ಪ್ರತಿ ಟನ್ ಕಬ್ಬಿಗೆ 3500 ದರ ಘೋಷಣೆ ಮಾಡಿ ಸಕ್ಕರೆ ಕಾರ್ಖಾನೆ ಪ್ರಾರಂಭಿಸಿ, ಇಲ್ಲ ಆಗ್ರಹಿಸಿ ಅಹೋರಾತ್ರಿ ಧರಣಿ
Sugar factory starts after announcing price of Rs 3500 per ton of sugarcane, protesting all night lo
ಲೋಕದರ್ಶನ ವರದಿ
ಪ್ರತಿ ಟನ್ ಕಬ್ಬಿಗೆ 3500 ದರ ಘೋಷಣೆ ಮಾಡಿ ಸಕ್ಕರೆ ಕಾರ್ಖಾನೆ ಪ್ರಾರಂಭಿಸಿ, ಇಲ್ಲ ಆಗ್ರಹಿಸಿ ಅಹೋರಾತ್ರಿ ಧರಣಿ
ವಿಜಯಪುರ, 02 : ಎಫ್.ಆರ್.ಫಿ ದರವನ್ನು ಯಾವುದೇ ಕಾರಣಕ್ಕೂ ಕಬ್ಬು ಬೆಳೆಗಾರರು ಒಪ್ಪುವುದಿಲ್ಲ, ಇಂದಿನ ಆಧುನಿಕ ಕೃಷಿ ಕರ್ಚು ತುಂಬಾ ಹೆಚ್ಚು ಆಗಿದ್ದು, ಒಂದು ಎಕರೆಗೆ ಅಂದಾಜು 30 ಸಾವಿರ ನಷ್ಟ ಆಗುತ್ತಿದ್ದು ಆದ್ದರಿಂದ ಕಬ್ಬಿನಿಂದ ಆಗುವ ಉಪ ಉತ್ಪನ್ನಗಳಲ್ಲಿ ರೈತರನ್ನು ಪರಿಗಣನೆಗೆ ತೆಗೆದುಕೊಂಡು ಒಂದಿಷ್ಟು ಲಾಭ ಕೊಡಬೇಕು ಒಟ್ಟಾರೆಯಾಗಿ ಪ್ರತಿ ಟನ್ ಕಬ್ಬಿಗೆ 3500 ಬೆಲೆ ಕೊಡಲೇಬೇಕು ಇಲ್ಲ ಆಹೋರಾತ್ರಿ ಹೋರಾಟ ಮಾಡಲಾಗುವುದು ಎಂದು ಜಿಲ್ಲಾಧ್ಯಕ್ಷರಾದ ಸಂಗಮೇಶ ಸಗರ ಅವರು ಪತ್ರಿಕಾ ಘೋಷ್ಠಿ ಉದ್ದೇಶಿಸಿ ಮಾತನಾಡಿದರು.
ನಗರದ ಖಾಸಗಿ ಹೋಟೆಲಿನಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಬ್ಬು ಬೆಳೆಗಾರರು ಹಾಗೂ ಜಿಲ್ಲಾ ರೈತ ಸಂಘಗಳ ಒಕ್ಕೂಟ ಆಯೋಜಿಸಿರುವ ಪತ್ರಿಕಾ ಘೋಷ್ಠಿಯಲ್ಲಿ ಮಾತನಾಡುತಾ ಜಿಲ್ಲಾಧಿಕಾರಿಗಳು ಅಕ್ಟೊಬರ್ 25 ರ ಒಳಗೆ ಸಕ್ಕರೆ ಕಾರ್ಖಾನೆ ಮಾಲಿಕರು ಅಧಿಕೃತವಾಗಿ ಎಫ.ಆರ್.ಪಿ ಹೊರತು ಪಡೆಸಿ ಘೋಷಣೆ ಮಾಡಬೇಕು ಕಬ್ಬು ಬೆಳೆಗಾರರ ಬೇಡಿಕೆ 3500 ಇದೆ ಎಂದು ಹೇಳಿದ್ದರು ಆದರೆ ಮಾತಿಗೆ ತಪ್ಪಿದ ಜಿಲ್ಲಾಧಿಕಾರಿಗಳು ನವೆಂಬರ 1 ಕಳೆದರು ಸಭೆ ಕರೆಯದಿರುವುದರಿಂದ ಮಂಗಳವಾರದಂದು ನಗರದ ಗಾಂದಿ ವೃತ್ತದಿಂದ ಜಿಲ್ಲಾಧಿಕಾರಿಗಳ ಕಛೇರಿ ವರೆಗೆ ಬೃಹತ್ ಮೆರವಣಿಗೆ ಮೂಲಕ ಆಗಮಿಸಿ ಜಿಲ್ಲಾಧಿಕಾರಿಗಳ ಕಚೇರಿ ಮುಂದುಗಡೆ ಅನಿರ್ಧಿಷ್ಟ ಹಾಗೂ ಅಹೋರಾತ್ರಿ ಹೋರಾಟ ಮಾಡಲಾಗುವುದು ಎಂದರು.
ಈ ಹೋರಾಟವು ಜಾತ್ಯಾತೀತ, ಪಕ್ಷಾತೀತ ಇದ್ದು ಈ ನಾಡಿನ ಸಮಸ್ತ ಮಠಾಧಿಶರು, ಪ್ರಗತಿಪರ ಸಂಘಟನೆ, ಮಹಿಳಾ, ಕಾರ್ಮಿಕ, ವಿದ್ಯಾರ್ಥಿ, ಯುವ ಜನ ಸೇರಿದಂತೆ ಜಿಲ್ಲೆಯ ಎಲ್ಲಾ ಸಂಘಟನೆಯ ಮುಖಂಡರು ಹಾಗೂ ರೈತರಿಗೆ ಮುಕ್ತವಾಗಿ ಅವ್ಹಾನ ನೀಡಿ ಎಲ್ಲರೂ ಸೇರಿ ರೈತರೊಂದಿಗೆ ನಾವೆಲ್ಲರೂ ಗಟ್ಟಿ ಹೋರಾಟಕ್ಕೆ ಕರೆ ನೀಡುತ್ತಿದ್ದೆವೆ ಎಂದರು.
ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ರಾಹುಲ್ ಕುಬಕಡ್ಡಿ ಮಾತನಾಡುತ್ತಾ ಜಿಲ್ಲೆಯಲ್ಲಿಯ 10 ಸಕ್ಕರೆ ಕಾರ್ಖಾನೆಗಳಲ್ಲಿ ಪ್ರತಿ ವರ್ಷ ರೈತರನ್ನ ಸುಲಿಗೆ ಮಾಡುವುದು ತಪ್ಪುತಿಲ್ಲ, ಅಕ್ಕಪಕ್ಕದ ರಾಜ್ಯ ಹಾಗೂ ಜಿಲ್ಲೆಯಲ್ಲಿ ಒಂದು ಬೆಲೆಯಾದರೆ ನಮ್ಮ ಜಿಲ್ಲೆಯಲ್ಲಿ ಕಡಿಮೆ ಬೆಲೆ, ಯಾಕೆ ಈ ಇಬ್ಬಾಗ ನೀತಿ, ರೈತರಿಗೆ ಕಬ್ಬಿನ ದರದಲ್ಲಿ ಮೊಸ, ತೂಕದಲ್ಲಿ ಮೊಸ, ಇವುಗಳ ಜೊತೆಗೆ ಸರಿಯಾದ ಸಮಯಕ್ಕೆ ಹಣ ಬಾರದೇ ಮತ್ತಷ್ಟು ತೊಂದರೆ ಆಗುತ್ತಿದೆ ಕೂಡಲೇ 3500 ಬೆಲೆ ಘೋಷಣೆ ಮಾಡಬೇಕು ಎಂದರು
ರಾಜ್ಯ ಉಪಾಧ್ಯಕ್ಷರಾದ ಕಲ್ಲು ಸೊನ್ನದ ಹಾಗೂ ಕೋಲಾರ ತಾಲೂಕಾ ಅಧ್ಯಕ್ಷರಾದ ಸೋಮು ಬಿರಾದಾರ ಮಾತನಾಡುತ್ತಾ ಒಂದು ಟನ್ ಕಬ್ಬಿನಿಂದ ಸಕ್ಕರೆ ಜೊತೆಗೆೆ ಮಿಥೆನಾಲ್, ಸ್ಪಿರಿಟ್, ಮೊಲ್ಯಾಸಿಸ್, ಬಗಾಸ್, ವೆಸ್ಟ್ ಸೇರಿದಂತೆ ಇತರೆ ಉಪ ಉತ್ಪನ್ನಗಳನ್ನು ಮಾಡಿ ಲಕ್ಷ ಲಕ್ಷ ಲಾಭ ಗಳಿಸುತ್ತಿರುವ ಸಕ್ಕರೆ ಕಾರ್ಖಾನೆ ಮಾಲಿಕರು ಹಾಗೂ ಸರಕಾರ ರೈತರನ್ನ ಮಾತ್ರ ದೀವಾಳಿ ಮಾಡಲು ಹೊರಟಿದೆ ಯೋಗ್ಯ ಬೆಲೆ ಘೋಷಣೆ ಮಾಡಬೇಕು ಇಲ್ಲ ರೈತ ಹೋರಾಟಕ್ಕೆ ಸಿದ್ದರಾಗಬೇಕು ಎಂದರು
ನಿಡಗುಂದಿ ತಾಲೂಕಾ ಅಧ್ಯಕ್ಷರಾದ ಸಿತಪ್ಪ ಗಣಿ ಮಾತನಾಡುತ್ತಾ ಜಿಲ್ಲೆಯ ಎಲ್ಲಾ ಸಕ್ಕರೆ ಕಾರ್ಖಾನೆಗಳ ಮುಂದೆ ಸರಕಾರಿ ತೂಕದ ಯಂತ್ರವನ್ನು ಅಳವಡಿಸಿ ಕಬ್ಬಿನ ತೂಕದಲ್ಲಿ ಆಗುತ್ತಿರುವ ಮೊಸವನ್ನು ತಪ್ಪಿಸಬೇಕು, ಕಟಾವು ಹಾಗೂ ಸಗಾಣೆಕೆಯನ್ನು 12 ಗಂಟೆಗಳಲ್ಲಿ ಮುಗಿಸಬೇಕು. ಕಬ್ಬಿನ ಬಾಕಿ ಮೊತ್ತವನ್ನು 14 ದಿನಗಳ ಒಳಗೆ ಕೊಡಬೇಕು, ಇಲ್ಲ 15ಅ ಬಡ್ಡಿ ಹಾಕಿ ಕೊಡಬೇಕು, ಸಿ.ಎಸ್.ಆರ್ ಹಣವನ್ನು ರೈತರ ಅಭಿವೃದ್ಧಿಗೆ ಹಾಗೂ ತರಬೇತಿಗೆ ಹಾಗೂ ರೈತರಿಗಾಗಿ ಬಳಸಬೇಕು ಎಂದರು.
ಈ ಮೇಲಿನ ಎಲ್ಲಾ ಬೇಡಿಕೆಗಳು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು, ಕಬ್ಬು ಬೆಳೆಗಾರರು ಹಾಗೂ ಜಿಲ್ಲೆಯ ಎಲ್ಲಾ ರೈತ, ಕಾರ್ಮಿಕ, ವಿದ್ಯಾಥಿ, ಮಹಿಳಾ, ಪ್ರಗತಿಪರ ಸಂಘಟನೆಗಳ ವತಿಯಿಂದ ಮಂಗಳವಾರ ನಗರದ ಗಾಂಧಿವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಗೆ ಬೃಹತ್ ರಾ್ಯಲಿ ಮುಖಾಂತರ ಆಗಮಿಸಿ ಬೇಡಿಕೆ ಈಡೆರುವವರೆಗೂ ಹೋರಾಟ ಮಾಡಲಾಗುವುದು, ಅಲ್ಲಿಯವರೆಗೆ ಯಾವುದೇ ಕಾರ್ಖಾನೆಗಳು ಪ್ರಾರಂಭಿಸುವಂತಿಲ್ಲ. ಎಂದರು.
ಈ ವೇಳೆ ಜಿಲ್ಲಾ ಪ್ರಧಾನ ಕಾರ್ಯದಶಿಗಳಾದ ರಾಮನಗೌಡ ಪಾಟೀಲ, ವಿಜಯಪುರ ಜಿಲ್ಲಾ ಕಾರ್ಯಾಧ್ಯಕ್ಷರು ಪ್ರಕಾಶ ತೇಲಿ ಜಿಲ್ಲಾ ಸಂಚಾಲಕರಾದ ಸಂಗಪ್ಪ ಟಕ್ಕೆ, ಜಕರಾಯ ಪೂಜಾರಿ , ಜಿಲ್ಲಾ ಕಾರ್ಯದರ್ಶಿಗಳಾದ ಮಹಾದೇವ ಬನಸೋಡೆ, ನಗರ ಘಟಕದ ಅಧ್ಯಕ್ಷರಾದ ಸಚಿನ ಸವನಳ್ಳಿ, ವಿಜಯಪುರ ತಾಲೂಕಾ ಅಧ್ಯಕ್ಷರಾದ ಅನಮೇಶ ಜಮಖಂಡಿ
ದೇವರ ಹಿಪ್ಪರಗಿ ತಾಲೂಕಾ ಅಧ್ಯಕ್ಷರಾದ ಈರ್ಪ ಕುಳೆಕುಮಟಗಿ, ಕೋಲಾರ ತಾಲೂಕಾ ಅಧ್ಯಕ್ಷರು ,ಸೋಮು ಬಿರಾದಾರ, ತಿಕೋಟಾ ತಾಲೂಕಾ ಅಧ್ಯಕ್ಷರು ಸಾತಲಿಂಗಯ್ಯ ಸಾಲಿಮಠ - ಬಬಲೇಶ್ವರ ತಾಲೂಕಾ ಅಧ್ಯಕ್ಷರು, ಮುಕಬುಲ್ ಕೀಜಿ, ,ತಿಕೋಟಾ ತಾಲೂಕಾ ಅಧ್ಯಕ್ಷರು ಸಾತಲಿಂಗಯ್ಯ ಸಾಲಿಮಠ, ಬಸವನ ಬಾಗೇವಾಡಿ ತಾಲೂಕಾ, ಅಧ್ಯಕ್ಷರು ಮುದಕಣ್ಣ ಹೋರ್ತಿ , ತಿಕೋಟಾ ತಾಲೂಕಾ ಉಪಾಧ್ಯಕ್ಷರು ಶಾನುರ ನಂದರಗಿ - ಆಹೇರಿ ಗ್ರಾಮ ಘಟಕದ ಅಧ್ಯಕ್ಷರಾದ ಶಂಕರಗೌಡ ಬಿರಾದಾರ , ಜಂಬಗಿ ಗೌರವಾಧ್ಯಕ್ಷರಾದ ಬಸವರಾಜ ಮಸೂತಿ ಸೇರಿದಮತೆ ಇತರರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 