ಕಬ್ಬಿಗೆ 3300,ರೂ,ಗಳ ದರ ನಿಗದಿ: ಸಂಭ್ರಮಾಚರಣೆ
Sugarcane price fixed at Rs 3300: Celebrations
ಜಮಖಂಡಿ 08: ತಾಲೂಕಿನ ಚಿಕ್ಕಲಕಿ ಕ್ರಾಸ್‌ನಲ್ಲಿ ಸತತ ಮೂರು ದಿನಗಳ ಕಾಲ ಅಹೋರಾತ್ರಿ ಧರಣೆ ನಡೆಸಿದ ರೈತ ಸಂಘ, ಕಬ್ಬು ಬೆಳಗಾರರ ಸಂಘಟನೆ ಹೋರಾಟಕ್ಕೆ ಸರಕಾರ 3300,ರೂ,ಗಳ ದರ ನಿಗದಿ ಘೋಷಣೆ ಮಾಡಿದ ಹಿನ್ನಲೆಯಲ್ಲಿ ರೈತರು ಪಟ್ಟಾಕಿ ಸಿಡಿಸಿ. ಗುಲಾಲ ಎರಚಿಕೊಂಡು ಸಂಭ್ರಮಾಚರಣೆಯನ್ನು ಆಚರಿಸಿದರು.
ರೈತರ ಹೋರಾಟಕ್ಕೆ ಸರಕಾರ ಸ್ಪಂದನೆ ನೀಡಿದೆ. ಈ ಭಾಗದ ರೈತರು ಹೆಚ್ಚಾಗಿ ಕಬ್ಬನ್ನು ಬೆಳೆಯುತ್ತಾರೆ. ಗುರ್ಲಾಪೂರ ಕ್ರಾಸ್‌ನಲ್ಲಿ ಮತ್ತು ಚಿಕ್ಕಲಕಿ ಕ್ರಾಸ್‌ನಲ್ಲಿ ನಡೆಸಿದ ರೈತರ ಹೋರಾಟಕ್ಕೆ ಜಯ ಸಿಕ್ಕಿದೆ. ನಮ್ಮ ಭಾಗದ ರೈತರು ಯಾವುದೇ ಅಹಿತಕರ ಘಟನೆಯಾಗದಂತೆ ನಿರಂತರವಾಗಿ ಹೋರಾಟವನ್ನು ಮಾಡಲಾಯಿತು. ಅದಕ್ಕೆ ಕಂದಾಯ ಇಲಾಖೆ, ಪೋಲಿಸ್ ಇಲಾಖೆಯವರು ಬಹಳ ಸಹಕಾರವನ್ನು ನೀಡಿದ್ದಾರೆ. ಹಾಗೂ ವಿವಿಧ ಸಂಘಟನೆಗಳು, ಮಠಾಧೀಶರುಗಳು ಸಹ ನಮ್ಮಗೆ ಬೆಂಬಲ ನೀಡಿ. ನಮ್ಮ ಜೊತೆಗೆ ಕೈ ಜೋಡಿಸಿದ್ದಾರೆ. ಪ್ರತಿ ದಿನದ ಹೋರಾಟದ ಬಗ್ಗೆ ಪತ್ರಿಕೆಗಳಲ್ಲಿ ಸುದ್ದಿಯನ್ನು ಪ್ರಸಾರ ಮಾಡಿ. ಸರಕಾರದ ಕಣ್ಣು ತೆರೆಸುವ ಕೆಲಸವನ್ನು ಪತ್ರಕರ್ತರು ಮಾಡಿದ್ದಾರೆ. ಅವರ ಬೆಂಬಲ ಸಹ ನಮ್ಮಗೆ ದೊರೆಕಿದೆ. ಹೀಗಾಗಿ ರೈತರ ಹೋರಾಟಕ್ಕೆ ಸ್ಫಂದನೆ ನೀಡಿದ ಸರಕಾರಕ್ಕೆ ಧ್ಯನವಾದಗಳು ಎಂದು ಹೋರಾಟದಲ್ಲಿ ಭಾಗಿಯಾಗಿದ ರೈತರು ಸಂತಸವನ್ನು ಹಂಚಿಕೊಂಡರು.
ಹೋರಾಟದ ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ ಅನೀಲ ಬಡಿಗೇರ, ಸಿಪಿಐ ಮಲ್ಲಪ್ಪ ಮಡ್ಡಿ ಅವರು, ರೈತರ ಹೋರಾಟವನ್ನು ಹಿಂಪಡೆಯಲು ಮನವಿ ಮಾಡಿದರು. ಸರಕಾರದ ಆದೇಶವನ್ನು ರೈತರು ಸ್ವೀಕರಿಸಿ. ನಮ್ಮ ತಾಲೂಕಿನಲ್ಲಿ ಯಾವುದೇ ಅಹಿತಕರ ಘಟನೆಗೆಳು ನಡೆಯದಂತೆ ರೈತರು ಹೋರಾಟವನ್ನು ಮಾಡಿದರು. ಅದಕ್ಕೆ ಪೋಲಿಸ್ ಇಲಾಖೆಯು ಸಹ ಕಾರ್ಯನಿರ್ವಹಿಸಿದೆ. ಹೀಗೆ ಅಧಿಕಾರಿಗಳಿಗೆ ರೈತರು ಸ್ಪಂದನೆ ನೀಡಿಕ್ಕೆ ಎಲ್ಲ ರೈತರಿಗೆ ಅಭಿನಂದನೆಗಳು ಎಂದು ತಹಶೀಲ್ದಾರ ಅನೀಲ ಬಡಿಗೇರ, ಸಿಪಿಐ ಮಲ್ಲಪ್ಪ ಮಡ್ಡಿ ತಿಳಿಸಿದರು. ಚಿಕ್ಕಲಕಿ ಕ್ರಾಸ್‌ನಲ್ಲಿ ಸಾವಿರಾರೂ ರೈತರು ಪಟಾಕಿಗಳನ್ನು ಸಿಡಿಸಿ, ಒಬ್ಬರಿಗೊಬ್ಬರು ಗುಲಾಲ ಎರಚಿಕೊಂಡು ಸಂಭ್ರಮಾಚರಣೆಯನ್ನು ಮೆರೆದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 