ಜಂತ್ಲಿ ಶಿರೂರ ಗ್ರಾಮದಲ್ಲಿ ಸೂರ್ಯಕಾಂತಿ ಬೆಳೆಯ ಕ್ಷೇತ್ರೋತ್ಸವ

ಜಂತ್ಲಿ ಶಿರೂರ ಗ್ರಾಮದಲ್ಲಿ ಸೂರ್ಯಕಾಂತಿ ಬೆಳೆಯ ಕ್ಷೇತ್ರೋತ್ಸವ Sunflower field festival in Jantli Shiroor village

ಜಂತ್ಲಿ ಶಿರೂರ ಗ್ರಾಮದಲ್ಲಿ ಸೂರ್ಯಕಾಂತಿ ಬೆಳೆಯ ಕ್ಷೇತ್ರೋತ್ಸವ 

ಹುಲಕೋಟಿ 04 ; ರಾಷ್ಟ್ರೀಯ ಖಾದ್ಯ ತೈಲ ಅಭಿಯಾನದ ಅಡಿಯಲ್ಲಿ 2025-26 ನೇ ಸಾಲಿನ ಗೊಂಚಲು ಮುಂಚೂಣಿ ಪ್ರಾತ್ಯಕ್ಷಿಕೆ (ಮುಂಗಾರು)- ಸೂರ್ಯಕಾಂತಿ ಬೆಳೆಯಲ್ಲಿ ಕ್ಷೇತ್ತೋತ್ಸವ ಕಾರ್ಯಕ್ರಮವನ್ನು ಸೆ. 03 ರಂದು ಮುಂಡರಗಿ ತಾಲೂಕಿನ ಜಂತ್ಲಿ ಶಿರೂರ ಗ್ರಾಮದ ಶ್ರೀ ದೇವಪ್ಪ ಧರಣಿ ಇವರ ಜಮೀನಿನಲ್ಲಿ ಆಯೋಜಿಸಲಾಗಿತ್ತು.   

ಪ್ರಗತಿಪರ ರೈತರಾದ ಅಲ್ಲಾಸಾಬ ನದಾಫ ಅವರು ಕೃಷಿ ವಿಜ್ಞಾನ ಕೇಂದ್ರ, ಗದಗದಿಂದ ಪಡೆದ ತಾಂತ್ರಿಕ ಮಾರ್ಗದರ್ಶನ ಮತ್ತು ಕೃಷಿ ಪರಿಕರಗಳಿಗಾಗಿ ಧನ್ಯವಾದವನ್ನು ವ್ಯಕ್ತಪಡಿಸಿದರು. ಗೊಂಚಲು ಮುಂಚೂಣಿ ಪ್ರಾತ್ಯಕ್ಷಿಕೆ ಯೋಜನೆಯ ಮೂಲಕ ಕೃಷಿ ಪರಿಕರಗಳನ್ನು ಸರಿಯಾದ ಸಮಯಕ್ಕೆ ಕೊಟ್ಟಿದ್ದರಿಂದ ರೈತರಿಗೆ ಅನುಕೂಲವಾಗಿದೆ ಎಂದು ಅಭಿಪ್ರಾಯ ಪಟ್ಟರು.  

ಎನ್‌.ಎಚ್‌. ಭಂಡಿ, ವಿಷಯ ತಜ್ಞರು (ಮಣ್ಣು ವಿಜ್ಞಾನ) ಅವರು ಮಣ್ಣಿನ ಪೋಷಕಾಂಶ ನಿರ್ವಹಣೆ, ಮಣ್ಣಿನ ಆರೋಗ್ಯವನ್ನು ಕಾಪಾಡಲು ಹಸಿರೆಲೆ ಗೊಬ್ಬರಗಳನ್ನು  ಮಣ್ಣಿಗೆ ಸೇರಿಸುವಂತೆ ಸಲಹೆ ನೀಡಿದರು. ಕೃಷಿ ವಿಜ್ಞಾನಿ ಡಾ. ಚೆತನಬಾಬು ಅವರು ಭಾರತದಲ್ಲಿನ ವಿವಿಧ ಸಂಸ್ಥೆಗಳಿಂದ ಬಿಡುಗಡೆಗೊಂಡ ಸುಧಾರಿತ ಸೂರ್ಯಕಾಂತಿ ತಳಿಗಳು ಮತ್ತು ಅವುಗಳ ವಿಶೇಷತೆಯ ಕುರಿತು ಮಾಹಿತಿ ನೀಡಿದರು. ಅವರು ಸಮಗ್ರ ಬೆಳೆ ನಿರ್ವಹಣಾ ಕ್ರಮಗಳನ್ನು ಅನುಸರಿಸುವುದರಿಂದ ಅಧಿಕ ಇಳುವರಿಯನ್ನು ಪಡೆಯಬಹುದು ಎಂದು ತಿಳಿಸಿದರು.  

ಕೃಷಿ ಇಂಜಿನಿಯರಿಂಗ್ ವಿಭಾಗದ ಡಾ. ವಿನಾಯಕ ಎಚ್‌. ನಿರಂಜನ ಅವರು ಆಳಿನ ಸಮಸ್ಯೆಗಳನ್ನು ನಿಭಾಯಿಸಲು ಯಾಂತ್ರಿಕರಣ ತಂತ್ರಜ್ಞಾನಗಳ ಮಹತ್ವದ ಕುರಿತು ಮಾತನಾಡಿದರು. ಅಲ್ಲದೆ, ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಯಂತ್ರೋಪಕರಣಗಳನ್ನು ಬಳಸುವ ಅವಕಾಶ ಸಿಗುವಂತೆ ಗ್ರಾಮದ ಮಟ್ಟದಲ್ಲಿ ಕೃಷಿ ಯಂತ್ರೋಪಕರಣಗಳ ಬಾಡಿಗೆ ಕೇಂದ್ರದ ಮಾದರಿಯನ್ನು ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು. 

ಬಸವರೆಡ್ಡಿ ರಾಮೆನಹಳ್ಳಿ, ಕೃಷಿ ಅಧಿಕಾರಿಗಳು, ರೈತ ಸಂರ​‍್ಕ ಕೇಂದ್ರ, ಡಂಬಳ ಇವರು ಮಾತನಾಡಿ ಕೃಷಿ ಇಲಾಕೆಯಿಂದ ರೈತರಿಗೆ ದೊರೆಯುವ ವಿವಿಧ ಸೌಲಬ್ಯಗಳ ಬಗ್ಗೆ ರೈತರಿಗೆ ಮಾಹಿತಿ ನೀಡಿದರು. 

ಡಾ. ಕೆ.ವಿ. ಪಾಟೀಲ, ವಿಷಯ ತಜ್ಞರು (ಕೃಷಿ ವಿಸ್ತರಣೆ) ಅವರು ಸಭೆಗೆ ಸ್ವಾಗತ ಹೇಳಿದರು ಮತ್ತು ಧನ್ಯವಾದ ಅರ​‍್ಿಸಿದರು. ಈ ಕಾರ್ಯಕ್ರಮದಲ್ಲಿ ಜಂತ್ಲಿ ಶಿರೂರ ಗ್ರಾಮದ ರೈತರಿಗೆ ಗೊಂಚಲು ಮುಂಚೂಣಿ ಪ್ರಾತ್ಯಕ್ಷಿಕೆಯ ತಾಕುಗಳಿಗೆ ಭೇಟಿಯನ್ನು ಏರಿ​‍್ಡಸಲಾಗಿತ್ತು.  ಕಾರ್ಯಕ್ರಮದಲ್ಲಿ ಜಂತ್ಲಿ ಶಿರೂರು ಗ್ರಾಮದ ಹಿರಿಯರಾದ ಶ್ರೀ ಮಲ್ಲಪ್ಪ ಪೂಜಾರ, ಶ್ರೀ ಬೀರ​‍್ಪ ಪೂಜಾರ ಹಾಗೂ 80 ಕ್ಕೂ ಹೆಚ್ಚು ರೈತ ಬಾಂಧವರು ಪಾಲ್ಗೊಂಡಿದ್ದರು.