ಚಂಡಿಗಢ/ಕೊಲ್ಕತ್ತಾ, ಮೇ ೭,ಮದ್ಯದಂಗಡಿಗಳ ಬಳಿ ಭಾರಿ ಸಂಖ್ಯೆಯಲ್ಲಿ ಜನಜಮಾಯಿಸಿ ವೈರಸ್ ಹರಡುವುದನ್ನು ತಗ್ಗಿಸುವ ಕ್ರಮವಾಗಿ ಮದ್ಯವನ್ನು ಮನೆ ಬಾಗಿಲಿಗೆ ಪೂರೈಸಲಾಗುವುದು ಎಂದು ಪಂಜಾಬ್ ರಾಜ್ಯ ಅಬಕಾರಿ ಹಾಗೂ ತೆರಿಗೆ ಇಲಾಖೆ ತಿಳಿಸಿದೆ.ಮದ್ಯ ಪೂರೈಕೆಯ ಸಮಯವನ್ನು ಸಂಬಂಧಿತ ಇಲಾಖೆಯ ಆಯುಕ್ತರುಗಳು ನಿರ್ಧರಿಸಲಿದ್ದಾರೆ ಎಂದು ಇಲಾಖೆ ತಿಳಿಸಿದೆ. ಮನೆಯೊಂದಕ್ಕೆ ೨ ಲೀಟರ್ ಮದ್ಯ ಪೂರೈಸಲಾಗುವುದು. ಈ ಹೊಸ ವ್ಯವಸ್ಥೆ ಇಂದಿನಿಂದ ಆರಂಭಗೊಳ್ಳಲಿದೆ.೨೧ ವಯಸ್ಸು ದಾಟಿದರವರಿಗೆ ಮದ್ಯ ಪೂರೈಸಲು ಸಾಧ್ಯವಾಗುವಂತೆ ವೆಬ್ ಸೈಟ್ ಅನ್ನು ಪಶ್ಚಿಮ ಬಂಗಾಳ ರಾಜ್ಯ ಸರ್ಕಾರದ ಸೂಚನೆಯೊಂದಿಗೆ ರಾಜ್ಯ ಪಾನೀಯ ನಿಗಮ ಆರಂಭಿಸಿದೆ. ಮದ್ಯದ ಅಂಗಡಿಗಳ ಬಳ ಜನರು ಸಾಮಾಜಿಕ ಅಂತರ ಉಲ್ಲಂಘಿಸಿ ಜಮಾಯಿಸುವುದನ್ನು ತಪ್ಪಿಸಲು ಈ ವೆಬ್ ಸೈಟ್ ಆರಂಭಿಸಲಾಗಿದೆ.