ಕಬ್ಬು ಬೆಳೆ ವಿಚಾರ ಸಂಕಿರಣ, ಜವಾರಿ ದನಗಳ ಭವ್ಯ ಪ್ರದರ್ಶನ
Sugarcane crop symposium, grand exhibition of Javari cattle
ರಾಯಬಾಗ, 17 ; ಸೈನಿಕರು ದೇಶದ ಗಡಿ ರಕ್ಷಣೆ ಮಾಡಿದರೆ, ರೈತರು ದೇಶಕ್ಕೆ ಅನ್ನ ನೀಡಿ ರಾಷ್ಟ್ರವನ್ನು ಪೋಷಿಸುತ್ತಾರೆ ಎಂದು ಶಾಸಕ ಡಿ.ಎಮ್.ಐಹೊಳೆ ಹೇಳಿದರು.
ಶುಕ್ರವಾರ ತಾಲೂಕಿನ ಭಿರಡಿ ಗ್ರಾಮದಲ್ಲಿ ಹುಬ್ಬಳ್ಳಿಯ ಪಾರಾದೀಪ ಫಾಸ್ಫೇಟ್, ಜುವಾರಿ ಫಾರ್ಮಹಬ್ ಮತ್ತು ವೀರಭದ್ರೇಶ್ವರ ಫರ್ಟಿಲೈಜರ್ಸ್ ಇವರ ಸಹಯೋಗದಲ್ಲಿ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಕಬ್ಬು ಬೆಳೆ ವಿಚಾರ ಸಂಕಿರಣ ಹಾಗೂ ಜವಾರಿ (ಖಿಲಾರಿ) ದನಗಳ ಭವ್ಯ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಅವರು, ರೈತರು ಆಧುನಿಕ ಯಂತ್ರೋಪಕರಣದಿಂದ ಸಾಂಪ್ರದಾಯಿಕ ಕೃಷಿ ಮರೆಯುವುದರಿಂದ ರೈತರ ಮನೆಗಳಲ್ಲಿ ಹಸು, ದನ ಕರುಗಳು ಮಾಯವಾಗುತ್ತಿರುವುದು ಖೇದಕರ ವಿಷಯವಾಗಿದೆ ಎಂದರು.
ರೈತರು ತಮ್ಮ ಉಪ ಕಸುಬುದಾರಿಕೆಯಾಗಿ ಹೈನುಗಾರಿಕೆ ಮಾಡಬೇಕೆಂದರು. ಕಬ್ಬು ಬೆಳೆ ವಿಷಯ ತಜ್ಞ, ಕೃಷಿ ರತ್ನ ಪ್ರಶಸ್ತಿ ಪುರಸ್ಕೃತ ಡಾ.ಸಂಜೀವ ಮಾನೆ ಮಾತನಾಡಿ, ರೈತರು ಭೂಮಿಯನ್ನು ಚೆನ್ನಾಗಿ ಹದಗೊಳಿಸಿ, ಬೀಜೋಪಚಾರ ಮಾಡಿ ಬಿತ್ತನೆ ಮಾಡಬೇಕು. ಸೂಕ್ಷ್ಮ ಪೋಷಕಾಂಶಗಳನ್ನು ಸಮತೋಲನ ಪ್ರಮಾಣದಲ್ಲಿ ಬಳಸಬೇಕು. ಸಾವಯವ ಗೊಬ್ಬರ ಹೆಚ್ಚಿನ ಪ್ರಮಾಣದಲ್ಲಿ ಉಪಯೋಗಿಸಬೇಕೆಂದು ಕರೆ ನೀಡಿದರು.ಬೆಂಗಳೂರು ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ವಿಜ್ಞಾನಿ ಡಾ.ಪ್ರವೀಣ ರಣದೇವ, ಮಹಾದೇವ ಬೋರಗಾಂವೆ, ಶ್ರೀಧರ ಕುಡಚೆ, ಗಣೇಶ ಹೆಗಡೆ, ಸಿದ್ರಾಮ ರೆಡ್ಡಿ, ಎಚ್.ಎಮ್.ಮಹೇಶ್ವರ, ಶರಣಬಸು ಕೆಂಭಾವಿ, ಗಜರಾಜ ಭಾಂಡೇಕರ, ಮಂಜುನಾಥ ಕಳಸನ್ನವರ, ಮುರುಗೇಶ ನಿಶಾನದಾರ, ಭಯ್ಯಾ ಸರಕಾರ, ಶಂಕರ ಗಡಕರಿ, ಭೀಮಪ್ಪ ನಿಡವಣಿ, ಕೆಂಪಣ್ಣ ಮೈಶಾಳೆ ಹಾಗೂ ರೈತರು ಇದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 