ಕೊಲ್ಹಾಪುರ, ಫೆ .28 : ಜಿಲ್ಲೆಯ ಹಟ್ಕಾನಂಗಲೆ ತಹಸಿಲ್‌ನ ಶೀರ್ತಿ ಗ್ರಾಮದಲ್ಲಿ ಹತ್ತನೇ ತರಗತಿ ಬಾಲಕಿಯ ಆತ್ಮಹತ್ಯೆಗೆ ಸಹಾಯ ಮಾಡಿದ ಆರೋಪದಡಿ ಶಿಕ್ಷಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಶಿರ್ತಿ ಪ್ರೌಢ ಶಾಲೆಯಲ್ಲಿ ಹತ್ತನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿ ಸಾನಿಕಾ ಮಹಾದೇವ್ ಮಾಲಿ ಎಂಬ ಹುಡುಗಿ ಬರುವ ಎಸ್‌ಎಸ್‌ಸಿ ಬೋರ್ಡ್ ಪರೀಕ್ಷೆಗೆ ಹಾಜರಾಗಬೇಕಿತ್ತು. ಈ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಪಾಸಾಗಲು ಬಯಸಿದ್ದ ಆಕೆ ತನ್ನ ಬಗ್ಗೆಯೇ ಅನಿಶ್ಚಿತತೆ ಹೊಂದಿದ್ದಳು.
ಆದ್ದರಿಂದ, ಎಸ್‌ಎಸ್‌ಸಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಬರಬಹುದು ಎಂದು ಹೆದರಿ, ತನ್ನ ಶಿಕ್ಷಕ ನಿಲೇಶ್ ಬಾಲು ಪ್ರಧಾನೆ ಅವರಿಗೆ ಕೀಟನಾಷಕ ತಂದುಕೊಡುವಂತೆ ಕೋರಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಅದರಂತೆ ನಿಕೇಶ್ ಕೀಟನಾಶಕ ಬಾಟಲಿಯನ್ನು ತಂದು ಅದನ್ನು ಸಾನಿಕಾಗೆ ನೀಡಿದ್ದರು. ಫೆಬ್ರವರಿ 20 ರಂದು ಕೀಟನಾಶಕವನ್ನು ಸೇವಿಸಿ, ನಂತರ ಪ್ರಜ್ಞೆ ತಪ್ಪಿ ಬಿದ್ದಿದ್ದ ಸಾನಿಕಾನನ್ನು ಖಾಸಗಿ ಆಸ್ಪತ್ರೆಗೆ ದಾಖಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಫೆಬ್ರವರಿ 25 ರಂದು ಆಸ್ಪತ್ರೆಯಲ್ಲೇ ಸಾವನ್ನಪ್ಪಿದ್ದಾಳೆ.
ಪೊಲೀಸರು ತನಿಖೆ ನಡೆಸುವ ವೇಳೆ, ಅಪರಾಧ ಒಪ್ಪಿಕೊಂಡ ಶಿಕ್ಷಕ ನಿಕೇಶನನ್ನು ಗುರುವಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.