ ಸ್ಥಳಾಂತರಿಸಲಾಗುವುದು. ಈ ಕುರಿತಂತೆ  ಶೀಘ್ರವಾಗಿ ಅಕ್ಕಿ ಮಿಲ್ ಮಾಲೀಕರ ಸಭೆಯ ಆಯೋಜಿಸಲು ಅಧಿಕಾರಿಗಳಿಗೆ ಸೂಚಿಸಿದರು.

ರಾಣೇಬೆನ್ನೂರು, ಹಿರೇಕೆರೂರು, ಹಾನಗಲ್ , ಶಿಗ್ಗಾಂವ ಹಾಗೂ ಬ್ಯಾಡಗಿ ತಾಲೂಕು ತಹಶೀಲ್ದಾರರೊಂದಿಗೆ ವಿಡಿಯೋ ಸಂವಾದ ನಡೆಸಿ ಭತ್ತ ಬೆಳೆಯ ಮಾಹಿತಿ ಪಡೆದರು ಹಾಗೂ ಬೆಂಬಲ ಬೆಲೆ ಖರೀದಿ ಕೇಂದ್ರ ಸ್ಥಾಪನೆ ಕುರಿತು  ಹಾಗೂ ಅನುಸರಿಸಬೇಕಾದ ಕ್ರಮಗಳ ಕುರಿತು ತಿಳಿಸಿದ ಅವರು, ತಹಶೀಲ್ದಾರು ಹಾಗೂ ಆಹಾರ ನಿರೀಕ್ಷಕರು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

ಆಹಾರ ಮತ್ತು ನಾಗರಿಕ ಸಬರಾಜು ಇಲಾಖೆ ಉಪನಿದರ್ೆಶಕರು ಹಾಗೂ ಅಪರ ಜಿಲ್ಲಾಧಿಕಾರಿಗಳಾದ ವಿನೋದ ಹೆಗ್ಗಳಗಿ ಅವರು ಮಾತನಾಡಿ,  ಸಕರ್ಾರ ಭತ್ತ ಖರೀದಿಗೆ ಮೂರು ಏಜೆನ್ಸಿಗಳನ್ನು  ಗೊತ್ತುಪಡಿಸಿದೆ. 

     ಅದರಲ್ಲಿ ಕನರ್ಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮವು ಸಂಗ್ರಹಣಾ ಏಜೆನ್ಸಿಯಾಗಿದೆ. 

   ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಕ್ಕಿ ಗಿರಣಿಗಳನ್ನು ಭತ್ತ ಖರೀದಿ ಕಾರ್ಯಕ್ಕೆ ನೋಂದಾಯಿಸಿಕೊಂಡು ಅಕ್ಕಿ ಗಿರಣಿಗಳ ಹಲ್ಲಿಂಗ್ ಹಾಗೂ ಶೇಖರಣಾ ಸಾಮಥ್ರ್ಯಕ್ಕನುಗುಣವಾಗಿ ಸಂಗ್ರಹಣೆ ಮಾಡಲಾಗುವುದು. 

     ನೋಂದಾಯಿಸಿಕೊಂಡ ರೈತರು ಸಂಬಂಧಿಸಿದ ಅಕ್ಕಿ ಗಿರಣಿಗೆ ಭತ್ತದ ಮಾದರಿಗಳನ್ನು ನೀಡಬೇಕು ಎಂದು ತಿಳಿಸಿದರು. ಸಭೆಯಲ್ಲಿ ಎ.ಪಿ.ಎಂ.ಸಿ. ಅಧಿಕಾರಿಗಳು ಸೇರಿದಂತೆ ಇತರೆ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.