ಸಿಂದಗಿಯಲ್ಲಿ ಬಿಜೆಪಿಯಿಂದ ನಡೆಸುತ್ತಿರುವ ಬರ ಅಧ್ಯಯನದಲ್ಲಿ ವಿಧಾನ ಪರಿಷತ್ತ ಮುಖ್ಯ

ಸಿಂದಗಿಯಲ್ಲಿ ಬಿಜೆಪಿಯಿಂದ ನಡೆಸುತ್ತಿರುವ ಬರ ಅಧ್ಯಯನದಲ್ಲಿ ವಿಧಾನ ಪರಿಷತ್ತ ಮುಖ್ಯ The drought study being conducted by the BJP in Sindagi is significant for the Legislative Council

ಲೋಕದರ್ಶನ ವರದಿ 

ಸಿಂದಗಿ 31 : ರೈತರು ಬಿತ್ತನೆ ಮಾಡಿದ ಹೋಲಗಳಿಗೆ ಸಕಾಲಕ್ಕೆ ಮಳೆ ಬಾರದೇ ರೈತರು ಸಂಕಷ್ಠ ಎದುರಿಸುತ್ತಿದ್ದಾರೆ. ಸರಕಾರ ರೈತರ ನೆರವಿಗೆ ಬರುತ್ತಿಲ್ಲ ರೈತರ ಕೈಹಿಡಿಯುತ್ತಿಲ್ಲ. ಈಗಾಗಲೇ ರಾಜ್ಯವನ್ನು ಬರಗಾಲ ಪೀಡೀತ ಪ್ರದೇಶವೆಂದು ಘೋಷಣೆ ಮಾಡಬೇಕಾಗಿತ್ತು ಆದರೆ  ರೈತರ ಸಂಕಷ್ಠ ಅದ್ಯಯನ ಮಾಡುತ್ತಿದ್ದರೆ ರಾಜ್ಯದ ಎಲ್ಲ 13 ಮಂತ್ರಿಗಳು 40 ಶಾಸಕರು ದೇಹಲಿಯಲ್ಲಿ ಜಂಡಾ ಹೂಡಿದ್ದಾರೆ.  ಎಂತಹ ದುರಂತವೆಂದರೆ ರೈತರ ಗೋಳು ಕೇಳುವವರಿಲ್ಲ ಎಂದು ವಿಧಾನ ಪರಿಷತ್ತ ಮುಖ್ಯ ಸಚಿತೇಕ ಎನ್‌.ರವಿಕುಮಾರ ಕಿಡಿ ಕಾರಿದರು. ನಗರದ ಹೊರವಲಯದ ಕಲಕೇರಿ ಬೈಪಾಸ್‌ನಲ್ಲಿ ಬಿಜೆಪಿ ರಾಜ್ಯಾದ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಆದೇಶದ ಮೆರೆಗೆ ಸಿಂದಗಿಗೆ ಆಗಮಿಸಿದ ಬರ ಅಧ್ಯಯನ ತಂಡದ ಮುಖ್ಯಸ್ಥರು ನಗರದ ವಿಜಯಕುಮಾರ ಪಟ್ಟಣಶೆಟ್ಟಿ ಅವರ ಹೊಲದಲ್ಲಿರುವ ಹತ್ತಿ ಬೆಳೆಯನ್ನು  ವಿಕ್ಷಿಸಿ ಮಾತನಾಡಿ, ಕಳೇದ 2 ತಿಂಗಳ ಹೀಂದೆ ಮಳೆಯಾಗಿದ್ದರಿಂದ ರೈತರ ಹೊಲಗಳಲಲಿ ಬಿತ್ತನೆ ಮಾಡಿದ್ದಾರೆ.

ಅಲ್ಲಿಮದ ಇಲ್ಲಿಯವರೆಗೆ ಮಳೆಯಾಗಿಲ್ಲ ರೈತರು ಸಂಕಷ್ಠದಲ್ಲಿದ್ದಾರೆ ಆ ಕಾರಣಕ್ಕೆ ಬರ ಅದ್ಯಯನ ಮಾಡಬೇಕೆಂದು ಭಾರತಿಯ ಜನತಾ ಪಕ್ಷದಿಂದ ರಾಜ್ಯದಲ್ಲಿ 6 ತಂಡಗಳನ್ನು ರಚಿಸಿಲಾಗಿದೆ ಮುದ್ದೆಬಿಹಾಳದಿಂದ ಬರ ಅದ್ಯಯನ ಮಾಡುತ್ತ ಕುಂಟೋಜಿ, ಮಿಣಜಗಿ, ಹಂದಿಗನೂರ, ಬನ್ನೇಟ್ಟಿ ಪಿಎ, ಸಿಂದಗಿಯಲ್ಲಿ ವಿಕ್ಷಣೆ ಮಾಡಿದ್ದು ದಾರಿಯುದ್ಧಕ್ಕೂ ಹೊಲಗಳಲ್ಲಿ ಬೆಳೆದ ಬೆಳೆಗಳೆಲ್ಲ ಹಾನಿಯಾಗಿ ಖಾಲಿ ಖಾಲಿಯಾಗಿವೆ. ಈ ರೀತಿಯ ಬರಗಾಲ ನಾವೆಂದು ನೋಡಿರಲ್ಲಿಲ್ಲ. ರೈತರು ಬಹಳ ಕಷ್ಠದಲ್ಲಿದ್ದಾರೆ ಆ ಕಾರಣಕ್ಕೆ  ಒಂದು ಹಕ್ಟೇರಿಗೆ ರೂ.1 ಲಕ್ಷ ಪರಿಹಾರ ನೀಡಬೇಕು ಅಲ್ಲದೆ ಬಿತ್ತನೆ ಮಾಡುವುದಕ್ಕೆ ಮುಂಗಡವಾಗಿ ರೂ.25 ಸಾವಿರ ಪರಿಹಾರ ನೀಡಬೇಕು ಮತ್ತು ಬರರಾಜ್ಯ ಎಂದು ಘೋಷಣೆ ಮಾಡಬೇಕು ಅವರಿಗೆ ಪರಿಹಾರ ನೀಡುವವರೆಗೂ ಸದನ ನಡೆಸೋಕೆ ಬಿಡುವುದಿಲ್ಲ ಎಂದು ಆಗ್ರಹಿಸಿದರು. 

ಬೆಳೆ ವಿಮೆ ಕಟ್ಟಿಲಿಕ್ಕೆ ರೈತರ ಹತ್ತಿರ ದುಡ್ಡಿಲ್ಲ ಅದಕ್ಕೆ ಸರಕಾರನೇ ಬೆಳೆ ವಿಮೆ ಕಟ್ಟಬೇಕು ಮತ್ತು ಬೆಳೆ ವಿಮೆ ತುಂಬಿಕೊಳ್ಳುತ್ತಿರುವ ಕಂಪನಿಗಳು  ಮೋಸ ಮಾಡುತ್ತಿವೆ ಅದಕ್ಕೆ ಸರಕಾರವೇ ಬೆಳೆ ವಿಮೆ ಕಟ್ಟಬೇಕು. ಮತ್ತು ರೈತರ  ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಮೊದಲ ಕಂತು ರೂ 25 ಸಾವಿರ ಬೆಳೆ ಪರಿಹಾರ ರೈತರ ಖಾತೆಗಳಿಗೆ ಹಣ ಹಾಕಬೇಕು. ರೈತರಿಗೆ ಮೋಸ ಮಾಡುತ್ತಿರುವ ವಿಮೆ ಕಂಪನಿಗಳ  ಹಾಗೂ ಸರಕಾರದ ವಿರುದ್ಧ ಹೋರಾಟ ಮಡಬೇಕಾಗುತ್ತದೆ ಎಂದು ಏಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾದ್ಯಕ್ಷ ಸುರೇಶ ಅಂಗಡಿ, ರಾಯಬಾಗ ಶಾಸಕ ದುರ್ಯೋದನ ಐಹೋಳಿ, ಮಾಜಿ ಶಾಸಕರಾದ ಎ.ಎಸ್‌.ಪಾಟೀಲ ನಡಹಳ್ಳಿ, ರಮೇಶ ಭೂಸನೂರ, ಸೋಮನಗೌಡ ಪಾಟೀಲ ಸಾಸನೂರ, ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ, ಗೋಪಾಲ ಕಾರಜೋಳ, ಜಿಲ್ಲಾ ಪ್ರಧನ ಕಾರ್ಯದರ್ಶಿ ಈರಣ್ಣ ರಾವೂರ, ಬಿಜೆಪಿ ಮಂಡಲ ಅದ್ಯಕ್ಷ ಸಂತೋಷ ಪಾಟೀಲ, ಸಿದ್ದು ಬುಳ್ಳಾ, ಮಹಿಳಾ ಘಟಕಾಧ್ಯಕ್ಷೆ ನೀಲಮ್ಮ ಯಡ್ರಾಮಿ, ನಗರ ಘಟಕ ಅದ್ಯಕ್ಷ ಪ್ರಕಾಶ ನಂದಿಕೋಲ, ಪೀರು ಕೇರೂರ, ಕಾಜು ಬಂಕಲಗಿ, ಸಿದ್ದರಾಮ ಆನಗೊಂಡ, ಪ್ರಶಾಂತ ಕದ್ದರಕಿ ಸೇರಿದಂತೆ ಅನೇಕರಿದ್ದರು.