ಮಾಜಿ ಮುಖ್ಯಮಂತ್ರಿ ಎಸ್‌.ಎಂ ಕೃಷ್ಣ ರವರ ನಿಧನಕ್ಕೆ ಸುಣಗಾರ ಸಂತಾಪ

Sunagara mourns the demise of former Chief Minister SM Krishna

ಬೆಳಗಾವಿ ದಿ 11:-ಕನ್ನಡ ನಾಡು ಕಂಡ ಧೀಮಂತ ರಾಜಕೀಯ ನಾಯಕರು,  ರಾಜ್ಯದಲ್ಲಿ ಶಾಸಕರಾಗಿ, ಮಂತ್ರಿಗಳಾಗಿ, ವಿಧಾನ ಸಭಾ ಅಧ್ಯಕ್ಷರಾಗಿ, ಉಪಮುಖ್ಯಮಂತ್ರಿಗಳಾಗಿ, ಮುಖ್ಯಮಂತ್ರಿಯಾಗಿ, ಕೇಂದ್ರ ಸರಕಾರದಲ್ಲಿ ಸಚಿವರಾಗಿ, ಜೊತೆಗೆ ಮಹಾರಾಷ್ಟ್ರ ರಾಜ್ಯದ ರಾಜ್ಯಪಾಲ ರಾಗಿ ಸೇವೆ ಸಲ್ಲಿಸಿ ತಮ್ಮ ಅನುಪಮ ಕಾರ್ಯ ಗಳಿಂದ ಹೆಸರುವಾಸಿ ಯಾಗಿದ್ದ ಅದರ ಜೊತೆಗೆ ಹಲವಾರು ಮುಖ್ಯ ವಿವಿಧ ಹುದ್ದೆಯಲ್ಲಿ ಕಾರ್ಯ ಮಾಡಿ ಜನಮನದಲ್ಲಿ ಹೆಸರುವಾಸಿ ಯಾಗುವ ಜೊತೆಗೆ ಬೆಂಗಳೂರನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲು ಕಾರಣಕರ್ತರಾಗಿದ್ದ ಮಾಜಿ ಮುಖ್ಯಮಂತ್ರಿಗಳಾದ ಎಸ್ ಎಮ್ ಕೃಷ್ಣ ರವರ ನಿಧನಕ್ಕೆ ತೀವ್ರ ಸಂತಾಪ, ಶೋಕ ವ್ಯಕ್ತ ಪಡಿಸಿ ದೇವರು ಅವರ ಆತ್ಮಕ್ಕೆ ಚಿರಶಾಂತಿ ನೀಡಲೆಂದು ಸಾಹಿತಿ ಸಂಘಟಕರಾದ ಬಸವರಾಜ ಸುಣಗಾರ ರವರು ಪ್ರಾರ್ಥಿಸಿದ್ದಾರೆ   

ಶಾಲಾ ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಬಿಸಿಯೂಟ ಯೋಜನೆ ಜಾರಿ ಮಾಡಿ ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿರುವುದು ಅವರ ಪ್ರಮುಖ ಸಾಧನೆಯಲ್ಲಿ ಒಂದಾಗಿದೆ, ಜನಪರ ಉತ್ತಮ ಆಡಳಿತ ನೀಡಿರುವುದು ಅವರ ನೆನಪು ಎಲ್ಲರಲ್ಲಿಯೂ ಹಸಿರಾಗಿದೆ ಎಂದಿದ್ದಾರೆ.  

2003 ರಲ್ಲಿ ಬೆಳಗಾವಿ ನಗರದಲ್ಲಿ ಜರುಗಿದ ಅಖಿಲ ಭಾರತ 70 ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನೆಯಲ್ಲಿ ಅಂದು ನಾನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿಯಾಗಿ ಅವರೊಂದಿಗೆ ವೇದಿಕೆಯಲ್ಲಿ ಇದ್ದದ್ದು ನನ್ನ ಜೀವನದಲ್ಲಿ ಮರೆಯಲಾಗದ ಘಟನೆಯಾಗಿದೆ, ಈ ಸಮಯದಲ್ಲಿ ಆ ನೆನಪು ಆಗುತ್ತಿದೆ ಎಂದು ಹಿರಿಯ ಮುಖ್ಯ ಶಿಕ್ಷಕರಾದ  ಬಸವರಾಜ ಫಕೀರ​‍್ಪ ಸುಣಗಾರ  ಹೇಳಿದ್ದಾರೆ,