ದಿ. 15 ರಿಂದ ಸುಕ್ಷೇತ್ರ ಶ್ರೀ. ಸಿದ್ದೇಶ್ವರ ಕಾರಿಮಠ ಜಾತ್ರಾ ಮಹೋತ್ಸವ

ದಿ. 15 ರಿಂದ ಸುಕ್ಷೇತ್ರ ಶ್ರೀ. ಸಿದ್ದೇಶ್ವರ ಕಾರಿಮಠ ಜಾತ್ರಾ ಮಹೋತ್ಸವ Sukshetra Shri. Siddeshwara Karimath Jatra Mahotsav from 15th

ಲೋಕದರ್ಶನ ವರದಿ 

ಯಮಕನಮರಡಿ 15: ಸಮೀಪದ ಹತ್ತರಗಿ ಸುಕ್ಷೇತ್ರ ಕಾರಿಮಠದ 156ನೇ ಜಾತ್ರಾ ಮಹೋತ್ಸವ ಜರುಗಲಿದ್ದು ಎಲ್ಲ ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ಶ್ರೀ ಮಠದ ಪೂಜ್ಯರಾದ ಮ.ನಿ.ಪ್ರ ಗುರುಸಿದ್ಧೇಶ್ವರ ಮಹಾಸ್ವಾಮಿಗಳು ವಹಿಸಲಿದ್ದು ರವಿವಾರ ದಿ. 15 ರಿಂದ 17ರ ವರಗೆ ಪ್ರತಿ ವರ್ಷದ ಪದ್ಧತಿಯಂತೆ ರವಿವಾರ ಮಹಾಶಿವರಾತ್ರಿ ಉಪವಾಸ ಮತ್ತು ಭಜನೆ ಇತ್ಯಾದಿ ಕಾರ್ಯಕ್ರಮಗಳನ್ನು ಇಡೀ ರಾತ್ರಿ ಜಾಗರಣೆ ಜರುಗಲಿದ್ದು ಸೋಮವಾರ ದಿ. 16 ರಂದು 10 ಗಂಟೆಯಿಂದ ವಾದ್ಯಮೇಳದೊಂದಿಗೆ ಹತ್ತರಗಿ ಗ್ರಾಮದಿಂದ ಅಂಬಲಿ ಕೊಡಗಳನ್ನು ತರಲಾಗುವುದು. 12 ಗಂಟೆಗೆ ಮಹಾಪ್ರಾಸದ ಸಂಜೆ 4 ಗಂಟೆಗೆ ಪ.ಪು. ಗುರುಸಿದ್ದೇಶ್ವರ ಮಹಾಸ್ವಾಮಿಗಳ ಷಷ್ಟಬ್ದ್ಬಿ ಸಮಾರಂಭ ಕಾರ್ಯಕ್ರಮ ಜರುಗಲಿದೆ ಎಂದು ಶ್ರೀಗಳು ತಿಳಿಸಿದ್ದಾರೆ.